ತನ್ನದೇ ಮನೆಗೆ ಕನ್ನ ಹಾಕಿ, ಚಿನ್ನಾಭರಣ ದೋಚಿ ಪರಾರಿಯಾದ ತಮಿಳು ನಟಿ!

ಕಿರುತೆರೆ ನಟಿಯೊಬ್ಬರು ಹಣದ ಆಸೆಗಾಗಿ ತನ್ನ ಗಂಡನ ಮನೆಗೇ ಕನ್ನ ಹಾಕಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಕಿರುತೆರೆ ನಟಿ ಸುಚಿತ್ರಾ ಎಂಬಾಕೆ ತನ್ನದೇ ಮನೆಯಲ್ಲಿ ಕನ್ನಹಾಕಿದ್ದು, ಇದಕ್ಕೆ ಆಕೆಯ ಪತಿ ಮಣಿಕಂಠನ್‌ ಕೂಡ ಸಾಥ್‌ ಕೊಟ್ಟಿದ್ದಾನೆ.

ನಟಿ ಸುಚಿತ್ರಾ ಇದಾಗಲೇ ಹಲವಾರು ಕಿರುತೆರೆಗಳಲ್ಲಿ ನಟಿಸಿದ್ದಾರೆ. ಆದರೆ ಲಾಕ್​ಡೌನ್​ನಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿದ್ದರಿಂದ ಕೆಲಸವಿರಲಿಲ್ಲ. ಲಾಕ್​ಡೌನ್​ ಶುರುವಾದ ಆರಂಭದಲ್ಲಿ ಕೆಲಸ ಅರಸಿ ಬಂದಿದ್ದ ಮಣಿಕಂಠನ್​, ಕಿರುತೆರೆ ನಟಿಯರಿಗೆ ಪಿಕ್​ಅಪ್​, ಡ್ರಾಪ್​ ಮಾಡುವ ಕ್ಯಾಬ್​ ಚಾಲಕನಾಗಿ ಸೇರಿಕೊಂಡಿದ್ದಾನೆ. ಆ ಸಮಯದಲ್ಲಿ ಸುಚಿತ್ರಾಳ ಪರಿಚಯವಾಗಿದೆ. ಪರಿಚಯ ಪ್ರೇಮಕ್ಕೆ ತಿರುಗಿ, ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದಾರೆ.

ಅಂತೂ ಮಣಿಕಂಠನ್​ ಮನೆಯವರು ಸುಚಿತ್ರಾಳನ್ನು ಸೊಸೆಯಾಗಿ ಒಪ್ಪಿಕೊಂಡು ಮನೆತುಂಬಿಸಿಕೊಂಡಿದ್ದಾರೆ. ಈ ವೇಳೆಗಾಗಲೇ ಕಿರುತೆರೆ ಶೂಟಿಂಗ್​ ನಿಂತು, ಸುಚಿತ್ರಾಳಿಗೂ ಕೆಲಸವಿರಲಿಲ್ಲ, ಮಣಿಕಂಠನ್​ಗೂ ಕೆಲಸವಿರಲಿಲ್ಲ. ಇಬ್ಬರ ಕೈಯಲ್ಲೂ ಹಣವಿರಲಿಲ್ಲ. ಆದರೆ ಮನೆಯಲ್ಲಿ ಸುಮ್ಮನೇ ಇರಲು ಇವರಿಗೆ ಆಗಲಿಲ್ಲ.

ಗಂಡನ ಮನೆಯಲ್ಲಿರುವ ಚಿನ್ನಾಭರಣಗಳ ಮೇಲೆ ಕಣ್ಣುಹಾಕಿದ್ದ ಸುಚಿತ್ರಾ ಅವುಗಳನ್ನು ಕದ್ದು ಪರಾರಿಯಾಗಿ ಬೇರೆ ಕಡೆ ನೆಲೆಸಲು ಗಂಡನನ್ನು ಒಪ್ಪಿಸಿದ್ದಾಳೆ. ಈ ಹಣದಿಂದ ಯೂಟ್ಯೂಬ್​ ಚಾನೆಲ್​ ನಡೆಸಿ ಅದರಿಂದ ಹಣ ಗಳಿಸಬಹುದು ಎಂದು ಗಂಡನ ತಲೆಯನ್ನು ತಿರುಗಿಸಿದ್ದಾಳೆ. ಅದಕ್ಕಾಗಿ ಗಂಡ-ಹೆಂಡತಿ ತಮ್ಮದೇ ಮನೆಯನ್ನು ದೋಚುವ ಪ್ಲ್ಯಾನ್​ ಮಾಡಿದ್ದಾರೆ. ಪ್ಲ್ಯಾನ್​ ಮಾಡಿದಂತೆ ಸುಚಿತ್ರಾ ಮೊದಲು ತನಗೆ ಕೆಲಸವಿದೆ ಎಂದು ಕೇಳಿ ಮೊದಲೇ ಮನೆಯಿಂದ ಚೆನ್ನೈಗೆ ಹೊರಟಿದ್ದಾಳೆ. ಮನೆಯಲ್ಲಿ ಆಭರಣ ಕದಿಯುವ ಸಲುವಾಗಿ ಗಂಡ ಮನೆಯಲ್ಲಿಯೇ ಇದದಾನೆ. ನಂತರ ಆತ ಮನೆಯಲ್ಲಿದ್ದ ಎಲ್ಲಾ ಆಭರಣ, ಹಣವನ್ನು ತೆಗೆದುಕೊಂಡು ಮನೆಯಿಂದ ಪರಾರಿಯಾಗಿದ್ದಾನೆ.

ಆಭರಣ ಕಾಣೆಯಾಗಿರುವುದಕ್ಕೆ ಕಂಗಾಲಾದ ಕುಟುಂಬಸ್ಥರು ಪೊಲೀಸ್​ ಕಂಪ್ಲೇಂಟ್​ ಕೊಟ್ಟಿದ್ದಾರೆ. ಇದು ಮಗ-ಸೊಸೆಯದ್ದೇ ಕೈವಾಡ ಎಂದು ತನಿಖೆ ವೇಳೆ ಪೊಲೀಸರಿಗೆ ತಿಳಿದಿದೆ. ಮಣಿಕಂಠನ್​ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ, ಆದರೆ ನಟಿ ಸುಚಿತ್ರಾ ಪೊಲೀಸರಿಂದ ಎಸ್ಕೇಪ್​ ಆಗಿ ತಲೆಮರೆಸಿಕೊಂಡಿದ್ದಾಳೆ. ಸದ್ಯ ಅವಳಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ.


Read Also: ರಾಜ್ಯ ಸಚಿವ ಸಂಪುಟದಿಂದ ನಾಲ್ವರಿಗೆ ಕೋಕ್‌? ನಿಷ್ಠರಿಗೆ ಮಣೆ ಹಾಕಲು ಬಿಎಸ್‌ವೈ ಹೊಸ ಪ್ಲಾನ್‌

Spread the love

Leave a Reply

Your email address will not be published. Required fields are marked *