12 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ; ಎರಡು ದಿನದಲ್ಲಿ 55 ಮಂದಿ ಬಂಧನ!

ಶ್ರೀಲಂಕಾ ನೌಕಾಪಡೆಯು 12 ಭಾರತೀಯ ಮೀನುಗಾರರನ್ನು ಬಂಧಿಸಿದೆ. ಭಾರತೀಯ ಮೀನುಗಾರರು ಶ್ರೀಲಂಕಾದ ಪ್ರಾದೇಶಿಕ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿಸಿದ್ದು, ಎರಡು ಮೀನುಗಾರಿಕೆ ಟ್ರಾಲರ್‌ಗಳನ್ನೂ ವಶಪಡಿಸಿಕೊಂಡಿದೆ. ಕಳೆದ ಎರಡು ದಿನಗಳಲ್ಲಿ ಬಂಧಿತ ಭಾರತೀಯರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಭಾನುವಾರ ಶ್ರೀಲಂಕಾದ ಮನ್ನಾರ್‌ನ ದಕ್ಷಿಣದ ಸಮುದ್ರದಲ್ಲಿ ಮೀನುಗಾರರನ್ನು ಬಂಧಿಸಲಾಗಿದೆ.

ಜಾಫ್ನಾದಲ್ಲಿನ ಡೆಲ್ಫ್ಟ್ ದ್ವೀಪದ ಆಗ್ನೇಯ ಸಮುದ್ರದಲ್ಲಿ ಶ್ರೀಲಂಕಾ ನೌಕಾಪಡೆಯು 43 ಭಾರತೀಯ ಮೀನುಗಾರರನ್ನು ಶನಿವಾರ ಬಂಧಿಸಿತ್ತು ಮತ್ತು ಆರು ಮೀನುಗಾರಿಕೆ ಟ್ರಾಲರ್‌ಗಳನ್ನು ವಶಪಡಿಸಿಕೊಂಡಿದೆ.

“ಶ್ರೀಲಂಕಾದ ಜಲಪ್ರದೇಶದಲ್ಲಿ ಭಾರತೀಯ ಮೀನುಗಾರಿಕಾ ಟ್ರಾಲರ್‌ಗಳು ಮೀನುಗಾರಿಕೆ ಮಾಡುವುದನ್ನು ತಡೆಯುವ ನೌಕಾಪಡೆಯ ಪ್ರಯತ್ನದ ಭಾಗವಾಗಿ ಉತ್ತರ ಮತ್ತು ಉತ್ತರ ಕೇಂದ್ರ ನೌಕಾ ಕಮಾಂಡ್‌ಗಳು ನಡೆಸಿದ ಕಾರ್ಯಾಚರಣೆಯಲ್ಲಿ ನೌಕಾಪಡೆಯು 8 ಭಾರತೀಯ ಮೀನುಗಾರಿಕಾ ಟ್ರಾಲರ್‌ಗಳು ಮತ್ತು 55 ಭಾರತೀಯ ಮೀನುಗಾರರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ” ಎಂದು ಲಂಕಾ ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.

COVID-19 ಪ್ರೋಟೋಕಾಲ್‌ಗಳಿಗೆ ಬದ್ಧವಾಗಿ ಕಾರ್ಯಾಚರಣೆಗಳನ್ನು ನಡೆಸಲಾಗಿದೆ ಎಂದೂ ಅದು ಹೇಳಿದೆ.

ಬಂಧಿತ ಭಾರತೀಯ ಮೀನುಗಾರರನ್ನು ಆಂಟಿಜೆನ್ ಪರೀಕ್ಷೆಗೆ ಒಳಪಡಿಸಿದ ನಂತರ ಕಾನೂನು ಕ್ರಮಕ್ಕಾಗಿ ಅವರನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಹಸ್ತಾಂತರಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಉಭಯ ದೇಶಗಳ ಮೀನುಗಾರರನ್ನು ಅಜಾಗರೂಕತೆಯಿಂದ ಪರಸ್ಪರರ ಜಲಪ್ರದೇಶದೊಳಗೆ ಪ್ರವೇಶಿಸಿದ ಕಾರಣಕ್ಕಾಗಿ ಆಗಾಗ್ಗೆ ಬಂಧಿಸಲಾಗುತ್ತದೆ. ದ್ವಿಪಕ್ಷೀಯ ಬಾಂಧವ್ಯದಲ್ಲಿ ಮೀನುಗಾರರ ಸಮಸ್ಯೆ ದೊಡ್ಡ ಕಿರಿಕಿರಿ ಉಂಟುಮಾಡುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮಾರುಕಟ್ಟೆಯಲ್ಲಿ ನಾಲ್ವರು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿ ವಿಕೃತಿ ಮೆರೆದ ದುಷ್ಕರ್ಮಿಗಳು; ಐವರ ಬಂಧನ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights