ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ : ಎಲ್ಲೆಡೆ ಬಿಗಿ ಪೊಲೀಸ್ ಬಂದೂಬಸ್ತ್

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಹಿನ್ನಲೆ ಅರಮನೆ ಹಾಗೂ ಮೆರವಣಿಗೆ ಮಾರ್ಗದಲ್ಲಿ ಪೊಲೀಸ್ ಬಂದೂಬಸ್ತ್ ಮಾಡಲಾಗಿದೆ.

ಇಡೀ ದಸರಾಗೆ 8407‌ ಮಂದಿ ಸಿಬ್ಬಂದಿ ನಿಯೋಜನೆ. ಮೈಸೂರು ನಗರದ 2978 ಪೊಲೀಸರು. ಹೊರ ಜಿಲ್ಲೆಗಳಿಂದ 4429 ಪೊಲೀಸರು. 1000 ಮಂದಿ ಹೋಂಗಾರ್ಡ್ ಸಿಬ್ಬಂದಿ ನಿಯೋಜನೆ. SP/DCP ಹುದ್ದೆಯ 14, ACP/DYSP ಹುದ್ದೆಯ 54,  PI/RPI ಹುದ್ದೆಯ 153,  PSI/RSI ಹುದ್ದೆಯ 336, ASI/ARSI ಹುದ್ದೆಯ 703, HC/PC ಹುದ್ದೆಯ 6147,  HG ಹುದ್ದೆಯ 1000 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಮೆರವಣಿಗೆ ಮಾರ್ಗದಲ್ಲಿ 212 ಸಿಸಿ ಕ್ಯಾಮಾರ ಅಳವಡಿಕೆ ಮಾಡಲಾಗಿದೆ. ಮೈಸೂರಿನಾಧ್ಯಂತ ಒಟ್ಟು ಸಾರ್ವಜನಿಕರು ಅಳವಡಿಸಿರುವ 11,917 ಸಿಸಿ ಕ್ಯಾಮಾರಗಳ‌ ದೃಶ್ಯಗಳ ಸಹಕಾರ ಪಡೆಯಲು ನಿರ್ಧಾರ ಮಾಡಲಾಗಿದೆ. ಅರಮನೆ ಹಾಗೂ ಬನ್ನಿಮಂಟಪ ಗೇಟ್‌ನಲ್ಲಿ ಬಾಡಿ ಕ್ಯಾಮಾರ ಇರುವ ಸಿಬ್ಬಂದಿ ಜೊತೆಗೆ ಜಂಬೂಸವಾರಿ ಮೆರವಣಿಗೆ ಮಾರ್ಗದಲ್ಲಿ ಡ್ರೋಣ್ ಕ್ಯಾಮಾರ ಮೂಲಕ ಹದ್ದಿನ ಕಣ್ಣು ಇಡಲಾಗಿದೆ.

ಯಾವುದೇ ಅಹಿಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಇಂದು ಬೆಳಗ್ಗೆಯೂ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ಮಾಡಿಸಿ, ಅರಮನೆ ಮೂಲೆ ಮೂಲೆಯಲ್ಲು ತಪಾಸಣೆ ಮಾಡುತ್ತಿದ್ದಾರೆ ಪೊಲೀಸರು.

ವರ್ಣಲಂಕಾರದಲ್ಲಿ‌ ಕಂಗೋಳಿಸುವ, ಗಜಪಡೆಯ ಆನೆಗಳ ಮೈಮೇಲೆ ಬಣ್ಣ ಬಣ್ಣದ ಚಿತ್ತಾರ, ಸಿಂಗಾರಗೊಂಡು ಕಂಗೋಳಿಸುತ್ತಿರುವ ಗಜಪಡೆ ಆನೆಗಳನ್ನು ಕಣ್ತುಂಬಿಕೊಳ್ಳಲು ಜನ ಕಿಕ್ಕಿರಿದು ನೆರೆದಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights