ಫ್ಯಾಕ್ಟ್ಚೆಕ್: ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಎಂದು ಸುಳ್ಳು ಹೇಳಿ ‘love jihad’ ನಡೆಸಿದನೇ?
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ love jihad ಪ್ರಕರಣವೊಂದು ಬೆಳಕಿಗೆ ಬಂದಿದೆ. ಮೊಹಮ್ಮದ್ ಆಲಂ ಎಂಬ ಮುಸ್ಲಿಂ ವ್ಯಕ್ತಿ ಅನುಜ್ ಪ್ರತಾಪ್ ಸಿಂಗ್ ಎಂದು ಹೆಸರು ಬದಲಿಸಿ ಹಿಂದೂ ಯುವತಿಯನ್ನು ವಿವಾಹವಾಗಿದ್ದಾನೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ವೊಂದು ವೈರಲ್ ಆಗುತ್ತಿದೆ.
अनुज प्रताप सिंह बनकर शादी की, जब असलियत पता चली तो मोहम्मद आलम ने 21 वर्षीय लड़की का सामूहिक रेप किया, वीडियो बनाया और जब लड़की ने विरोध किया तो गोली चलवा दी, इतने पर भी जब उसका मन नहीं भरा तो अब एसिड फेंकने की बात कर रहा है। घटना प्रयागराज की लेकिन मॉडल पूरे भारत में मशहूर। pic.twitter.com/nb0wczgkD0
— Anurag Chaddha (@AnuragChaddha) January 15, 2023
“ಅನುಜ್ ಪ್ರತಾಪ್ ಸಿಂಗ್ ಎಂದು ಪೋಸ್ ನೀಡುತ್ತಾ ವಿವಾಹವಾದ ಈತ, ಸತ್ಯ ತಿಳಿದಾಗ, ಮೊಹಮ್ಮದ್ ಆಲಂ ಆಗಿದ್ದ. 21 ವರ್ಷದ ಹಿಂದೂ ಯುವತಿಯನ್ನು ನಂಬಿಸಿ ಮದುವೆಯಾದ ನಂತರ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಚಿತ್ರೀಕರಣ ಮಾಡಿಕೊಂಡ, ಹುಡುಗಿ ಪ್ರತಿಭಟಿಸಿದಾಗ, ಗುಂಡು ಹಾರಿಸಿ ಬೆದರಿಸಿದ. ಈಗ ಆಕೆಯ ಮೇಲೆ ಆ್ಯಸಿಡ್ ಹಾಕುವ ಮಾತನ್ನಾಡುತ್ತಿದ್ದಾನೆ”. ಎಂದು ಅನುರಾಗ್ ಚಡ್ಡಾ ಎಂಬ ಟ್ವಟರ್ ಬಳೆಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
ಘಟನೆಯು ಪ್ರಯಾಗ್ರಾಜ್ನಲ್ಲಿ ಸಂಭವಿಸಿದೆ ಹಿಂದೂ ಸಂತ್ರಸ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಆಸಿಡ್ ಹಾಕುವುದಾಗಿ ಬೆದರಿಸಿದ್ದಾನೆ ಹಿಂದೂ ಯುವತಿಯರೇ ಎಚ್ಚರ ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಟ್ವಿಟರ್ ಪೋಸ್ಟ್ಗಳನ್ನು ಸರ್ಚ್ ಮಾಡಿದಾಗ, ಪ್ರಯಾಗ್ರಾಜ್ ಪೊಲೀಸ್ ಕಮಿಷನರೇಟ್ ಮಾಡಿದ ಟ್ವೀಟ್ ಲಭ್ಯವಾಗಿದೆ. ಟ್ವೀಟ್ನಲ್ಲಿ ಲಭ್ಯವಾದ ಮಾಹಿತಿ ಪ್ರಕಾರ ಈ ಆರೋಪಗಳಿಗೆ ಸಂಬಂಧಿಸಿದಂತೆ ಕಂಟೋನ್ಮೆಂಟ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರಿಗೆ ಸಿಕ್ಕಿರುವ ಮದುವೆ ಪ್ರಮಾಣಪತ್ರದಲ್ಲಿ ಹುಡುಗನ ಹೆಸರನ್ನು ಮೊಹಮ್ಮದ್ ಮಗ ಮೊಹಮ್ಮದ್ ಆಲಂ ಮುಸ್ಲಿಂ ಎಂದು ಬರೆಯಲಾಗಿದ್ದು, ಹುಡುಗಿಯ ಹೆಸರನ್ನು ಬಂಬಹದ್ದೂರ್ ಸಿಂಗ್ ಅವರ ಮಗಳು ಪಲ್ಲವಿ ಸಿಂಗ್ ಎಂದು ಬರೆಯಲಾಗಿದೆ. ಧರ್ಮವನ್ನು ಮುಚ್ಚಿಟ್ಟು ಮದುವೆ ಮಾಡಿಲ್ಲ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಮತ್ತು ಇದು ಲವ್ ಜಿಹಾದ್ ಪ್ರಕರಣವೂ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದಲ್ಲದೆ, ಸಾಮೂಹಿಕ ಅತ್ಯಾಚಾರದ ಆರೋಪಗಳಿಗೆ ಸಂಬಂಧಿಸಿದ್ದಂತೆ ಸಂತ್ರಸ್ತೆಯನ್ನು ಪರೀಕ್ಷೆಗೆ ಒಳಪಡಿಸಿ, ತನಿಖೆ ನಡೆಸಿದಾಗ ಅಂತಹ ಯಾವುದೇ ಅಪರಾಧ ನಡೆದಿಲ್ಲ ಎಂದು ಸಂತ್ರಸ್ತೆ ಪೊಲೀಸರು ಮತ್ತು ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದರು. ಇದಲ್ಲದೇ ಸಂತ್ರಸ್ತೆ ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಳ್ಳುವುದಾಗಿ ಅಫಿಡವಿಟ್ ಕೂಡ ನೀಡಿದ್ದರು. ಪತಿಯೊಂದಿಗೆ ಸಂತ್ರಸ್ತೆಯ ವಿವಾದ ನ್ಯಾಯಾಲಯದಲ್ಲಿ ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಪ್ರಕರಣಕ್ಕೆ ಯಾವುದೇ love jihad ಆಯಾಮವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇಬ್ಬರ ಧಾರ್ಮಿಕ ನಂಬಿಕೆಗಳನ್ನು ಪರಸ್ಪರ ಒಪ್ಪಿಕೊಂಡೆ ವಿವಾಹ ನೆರವೇರಿತ್ತು ಎಂಬುದು ಮದುವೆ ಪ್ರಮಾಣ ಪತ್ರ ದೃಢೀಕರಿಸುತ್ತದೆ. ಹಾಗಾಗಿ ಈ ಪ್ರಕರಣಕ್ಕೆ ಕೋಮು ಆಯಾಮವಾಗಲಿ, love jihad ಆಗಲಿ ಕಾರಣವಲ್ಲ ಎಂಬುದು ಸ್ಪಷ್ಟವಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್: 2024ರ ಚುನಾವಣೆಗೆ BJP ಮತ್ತು ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿವೆ ಎಂಬುದು ಎಷ್ಟು ನಿಜ?