ಫ್ಯಾಕ್ಟ್‌ಚೆಕ್: ಒಡಿಶಾ ರೈಲು ದುರಂತಕ್ಕೂ ಈ ವಿಡಿಯೋಗೂ ಸಂಬಂಧವಿಲ್ಲ – ಇದು ಮೆಕ್ಸಿಕೋ ದೇಶದ್ದು

ವ್ಯಕ್ತಿಯೊಬ್ಬನನ್ನು ನಗ್ನಗೊಳಿಸಿ ಎರಡೂ ಕೈಗಳನ್ನು ಕಟ್ಟಿ ಮಕಾಡೆ ಮಲಗಿಸಿ ಕ್ರಿಕೆಟ್ ಬ್ಯಾಟ್ ರೀತಿ ಕಾಣುವ ವಸ್ತುವಿನಿಂದ ಮೈ ಮೂಳೆ ಪುಡಿಯಾಗುವಂತೆ ಹೊಡೆಯುತ್ತಿರುವ ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕಾಗಿ ಪ್ರಸಾರವಾಗುತ್ತಿದೆ.

ಇತ್ತೀಚೆಗೆ  ಒಡಿಶಾದಲ್ಲಿ ನಡೆದ ರೈಲು ದುರಂತಕ್ಕೆ ಕಾರಣನಾದ ಮೊಹಮ್ಮದ್ ಷರೀಫ್ ಅವರನ್ನು ಬೆತ್ತಲೆಗೊಳಿಸಿ ಕ್ರೂರವಾಗಿ ಥಳಿಸಲಾಗುತ್ತಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅವರು ಪಶ್ಚಿಮ ಬಂಗಾಳದ ಮದರಸಾದಲ್ಲಿ ಅಡಗಿರುವುದನ್ನು ಪತ್ತೆ ಹಚ್ಚಿದ ಸಿಬಿಐ ಅಧಿಕಾರಿಗಳು, ಷರೀಫನನ್ನು ವಶಕ್ಕೆ ಪಡೆದು ವಿಚಾರಣೆ ನಡಸುತ್ತಿದ್ದಾರೆ ಎಂದು ಹೇಳಲಾಗಿದೆ.

ಹಲವು ವಾಟ್ಸಾಪ್ ಗ್ರೂಪ್‌ಗಳಲ್ಲಿ ಇದೇ ವಿಡಿಯೋವನ್ನು ಹಂಚಿಕೊಳ್ಳುತ್ತಾ, “ಈ ಸುವ್ವರ್ ಮೊನ್ನೆ ನಡೆದ ಟ್ರೈನ್ ಅಪಘಾತಕ್ಕೆ ಕಾರಣ . ಹೆಸರು ಮೊಹಮ್ಮದ್ ಶರೀಫ್. ಪಶ್ಚಿಮ್ ಬಂಗಾಳದ ಮದರಸಾದಲ್ಲಿ ಅವಿತುಕೊಂಡಿದ್ದಾ. 290 ಜನ ಪ್ರಾಣ ಕಳೆದುಕೊಂಡರು, 900 ನೂರು ಜನ ಆಸ್ಪತ್ರೆ ಸೇರಿದರು. ಈಗ ಪೊಲೀಸರು ಇವನ ಕಾರೆ ಮಾಡ್ತಾ ಇದ್ದಾರೆ. ಮದುವೆ ಕಾರ್ಯಕ್ರಮ ಮುಂದೆ ಇದೆ. ದೇಶವನ್ನು ಮುಸ್ಲಿಂ ರಾಷ್ಟ್ರವನ್ನು ಮಾಡುವ ಸುವರ್ ಗಳು ಮದುವೆಗೆ ಹಾಜರಾಗಬಹುದು” ಎಂಬ ಕೋಮು ನಿರೂಪಣೆಯೊಂದಿಗೆ ವಾಟ್ಸಾಪ್‌ಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋದಲ್ಲಿ ಮಾಡಿರುವ ಪ್ರತಿಪಾದನೆಯನ್ನು ಪರಿಶೀಲಿಸುವಂತೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಏನ್‌ಸುದ್ದಿ.ಕಾಂ ಗೆ ಸಂದೇಶಗಳ ಮೂಲಕ ವಿನಂತಿಸಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಬಹನಾಗಾ ಬಜಾರ್‌ ಪ್ರದೇಶದಲ್ಲಿ ನಡೆದ ರೈಲು ಅಪಘಾತದ ವೇಳೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು, ಸ್ಟೇಷನ್ ಮಾಸ್ಟರ್ ಮೊಹಮ್ಮದ್ ಷರೀಫ್ ಅಪಘಾತದ ನಂತರ ತಲೆಮರೆಸಿಕೊಂಡಿದ್ದಾನೆ ಎಂದು ಆರೋಪಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದರು. ಅದೇ ಸಂದರ್ಭದಲ್ಲಿ ಏನ್‌ಸುದ್ದಿ.ಕಾಂ ವೈರಲ್ ಪೋಸ್ಟ್‌ಅನ್ನ ಪರಿಶೀಲಿಸಿ ಫ್ಯಾಕ್ಟ್‌ಚೆಕ್ ಮೂಲಕ ವಾಸ್ತವವನ್ನು ಜನರ ಮುಂದಿಟ್ಟು, ಬಹನಾಗಾ ಬಜಾರ್‌ನ ಸ್ಟೇಷನ್‌ನಲ್ಲಿ ಮೊಹಮ್ಮದ್ ಷರೀಫ್ ಎಂಬ ಹೆಸರಿನ ಸ್ಟೇಷನ್ ಮಾಸ್ಟರ್ ಯಾರೂ ಇಲ್ಲ ಎಂದು ಪತ್ತೆ ಹಚ್ಚಲಾಗಿತ್ತು.

ವೈರಲ್ ವಿಡಿಯೋದಲ್ಲಿ ಪೆಟ್ಟು ತಿನ್ನುತ್ತಿರುವ ವ್ಯಕ್ತಿಯಾರು?

ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ದೃಶ್ಯಗಳಲ್ಲಿ ಬೆತ್ತಲೆಗೊಳಿಸಿ ಹೊಡೆಯುತ್ತಿರುವ ದೃಶ್ಯಗಳನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮೆಕ್ಸಿಕೊದಲ್ಲಿ ದರೋಡೆಕೋರನೊಬ್ಬನ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ತೋರಿಸುತ್ತದೆ. ಈ ವಿಡಿಯೋ ಕಳೆದ ವೀಡಿಯೊ 2 ವರ್ಷಗಳಿಂದ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಪ್ರಸಾರವಾಗುತ್ತಿದೆ ಎಂದು ತಿಳಿದುಬಂದಿದೆ.

ವೈರಲ್ ವೀಡಿಯೊಗೂ ಮತ್ತು ಇತ್ತೀಚೆಗೆ ನಡೆದ ಒಡಿಶಾ ರೈಲು ದುರಂತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಇದು ಸ್ಪಷ್ಟವಾಗಿ ಸೂಚಿಸುತ್ತದೆ. ಇದಲ್ಲದೆ, ಯಾವುದೇ ರೈಲ್ವೆ ಸಿಬ್ಬಂದಿಗಳು ತಲೆಮರೆಸಿಕೊಂಡಿಲ್ಲ ಮತ್ತು ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಆಗ್ನೇಯ ರೈಲ್ವೆ ಮೂಲಗಳು ದೃಢಪಡಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮೆಕ್ಸಿಕೋದಲ್ಲಿ ದರೋಡೆಕೋರನ ಮೇಲೆ ಹಲ್ಲೆ ನಡೆಸುತ್ತಿರುವ ಘಟನೆಯನ್ನು ಚಿತ್ರಿಸುವ ವೈರಲ್ ವಿಡಿಯೋ ಕನಿಷ್ಠ 2 ವರ್ಷಗಳಿಂದ ಪ್ರಸಾರವಾಗುತ್ತಿದೆ. ಇದಲ್ಲದೆ, ಅಪಘಾತದ ಸಮಯದಲ್ಲಿ, ಬಹನಾಗಾ ಬಜಾರ್ ಠಾಣೆಯ ಪ್ರಭಾರ  ಸ್ಟೇಷನ್ ಸೂಪರಿಂಟೆಂಡೆಂಟ್ ಎಸ್.ಬಿ.ಮೊಹಂತಿ ಅವರ ವಿಚಾರಣೆಯನ್ನು ಅಧಿಕಾರಿಗಳು ಈಗಾಗಲೇ ನಡೆಸಿದ್ದಾರೆ. ಆ ಠಾಣೆಯಲ್ಲಿ ಮಹಮ್ಮದ್ ಷರೀಫ್ ಎಂಬ ಸಿಬ್ಬಂದಿ ಇಲ್ಲ. ಅಲ್ಲದೆ, ಅಪಘಾತಕ್ಕೆ ಕಾರಣರಾದ ವ್ಯಕ್ತಿಗಳ ಬಗ್ಗೆ ಸಿಬಿಐ ಇನ್ನೂ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಹಳೆಯ ಮತ್ತು ಸಂಬಂಧವಿಲ್ಲದ ವಿಡಿಯೋಗಳನ್ನು ಬಳಸಿಕೊಂಡು ಮುಸ್ಲಿಂ ಸಮುದಾಯವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ತಂತ್ರವನ್ನು ಬಲಪಂಥೀಯ ಪ್ರತಿಪಾದಕ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ನಡೆಸಿದ್ದಾರೆ. ಅಲ್ಲದೆ ಘಟನೆಗೆ ಕೋಮು ಬಣ್ಣ ನೀಡುವ ಪ್ರಯತ್ನದ ಭಾಗವಾಗಿ ಈ ರೀತಿ ಸುಳ್ಳುಸುದ್ದಿಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಇಂತಹ ವಿಡಿಯೋಗಳ ಪೋಸ್ಟ್‌ಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಏನ್‌ಸುದ್ದಿ.ಕಾಂ ಮನವಿ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ರೈಲು ಅಪಘಾತಕ್ಕೆ ಕಾರಣನಾದ ಸ್ಟೇಷನ್ ಮಾಸ್ಟರ್ ಷರೀಫ್ ನಾಪತ್ತೆ ಎಂದು ಸುಳ್ಳು ಪೋಸ್ಟ್‌ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights