ಫ್ಯಾಕ್ಟ್‌ಚೆಕ್: ಅಸಾದುದ್ದೀನ್ ಓವೈಸಿ ಶ್ರೀಕೃಷ್ಣ ಭಜನೆ ಹಾಡಿದ್ದು ನಿಜವೇ?

ಅಸಾದುದ್ದೀನ್ ಓವೈಸಿಯ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ವೀಡಿಯೊವೊಂದರಲ್ಲಿ, ಅವರು ಕೃಷ್ಣ ಮತ್ತು ಸುದಾಮನ ಕುರಿತ ‘ಅರೆ ದ್ವಾರಪಾಲನ್’ ಭಕ್ತಿಗೀತೆಯನ್ನು ಹಾಡುತ್ತಿದ್ದಾರೆ. ಎರಡನೇ ವೀಡಿಯೊದಲ್ಲಿ, ಅವರು ದುರ್ಗಾ ದೇವಿಯ ಸ್ತೋತ್ರವನ್ನು ಹಾಡುತ್ತಿದ್ದಾರೆ.

ವೈರಲ್ ವೀಡಿಯೊವನ್ನು (ಆರ್ಕೈವ್ ಲಿಂಕ್) ಹಂಚಿಕೊಂಡಿರುವ ಫೇಸ್‌ಬುಕ್ ಬಳಕೆದಾರ ಪ್ರಕಾಶ್ ಸಿಂಗ್, “ಒವೈಸಿ ಭಜನೆಯ ಮಾಡಲು ಪ್ರಾರಂಭಿಸಿದ್ದಾರೆ” ಎಂದು ಶೀರ್ಷಿಕೆಯೊದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಸಭೆಯೊಂದರಲ್ಲಿ ಅಸಾದುದ್ದೀನ್ ಓವೈಸಿ ಶ್ರೀಕೃಷ್ಣನ ಸ್ತೋತ್ರವನ್ನು ಹಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೊಗಳನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ವೈರಲ್ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಅಸಾದುದ್ದೀನ್ ಓವೈಸಿಯು ಶ್ರೀಕೃಷ್ಣನ ಸ್ತೋತ್ರವನ್ನು ಹಾಡಿದ್ದಾರೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾದ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ನ್ಯೂಸ್ 18 ಉರ್ದುವಿನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಮೂಲ ವೀಡಿಯೊ ಲಭ್ಯವಾಗಿದೆ. ವೀಡಿಯೊವನ್ನು ಅಕ್ಟೋಬರ್ 26, 2022 ರಂದು ಹಂಚಿಕೊಳ್ಳಲಾಗಿದೆ. ನೀಡಿರುವ ಮಾಹಿತಿಯ ಪ್ರಕಾರ, ವೈರಲ್ ವೀಡಿಯೊ ಕರ್ನಾಟಕದ ವಿಜಯಾಪುರದಲ್ಲಿ ನಡೆದ ರ್ಯಾಲಿಗೆ ಸಂಬಂಧಿಸಿದೆ ಎಂದು ತಿಳಿಸು ಬಂದಿದೆ.

 

ವಿಜಯಪುರದ ಮುನ್ಸಿಪಲ್ ಚುನಾವಣೆಗೂ ಮುನ್ನ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಅಸಾದುದ್ದೀನ್ ಓವೈಸಿಯು ಆಗಮಿಸಿದ್ದರು, ಅವರು ಚುನಾವಣಾ ಭಾಷಣದ ವೇಳೆ ಮುಸ್ಲಿಂ ವಿರೋಧಿ ನಡೆಗಳ ಬಗ್ಗೆ ಮಾತನಾಡುವುದನ್ನು ಕೇಳಬಹುದು. ಈ ವೀಡಿಯೊದಲ್ಲಿ ಅವರು ಎಲ್ಲಿಯೂ ಭಜನೆ ಹಾಡನ್ನು ಹಾಡುವುದಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಆದರೆ ಅವರ ಭಾಷಣದ ವಿಡಿಯೋಗೆ ಭಜನೆಯ ಆಡಿಯೋವನ್ನು ಸೇರಿಸಲಾಗಿದೆ.

ಎರಡನೇ ವೀಡಿಯೊದ ಹಿಂದಿನ ನೈಜತೆಯನ್ನು ತಿಳಿಯಲು, ನಾವು ಸಂಬಂಧಿತ ಕೀವರ್ಡ್‌ಗಳೊಂದಿಗೆ Google ನಲ್ಲಿ ಸರ್ಚ್ ಮಾಡಿದಾಗ News18 ಉರ್ದುವಿನ ಅಧಿಕೃತ YouTube ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಮೂಲ ವೀಡಿಯೊವನ್ನು ಮತ್ತೊಮ್ಮೆ ಕಂಡುಕೊಂಡಿದ್ದೇವೆ. ವೀಡಿಯೊವನ್ನು ಅಕ್ಟೋಬರ್ 14, 2022 ರಂದು ಹಂಚಿಕೊಳ್ಳಲಾಗಿದೆ. ಮೂಲ ವೀಡಿಯೊದಲ್ಲಿ, ಅವರು ಶೇರ್ ಅನ್ನು ಪಠಿಸುತ್ತಿರುವುದನ್ನು ಕಾಣಬಹುದು. ಹಾಗಾಗಿ ಅವರು ಈಲ್ಲಿಯೂ ಭಜನೆ ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಸಾದುದ್ದೀನ್ ಓವೈಸಿ ‘ಭಜನೆ ಹಾಡುವ’ ಹಾಡುತ್ತಿರುವಂತೆ ಅವರ ಎರಡೂ ವೈರಲ್ ವೀಡಿಯೊಗಳನ್ನು ಎಡಿಟ್ ಮಾಡಲಾಗಿದೆ ಎಂದು ಕಂಡುಹಿಡಿದಿದೆ. ಮೊದಲ ವೀಡಿಯೊದಲ್ಲಿ, ಅವರು ಮುಸ್ಲಿಂ ವಿರೋಧಿ ಅಭಿಯಾನದ ಬಗ್ಗೆ ಭಾಷಣ ಮಾಡುತ್ತಿರುವುದು ಕಂಡುಬಂದಿದೆ, ಅದರ ಆಡಿಯೊವನ್ನು ಭಗವಾನ್ ಕೃಷ್ಣ ಭಜನೆ ಸೇರಿಸಿ ಎಡಿಟ್ ಮಾಡಲಾಗಿದೆ. ಹಾಗೆಯೇ, ಎರಡನೇ ವೀಡಿಯೊದಲ್ಲಿ, ಅವರು ಶೇರ್ ಅನ್ನು ಪಠಿಸುತ್ತಿರುವುದನ್ನು ಕಾಣಬಹುದು, ಅವರ ಆಡಿಯೊವನ್ನು ದುರ್ಗಾ ದೇವಿಯ ಭಜನೆಯೊಂದಿಗೆ ಬದಲಾಯಿಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ವಿಶ್ವಾಸ್‌ ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಬಾಲಕನೊಬ್ಬ ರಸ್ತೆ ಮಧ್ಯದಲ್ಲಿ ನಮಾಜ್ ಮಾಡುವ ದೃಶ್ಯ ಇದು ಪಾಕ್‌ನಲ್ಲಿ ನಡೆದ ಘಟನೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights