ರೂಮ್‌ಮೇಟ್ ಅನ್ನು ಕೊಂದು ಮೃತದೇಹ ಕಸದಂತೆ ಡಂಪ್ ಮಾಡಿದ ಕುಚುಕುಫ್ರೆಂಡ್..!

ಸ್ನೇಹಿತರ ಮಧ್ಯೆ ಜಗಳ ಮನಸ್ತಾಪಗಳಾಗೋದು ಸಹಜ. ಆದರೆ ಈ ಜಗಳ ವಿಕೋಪಕ್ಕೆ ಹೋದರೆ ಕೊಲೆಗಳು ಆಗುತ್ತವೆ ಅನ್ನೋದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಕುಚುಕು ಗೆಳೆಯನೊಬ್ಬ ರೂಮ್‌ಮೇಟ್ ಅನ್ನು ಕೊಂದು ಮೃತದೇಹವನ್ನು ಕಸದಂತೆ ಡಂಪ್ ಮಾಡಿದ ದಾರುಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಶನಿವಾರ ರಾತ್ರಿ (ಜುಲೈ 31) ಆರೋಪಿ ದೇವಾಂಶ್ ವಾಘೋಡೆ (26) ತನ್ನ ಸ್ನೇಹಿತ ರಾಜು ನಂದೇಶ್ವರ್ (35) ನನ್ನು ಕೊಂದಿದ್ದಾನೆ. ಮಹಾರಾಷ್ಟ್ರದ ನಾಗಪುರದ ದಾಭಾ ಪ್ರದೇಶದಲ್ಲಿ ರೂಮ್‌ಮೇಟ್ಸ್ ಆಗಿದ್ದ ನಂದೀಶ್ವರ್ ಮತ್ತು ವಾಘೋಡೆ ಇಬ್ಬರೂ ಗ್ಯಾರೇಜ್‌ನಲ್ಲಿ ಕಾರ್ ಮೆಕ್ಯಾನಿಕ್ಸ್ ಆಗಿ ಕೆಲಸ ಮಾಡುತ್ತಾರೆ.

ಬಾಡಿಗೆ ಕೋಣೆಯನ್ನು ಹಂಚಿಕೊಂಡಿರುವ ಇವರಿಬ್ಬರ ನಡುವೆ ವಾಗ್ವಾದ ನಡೆದು ಈ ಘಟನೆ ಸಂಭವಿಸಿದೆ. ವಾಘೋಡೆ ತೀಕ್ಷ್ಣವಾದ ವಸ್ತುವನ್ನು ಬಳಸಿ ನಂದೀಶ್ವರನ ತಲೆಗೆ ಇರಿದು ಕೊಲೆ ಮಾಡಿದ್ದಾನೆ. ಸ್ಥಳದಲ್ಲೇ ಮೃತಪಟ್ಟ ನಂದೀಶ್ವರನ ಮೃತದೇಹವನ್ನು ತೆರೆದ ಜಾಗದಲ್ಲಿ ಎಸೆದು, ಕೋಣೆಯಲ್ಲಾ ಕ್ಲೀನ್ ಮಾಡಿ ಆರೋಪಿ ದೇವಾಂಶ್ ವಾಘೋಡೆ ಘಾಡವಾಗಿ ನಿದ್ದೆ ಮಾಡಿದ್ದಾನೆ.

ಕೆಲವು ಸ್ಥಳೀಯರು ಕೊಠಡಿಯ ಬಳಿ ನೆಲದ ಮೇಲೆ ಬಿದ್ದಿರುವ ಶವವನ್ನು ಗಮನಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ.

ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕೊಲೆ ಆರೋಪದ ಮೇಲೆ ವಾಘೋಡೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights