ಮೈಸೂರು ದಸರಾ ಮರೆತ ಬಿಜೆಪಿ ಸಚಿವರು‌ : ಮೂರೆ ದಿನಕ್ಕೆ ಸಚಿವರಿಲ್ಲದೆ ಸೋರಗಿದ ಕಾರ್ಯಕ್ರಮಗಳು

ಬಿಜೆಪಿ ಸಚಿವರು‌ ಮೈಸೂರು ದಸರಾವನ್ನು ಮರೆತ ಕಾರಣ ದಸರಾ ಕಾರ್ಯಕ್ರಮಗಳು ಮೂರೆ ದಿನಕ್ಕೆ ಸಚಿವರಿಲ್ಲದೆ ಸೋರಗಿ ಹೋಗಿವೆ. ಹಲವು ಸಚಿವರು ಮೊದಲನೆ ಹಾಗೂ ಎರಡನೆ ದಿನದ ದಸರಾ ಕಾರ್ಯಕ್ರಮಗಳಿಗೂ ಗೈರಾಗಿದ್ದು, ಮೂರನೆ ದಿನದ ಕಾರ್ಯಕ್ರಮಗಳಿಗೂ ಗೈರಾಗಿದ್ದಾರೆ.

ಮೊದಲ ದಿನ ಫಲಪುಷ್ಪ ಪ್ರದರ್ಶನ ಉದ್ಘಾಟಿಸಬೇಕಿದ್ದ ಸಚಿವ ಕೆ.ಎಸ್.ಈಶ್ವರಪ್ಪ, ಪೊಲೀಸ್ ಚೌಕಿ ಉದ್ಘಾಟಿಸಬೇಕಿದ್ದ ಸಚಿವ ಬಸವರಾಜ ಬೊಮ್ಮಾಯಿ, ಆಹಾರ ಮೇಳದ ಸಚಿವ ಹಾಗೂ ಡಿಸಿಎಂ ಸಚಿವ ಅಶ್ವತ್‌ನಾರಾಯಣ್, ದಸರಾ ಉದ್ಘಾಟನೆಯಲ್ಲಿ ಭಾಗಿಯಾಗಬೇಕಿದ್ದ ಸಚಿವ ಹಾಗೂ ಡಿಸಿಎಂ ಲಕ್ಷಣ್ ಸವದಿ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮವನ್ನೆ ಬಿಟ್ಟು ಹೋಗಿದ್ದ ಸಿಎಂ ಬಿಎಸ್‌ವೈ, ಎರಡನೆ ದಿನ ರಂಗೋಲಿ ಸ್ಪರ್ಧೆ ಉದ್ಘಾಟಿಸಬೇಕಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಶಶಿಕಲಾ ಜೋಲ್ಲೆ, ಮಕ್ಕಳ ದಸರಾ ಉದ್ಘಾಟಿಸಬೇಕಿದ್ದ ಸಚಿವ ಸುರೇಶ್ ಕುಮಾರ್, ಮೂರನೆ ಸಚಿವರ ಸರಣಿ ಗೈರು ಹಾಜರಿ, ಇಂದು ಬೆಳಗ್ಗೆ ಯೋಗವಾಹಿನಿ ಉದ್ಘಾಟಿಸಬೇಕಿದ್ದ ಸಂಸದ ಪ್ರತಾಪ್‌ಸಿಂಹ, ರೈತದಸರಾ ಮೆರವಣಿಗೆ ಉದ್ಘಾಟಿಸಬೇಕಿದ್ದ ಸಂಸದ ಶ್ರೀನಿವಾಸ್ ಪ್ರಸಾದ್, ರೈತದಸರಾ ವೇದಿಕೆ ಕಾರ್ಯಕ್ರಮದ ಉದ್ಘಾಟಿಸಬೇಕಿದ್ದ ಸಚಿವ ಜಗದೀಶ್ ಶೆಟ್ಟರ್, ರೈತ ದಸರಾ ವಸ್ತುಪ್ರದರ್ಶನ ಉದ್ಘಾಟಿಸಿಬೇಕಿದ್ದ ಸಚಿವ ಜೆ.ಸಿ.ಮಾಧುಸ್ವಾಮಿ ಎಲ್ಲರೂ ಗೈರಾಗಿದ್ದಾರೆ.

ಎಲ್ಲ ಕಾರ್ಯಕ್ರಮಗಳಿಗೂ ಏಕಾಂಗಿಯಾಗಿ ಉಸ್ತುವಾರಿ ಸಚಿವ ವಿ.ಸೋಮಣ್ಣ ಓಡಾಡುತ್ತಿದ್ದಾರೆ. ಹೀಗಾಗಿ ಸರ್ಕಾರದ ಸಚಿವರು ದಸರಾ ಬಗ್ಗೆ ನಿರ್ಲಕ್ಷ ವಹಿಸಿದ್ದಾರೆಂಬ ಾರೋಪಗಳು ಎಲ್ಲೆಡೆ ಕೇಳಿ ಬರುತ್ತಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights