ಏ.6 ರಾತ್ರಿ 9 ಗಂಟೆಗೆ ಸ್ಟಾರ್​ ನಟರು ನಟಿಸಿದ ಕೊರೊನಾ ಜಾಗೃತಿ ಕಿರುಚಿತ್ರ ಬಿಡುಗಡೆ…

ಮಹಾಮಾರಿ ಕೊರೋನಾ ವೈರಸ್​ ದಿನದಿಂದ ದಿನಕ್ಕೆ ಯಾವುದೇ ಅಡೆ ತಡೆ ಇಲ್ಲದೇ ಮನುಷ್ಯನ ದೇಹ ಹೊಕ್ಕುತ್ತಿದೆ. ಕೇವಲ ದೇಹ ಸೇರುವುದು ಮಾತ್ರವಲ್ಲದೇ ಯಮನಂತೆ ಪ್ರಾಣ ಬಲಿ ಪಡೆದುಕೊಳ್ಳುತ್ತಿದೆ. ವಿಶ್ವಾದ್ಯಂತ ಹರಡಿರುವ ಈ ಕೊರೋನಾ ಸೋಂಕಿಗೆ ಅನೇಕ ದೇಶಗಳು ಅಕ್ಷರಶಃ ತತ್ತರಿಸಿ ಹೋಗಿವೆ. ಸುಮಾರು 183 ದೇಶಗಳಲ್ಲಿ ಕೊರೋನಾ ವೈರಸ್​ ಹರಡಿದೆ. ಜಗತ್ತಿನಾದ್ಯಂತ 12,73,794 ಜನರಿಗೆ ಕೊರೋನಾ ಸೋಂಕು ಹರಡಿರುವುದು ದೃಢಪಟ್ಟಿದೆ. ವಿಶ್ವಾದ್ಯಂತ ಈವರೆಗೆ ಒಟ್ಟು 69,419 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

ಹೀಗಾಗಿ ಭಾರತದಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಎಲ್ಲಾ ವುಡ್ ಖ್ಯಾತ ನಟ ನಟಿಯರು ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕಿರು ಚಿತ್ರವನ್ನು ರಚಿಸಿದ್ದು, ಇಂದು 9 ಗಂಟೆಗೆ ಈ ಚಿತ್ರೆ ಬಿಡುಗಡೆ ಮಾಡಲಾಗುವುದಂತೆ.

ಸಿನಿಮಾ ಸ್ಟಾರ್​ ನಟ-ನಟಿಯರು ಕೂಡ ಕೊರೋನಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿಯ ಸಂದೇಶ ರವಾನಿಸುತ್ತಿದ್ದಾರೆ. ಮಾತ್ರವಲ್ಲದೆ, ಕೊರೋನಾ ವಿರುದ್ಧ ಹೋರಾಟಕ್ಕೆ ಬೆಂಬಲ ಸೂಚಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಜನರು ಜಾಗೃತಿಯಿಂದಿರಿ ಎಂಬ ಎಚ್ಚರಿಕೆ ಸಂದೇಶ ರವಾನಿಸುತ್ತಿದ್ದಾರೆ. ಇದೀಗ ಕೊರೋನಾ ವಿರುದ್ಧದ ಹೋರಾಟವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ಕಿರುಚಿತ್ರವನ್ನು ತರುತ್ತಿದ್ದಾರೆ. ಈ ಕಿರುಚಿತ್ರದಲ್ಲಿ ಎಲ್ಲಾ ಇಂಡಸ್ಟ್ರಿಗಳ ಸ್ಟಾರ್​ ನಟರು ನಟಿಸಿದ್ದಾರೆ.

ಈ ಕಿರುಚಿತ್ರಕ್ಕೆ ‘ಫ್ಯಾಮಿಲಿ‘ ಎಂದು ಹೆಸರಿಡಲಾಗಿದೆ. ಬಾಲಿವುಡ್​ನಿಂದ ಹಿಡಿದು ದಕ್ಷಿಣ ಭಾರತೀಯ ಸಿನಿಮಾರಂಗದ ಕಲಾವಿದರು ಇದರಲ್ಲಿ ನಟಿಸಿದ್ದಾರೆ. ಪ್ರಸೂನ್ ಪಾಂಡೆ ನಿರ್ದೇಶನದ ಈ ಕಿರುಚಿತ್ರದಲ್ಲಿ ಬಿಗ್​ ಬಿ ಅಮಿತಾಭ್​ ಬಚ್ಚನ್​​, ಸೂಪರ್​ ಸ್ಟಾರ್​​ ರಜನಿಕಾಂತ್​, ಪ್ರಿಯಾಂಕಾ ಚೋಪ್ರಾ, ರಣ್​ಬೀರ್​ ಕಪೂರ್​, ಆಲಿಯಾ ಭಟ್​ ಕಾಣಿಸಿಕೊಳ್ಳಲಿದ್ದಾರೆ.

ಭಾರತದಲ್ಲಿ ನೋಡು ನೋಡುತ್ತಿದ್ದಂತೆ ಕೊರೊನಾ ಸೋಂಕಿತರ ಸಂಖ್ಯೆ 4000 ಗಡಿದಾಟಿದೆ. ಕಳೆದ 12 ಗಂಟೆಗಳಲ್ಲಿ 490 ಸೋಂಕಿತರು ಪತ್ತೆಯಾಗಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4067ಕ್ಕೆ ಏರಿದೆ. ಇದುವರೆಗೂ ಭಾರತದಲ್ಲಿ ಕೊವಿಡ್ ಸೋಂಕಿನಿಂದ 109 ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಈ ಮೂಲಕ ಸಾವಿನಲ್ಲಿ ಶತಕ ದಾಟಿದ ಮಹಾಮಾರಿ ಕೊರೊನಾ ವೈರಸ್.

ಒಟ್ಟು 4067 ಸೋಂಕಿತರ ಪೈಕಿ 3666 ಜನರು ಇನ್ನು ಕ್ವಾರೆಂಟೈನ್ ಹಾಗೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 292 ಜನರು ಕೊರೊನಾದಿಂದ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.ಅತೀ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ಸೋಂಕು ಹರಡಿರುವ ಪೈಕಿ ಮೊದಲ ಸ್ಥಾನದಲ್ಲಿರುವುದು ವಿಶ್ವದ ದೊಡ್ಡಣ್ಣ ಅಮೆರಿಕ. ಹೌದು, ಇಲ್ಲಿ 3,37,274 ಮಂದಿಗೆ ಕೊರೋನಾ ವೈರಸ್ ತಗುಲಿದೆ. ಇನ್ನು ಅದರ ನಂತರ ಸ್ಪೇನ್​ನಲ್ಲಿ 1,31,646 ಜನರಿಗೆ ಕೊರೋನಾ ಸೋಂಕು ಹರಡಿದೆ. ಇಟಲಿಯಲ್ಲಿ ಈವರೆಗೆ 1,28,948 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಜರ್ಮನಿಯಲ್ಲಿ 1,00,123 ಜನರಿಗೆ ಕೊರೋನಾ ತಗುಲಿದೆ. ಫ್ರಾನ್ಸ್​ನಲ್ಲಿ 93,780 ಮಂದಿಗೆ ಕೊರೋನಾ ಸೋಂಕು ಹರಡಿದೆ.

ಇನ್ನು, ಕೊರೋನಾ ಸೋಂಕಿನ ಮೂಲ ಸ್ಥಾನವಾದ ಚೀನಾದಲ್ಲಿ ಈವರೆಗೆ 82,602 ಜನರಿಗೆ ವೈರಸ್ ತಗುಲಿದೆ. ಇರಾನ್​ನಲ್ಲಿ ಒಟ್ಟು 58,226 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇಂಗ್ಲೆಂಡ್​ನಲ್ಲಿ 48,440 ಮಂದಿಗೆ ಕೊರೋನಾ ವೈರಸ್​ ಹರಡಿದೆ. ಟರ್ಕಿಯಲ್ಲಿ 27,069 ಕೊರೋನಾ ಪ್ರಕರಣಗಳು ದೃಢಪಟ್ಟಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights