ಫ್ಯಾಕ್ಟ್‌ಚೆಕ್ : ಪ್ರಧಾನಿ ಮೋದಿ ‘ಭೂಮಿಯ ಮೇಲಿನ ಕೊನೆಯ ಭರವಸೆ’ ಎಂದು ನ್ಯೂಯಾರ್ಕ್ ಟೈಮ್ಸ್‌ ಲೇಖನ ಪ್ರಕಟಿಸಿದೆಯೇ

ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿ ಅಮೆರಿಕಾದ ಹೆಸರಾಂತ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್‌ ಪ್ರಮುಖ ಲೇಖನವನ್ನು ಪ್ರಕಟಿಸಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ನರೇಂದ್ರ ಮೋದಿ ಅವರು ‘ಭೂಮಿಯ ಕೊನೆಯ ಭರವಸೆ’ ಎಂದು ಲೇಖನ ಪ್ರಕಟವಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

https://twitter.com/abhaya0930/status/1671333496462401536

‘ಹೋಪ್ ಆಫ್ ಅರ್ಥ್’ ವಿಶ್ವದ ಅತ್ಯಂತ ಪ್ರೀತಿಪಾತ್ರ ಮತ್ತು ಅತ್ಯಂತ ಶಕ್ತಿಶಾಲಿ ನಾಯಕ, ನಮ್ಮನ್ನು ಆಶೀರ್ವದಿಸಲು ಇಲ್ಲಿದ್ದಾರೆ ಎಂದು ನ್ಯೂಯರ್ಕ್ ವರದಿ ಮಾಡಿದ ಎಂದು ಫೇಸ್‌ ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ ಹಂಚಿಕೊಳ್ಳಲಾಗಿದೆ.  ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ನ್ಯೂಯಾರ್ಕ್ ಟೈಮ್ಸ್ ಪ್ರಧಾನಿ ಮೋದಿಯನ್ನು ‘ಭೂಮಿಯ ಕೊನೆಯ, ಅತ್ಯುತ್ತಮ ಭರವಸೆ’ ಎಂಬ ಶೀರ್ಷಿಕೆಯೊಂದಗೆ ಲೇಖನವನ್ನು ಪ್ರಕಟಿಸಿದೆಯೇ ಎಂದು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 26 ಸೆಪ್ಟಂಬರ್ 2021ರಲ್ಲಿ ಪ್ರಕಟವಾದ ನ್ಯೂಯಾರ್ಕ್ ಟೈಮ್ಸ್‌ ಪತ್ರಿಕೆಯ ಮುಖಪುಟವನ್ನು ಗಮನಿಸಬಹುದು.

ಈ ರೀತಿ ಮೋದಿಯನ್ನು ಹೊಗಳಿ ನ್ಯೂಯಾರ್ಕ್ ಟೈಮ್ಸ್‌ ಲೇಖನವನ್ನು ಪ್ರಕಟಿಸಿದೆ ಎಂದು 2020ರಿಂದ ಇದೇ ತುಣುಕನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದೇ ಚಿತ್ರವನ್ನು 2020ರ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೂರು ದಿನಗಳ ಅಮೆರಿಕದ ಅಧಿಕೃತ ಭೇಟಿಯ ಹಿನ್ನೆಲೆಯಲ್ಲಿ ಹಂಚಿಕೊಳ್ಳಲಾಗಿತ್ತು ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ.

ಪ್ರಧಾನಿ ಮೋದಿಯನ್ನು ಹೊಗಳಿ ಪ್ರಕಟಿಸಲಾದ ಲೇಖನದ ಮುಖಪುಟದಲ್ಲಿ ಸೆಪ್ಟಂಬರ್ ತಿಂಗಳು ಎನ್ನುವ ಕಡೆ ಅಕ್ಷರಗಳನ್ನು ತಪ್ಪಾಗಿ ಮುದ್ರಿಸಲಾಗಿದೆ. ಅಂದರೆ ನ್ಯೂಯಾರ್ಕ್ ಟೈಮ್ಸ್‌ ಎನ್ನು ಪ್ರತಿಷ್ಠಿತ ಪ್ರತಿಕೆಯೊಂದು ಈ ರೀತಿ ತಪ್ಪು ತಪ್ಪಾಗಿ ಪ್ರಕಟಿಸಿರುವುದನ್ನು ಕಂಡಾಗ ಅನುಮಾನ ಮೂಡುವುದು ಸಹಜ ಎಂದು ಆಲ್ಟ್‌ನ್ಯೂಸ್ ಉಲ್ಲೇಖಿಸಿದೆ.

ಸೆಪ್ಟೆಂಬರ್ 26 ರ ಸಂಚಿಕೆಯ ಮೊದಲ ಪುಟವನ್ನು ನ್ಯೂಯಾರ್ಕ್ ಟೈಮ್ಸ್ ವೆಬ್‌ಸೈಟ್ ನಲ್ಲಿ ಪರಿಶೀಲಿಸಿದಾಗ, ಅಂತಹ ಯಾವುದೇ ಲೇಖನಗಳು ಪ್ರಧಾನಿ ಮೋದಿಯವರ ಬಗ್ಗೆ ಪ್ರಕಟವಾಗಿಲ್ಲ. ಬದಲಿಗೆ ಅದೇ ದಿನಾಂಕದಲ್ಲಿ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾಗಿರುವುದು ಬೇರೆ ಸುದ್ದಿ ಎಂದು ಸ್ಪಷ್ಟವಾಗಿದೆ.

2021 ಸೆಪ್ಟಂಬರ್ 26ರ ನ್ಯೂಯಾರ್ಕ್ ಸಂಚಿಕೆಯ ಮೂಲ ಪ್ರತಿಯನ್ನು ಹುಡುಕಿದಾಗ, ಮೂಲ ಆವೃತ್ತಿಯನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ. ಪ್ರತಿಯ ಬೆಲೆ ಮತ್ತು ಸಂಖ್ಯೆಗಳಲ್ಲಿ ವ್ಯತ್ಯಾಸವಿರುವುದನ್ನು ಕಾಣಬಹುದು. ಟ್ವಿಟರ್ ಬಳಕೆದಾರರು ನವೆಂಬರ್ 9, 2016 ರಂದು ನ್ಯೂಯಾರ್ಕ್ ಟೈಮ್ಸ್ ಮುಖಪುಟದ ಕ್ಲಿಪ್ಪಿಂಗ್ ಅನ್ನು ಹಂಚಿಕೊಂಡಿದ್ದಾರೆ, ಇದು ವೈರಲ್ ಚಿತ್ರದ ಅದೇ ಪರಿಮಾಣ ಸಂಖ್ಯೆ ಮತ್ತು ಬೆಲೆಯನ್ನು ಹೊಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ‘ದಿ ನ್ಯೂಯಾರ್ಕ್ ಟೈಮ್ಸ್’ ನರೇಂದ್ರ ಮೋದಿಯನ್ನು ‘ಲಾಸ್ಟ್, ಬೆಸ್ಟ್ ಹೋಪ್ ಆಫ್ ಅರ್ಥ್’ ಎಂದು ಕರೆದಿಲ್ಲ, ಪ್ರಧಾನಿ ನರೇಂದ್ರ ಮೋದಿ ಪ್ರಸ್ತುತ ಅಮೇರಿಕಾದ ಪ್ರವಾಸದಲ್ಲಿರುವ ಕಾರಣ ಹಳೆಯ, ಸುಳ್ಳು ಮತ್ತು ಡಿಜಿಟಲ್ ಎಡಿಟ್ ಮಾಡಿದ ಫೋಟೊವನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಕಾಂಗ್ರೆಸ್ ಶಾಸಕ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights