ವಿಶ್ವ ಹೃದಯ ದಿನ : ಜಾಗೃತಿ ವಾಕಾಥನ್ ಅಭಿಯಾನದಲ್ಲಿ ವೈದ್ಯರ ಹೃದಯದ ಮಾತು

ವಿಶ್ವ ಹೃದಯ ದಿನದ ಅಂಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬೆಂಗಳೂರಿನ ತಥಾಗತ್ ಹೃದ್ರೋಗ ಆಸ್ಪತ್ರೆಯು ಜಾಗೃತಿ ವಾಕಾಥನ್ ಅಭಿಯಾನವನ್ನು ಹಮ್ಮಿಕೊಂಡಿತ್ತು.

ವಾಕಾಥಾನ್ ಕಾರ್ಯಕ್ರಮವನ್ನು ಜಯನಗರ ಶಾಸಕಿ ಸೌಮ್ಯ ರೆಡ್ಡಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು. ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಹೃದಯವೇ ನಿಂತು ಹೋದರೆ ಮಾನವನ ಪಯಣ ಮುಗಿದಂತೆ. ಪರಿಸರ ಮಾಲಿನ್ಯ ದಿಂದ ಕೂಡ ಹೃದಯ ಸಂಬಂಧಿಸಿದ ಕಾಯಿಲೆಗಳು ಬರುತ್ತಿವೆ. ಹಾಗಾಗಿ ಶುದ್ದ ನೀರು ಕುಡಿಯಬೇಕು. ಅಲ್ಲದೆ ಈ ಬಗ್ಗೆ ಯುವ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು ಎಂದರು.

ತಥಾಗತ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಿ.ಆರ್ ಮಾಹಾಂತೇಶ್ ಆರ್ ಚಾರಂತಿಮಠ ಮಾತನಾಡಿ, ಹೃದಯಕ್ಕೆ ಸಂಬಂಧಿಸಿದ ಖಾಯಿಲೆಯಿಂದಾಗಿ ವಿಶ್ವದಾದ್ಯಂತ ಪ್ರತಿವರ್ಷ 17.3 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ. ಹಿಂದುಳಿದ ಹಾಗೂ ಅಭಿವೃಧ್ಧಿ ಹೊಂದುತ್ತಿರುವ ದೇಶಗಳಲ್ಲಿ 80% ಜನ ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಹೃದಯವು ಮಾನವನ ದೇಹದ ಪ್ರಮುಖ ಅಂಗ. ಇಡಿ ದೇಹಕ್ಕೆ ಹೃದಯ ಶಕ್ತಿ ನೀಡುತ್ತದೆ. ಮಾನವ ದೇಹಕ್ಕೆ ಚೈತನ್ಯ ನೀಡುವ ಹೃದಯವನ್ನ ಚನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ.ಆದ್ರೆ ಜವಾಬ್ದಾರಿಯನ್ನ ಮರೆತ ಮನುಷ್ಯ, ಹೃದಯ ರೋಗ ಮತ್ತು ಪಾಶ್ರ್ವವಾಯು ಒಳಗೊಂಡಿರುವುದರಿಂದ ಹೃದಯ ರಕ್ತನಾಳದ ಖಾಯಿಲೆಗೆ ಒಳಗಾಗಬೇಕಾಗುತ್ತದೆ.

ಸಿವಿಡಿ ರೋಗವು ವಿಶ್ವದಲ್ಲಿ ಅತ್ಯಂತ ಅಪಾಯವಾದ ಖಾಯಿಲೆಯಾಗಿದೆ. ಈ ಖಾಯಿಲೆ ಪ್ರತಿ ವರ್ಷ 17.5 ಮಿಲಿಯನ್ ಜನರ ಸಾವಿಗೆ ಕಾರಣವಾಗಿದೆ. ಆತಂಕಕಾರಿ ವಿಷಯ ಎಂದರೆ, 2030ರ ಹೊತ್ತಿಗೆ ಸಾವಿನ ಸಂಖ್ಯೆ 23 ಮಿಲಿಯನಷ್ಟು ಏರಿಕೆಯಾಗುವ ಸಾದ್ಯತೆ ಇದೆ. ಈ ಕಾಯಿಲೆಗೆ ಮದ್ದು ನೀಡಬೇಕು. ಆರೋಗ್ಯಕ್ಕೆ ಪೂರಕವಾಗಿರುವ ಆಹಾರ ಸೇವಿಸುವುದು, ಚೆನ್ನಾಗಿ ನೀರು ಕುಡಿಯುವದು, ದಿನನಿತ್ಯ ವ್ಯಾಯಾಮ ಮಾಡಬೇಕು. ಧೂಮಪಾನ ನಿಲ್ಲಿಸುವುದು, ಸೇರಿದಂತೆ ಕೆಲ ಸಣ್ಣ ಸಣ್ಣ ಬದಲಾವಣೆಗಳು ಪ್ರತಿ ನಿತ್ಯ ಮಾಡಿದರೆ ಸಾಕು ನಮ್ಮ ಆರೋಗ್ಯ ನಾವು ಕಾಪಾಡಬಹದು.ಆ ಕಾರಣಕ್ಕಾಗಿ ತಥಾಗತ್ ಆಸ್ಪತ್ರೆ ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.ಇದೆ ವೇಳೆ ಕಾರ್ಯಕ್ರಮದಲ್ಲಿ ಆರ್.ಚಾಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ನ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ್, ಸಾಮಾಜಿಕ ಕಾರ್ಯಕರ್ತೆ ಆಶಾ ಎಂಬಿ ಪಾಟೀಲ್ ಈ ವೇಳೆ ಉಪಸ್ಥಿತರಿದ್ದರು.

ಸೆಪ್ಟೆಂಬರ್ 29 ರಂದು ವಿಶ್ವದಾದ್ಯಂತ ವಿಶ್ವ ಹೃದಯ ದಿನವನ್ನ ಆಚರಿಸುಲಾಗುತ್ತದೆ. ಅದರ ಭಾಗವಾಗಿ ತಥಾಗತ್ ಆಸ್ಪತ್ರೆಯು, ಪ್ರತಿ ವರ್ಷದಂತೆ ಈ ವರ್ಷವೂ ಆರೋಗ್ಯ ಜಾಗೃತಿ ಅಭಿಯಾನ ನಡೆಸಿತ್ತು. ಈ ಜಾಗೃತಿ ಕಾರ್ಯಕ್ರಮದಲ್ಲಿ ಯುವಕರು, ಮಹಿಳೆಯರು, ಶಾಲಾ – ಕಾಲೇಜು ವಿಧ್ಯಾರ್ಥಿಗಳು ಭಾಗವಹಿಸಿದ್ರು. ಇಂದು ಬೆಳ್ಳಿಗೆ 8 ಗಂಟೆಯಿಂದ ನಗರದ ಫ್ರೀಡಂ ಪಾರ್ಕ್ನಿಂದ ಮಲ್ಲೇಶ್ವರಂನ ಮಂತ್ರಿ ಮಾಲ್ ವರೆಗೂ ಜಾಗೃತಿ ಅಭಿಯಾನವನ್ನು ನಡೆಸಲಾಯ್ತು. ಈ ಅಭಿಯಾನದ ಮೂಲಕ ಸಾರ್ವಜನಿಕರಲ್ಲಿ ಹೃದಯ ರೋಗದ ಬಗ್ಗೆ ಜಾಗೃತಿ ಮೂಡಿಸುಲಾಯಿತ್ತು. ಮಂತ್ರಿ ಮಾಲ್ ಎದುರು ಇರುವ ಪಾರ್ಕ್ನಲ್ಲಿ ತಥಾಗತ್ ಹೃದ್ರೋಗ ಆಸ್ಪತ್ರೆಯು ಉಚಿತವಾಗಿ ಹೃದಯ ಚಿಕಿತ್ಸೆ ಹಾಗೂ ಮಧುಮೇಹ ಚಿಕಿತ್ಸೆ ನೀಡಲಾಯಿತು.

ಈ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಬೆಂಗಳೂರು ಸಿಟಿ ಕಾಲೇಜು ವಿದ್ಯಾರ್ಥಿಗಳು, ಮಲ್ಲಿಗೆ ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ, ಲಯನ್ಸ್ ಕ್ಲಬ್, ಮತ್ತು ಔಷಧೀಯ ಕಂಪನಿಗಳು ಕೈಜೋಡಿಸಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights