ಮಹಾರಾಷ್ಟ್ರದಲ್ಲಿ ಮಂಕಾದ BJP: ಪಕ್ಷದ ಕಳಪೆ ಸಾಧನೆಗೆ ಸಿಟ್ಟಾದ ಅಮಿತ್‌ ಶಾ ಕಠಿಣ ನಿಲುವು?

ಇತ್ತೀಚೆಗೆ ಮಹಾರಾಷ್ಟ್ರ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಕಳಡೆ ಪ್ರದರ್ಶನವನ್ನು ತೋರಿದ್ದು, ಕೇವಲ ಒಂದು ಸ್ತಾನವನ್ನು ಮಾತ್ರ ಗೆದ್ದಿದೆ. ಆಡಳಿತಾರೂಢ ಮಹಾ ವಿಕಾಸ್‌ ಅಘಾಡಿ ನಾಲ್ಕು ಸ್ಥಾನವನ್ನೂ ಮತ್ತು ಒಬ್ಬರು ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿಯ ಕಳಪೆ ಪ್ರದರ್ಶನಕ್ಕೆ ಕಾರಣವೇನು ಎಂಬುದರ ಬಗ್ಗೆ ವರದಿ ನೀಡುವಂತೆ ಬಿಜೆಪಿ ರಾಷ್ಟ್ರೀಯ ಹೈಕಮಾಂಡ್‌ ರಾಜ್ಯ ಬಿಜೆಪಿಯನ್ನು ಕೇಳಿದೆ.

ಮೂಲಗಳ ಪ್ರಕಾರ, ಬಿಜೆಪಿಯ ಹಿರಿಯ ಮುಖಂಡ ಆಶಿಶ್ ಶೆಲಾರ್ ಅವರಿಗೆ ನಾಗ್ಪುರ ಮತ್ತು ಅಮರಾವತಿಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ಬಗ್ಗೆ ವರದಿ ನೀಡುವಂತೆ ಕೇಳಲಾಗಿದ್ದು,  ಮರಾಠವಾಡದ ಬಗ್ಗೆ ಮಾಜಿ ಸಚಿವ ಚಂದ್ರಶೇಖರ್ ಬವಾಂಕುಲೆ ಮತ್ತು ಪುಣೆ ಪ್ರದೇಶದ ಕುರಿತು ಬಿಜೆಪಿ ಶಾಸಕ ರವೀಂದ್ರ ಚೌಹಾಣ್‌ ವರದಿ ನೀಡಬೇಕು ಎಂದು ಕೇಳಿಲಾಗಿದೆ.

ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಮಹಾರಾಷ್ಟ್ರ ಬಿಜೆಪಿಯ ಸಾಧನೆಯ ಬಗ್ಗೆ ಬಿಜೆಪಿಯ ಉನ್ನತ ನಾಯಕತ್ವ, ವಿಶೇಷವಾಗಿ ಅಮಿತ್ ಶಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಒಂದು ಕಾಲದಲ್ಲಿ ಮಹಾರಾಷ್ಟ್ರವು ಬಿಜೆಪಿಯ ಭದ್ರಕೋಟೆಯಂತೆ ಬೆಳೆಯುತ್ತಿದ್ದ ಪಕ್ಷದ ಹಿಂದುಳಿಯಲು ಪ್ರಾರಂಭಿಸಿದೆ. ಇದಕ್ಕೆ ಕಾರಣವೇನು? ಬಿಜೆಪಿ ಕಳಪೆ ಸಾಧನೆಯ ಬಗ್ಗೆ ವಿವರವಾದ ಪ್ರತಿಕ್ರಿಯೆ ವರದಿಯನ್ನು ಕೋರಿದ್ದಾರೆ” ಎಂದು ಮೂಲಗಳು ತಿಳಿಸಿವೆ.

58 ವರ್ಷಗಳಿಂದ ಬಿಜೆಪಿ ತೆಕ್ಕೆಯಲ್ಲಿದ್ದ ನಾಗ್ಪುರವನ್ನು ಬಿಜೆಪಿ ಕಳೆದುಕೊಂಡಿದ್ದು, ಅದು ಕಾಂಗ್ರೆಸ್‌ ಪಾಲಾಗಿದೆ. ಮಹಾರಾಷ್ಟ್ರ ಘಟಕದ ಕಾರ್ಯಕ್ಷಮತೆಯ ಬಗ್ಗೆ ಅಮಿಶ್‌ ಶಾ ಬೇಸರಗೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಬಲಗೊಳ್ಳದಿದ್ದರೆ, ಪಕ್ಷದ ಪುನರ್‌ರಚನೆ ಯಾವಾಗ ಬೇಕಾದರೂ ಆಗಬಹುದು ಎಂದು ತಿಳಿದು ಬಂದಿದೆ.


ಇದನ್ನೂ ಓದಿ: ರೈತ ವಿರೋಧಿ ಕೃಷಿ ನೀತಿಗಳು: ಪ್ರಧಾನಿ ಮೋದಿ V/S ಮುಖ್ಯಮಂತ್ರಿ ಮೋದಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights