ಡಿಕೆಶಿಯಂತೆ ಕೀಳುಮಟ್ಟದ ರಾಜಕೀಯ ಮಾಡಲ್ಲ: ಕೆ.ಸುಧಾಕರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರೀತಿಯಲ್ಲಿ ನಾನು ಕೀಳುಮಟ್ಟದ ರಾಜಕಾರಣ ಮಾಡಲ್ಲ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕಠುವಾಗಿ ನುಡಿದಿದ್ದಾರೆ.
ಸುಧಾರಕ್ ಅವರು ಈಜುಕೊಳದಲ್ಲಿ ಮಕ್ಕಳೊಂದಿಗೆ ಈಜಾಡುತ್ತಿರುವ ತಮ್ಮ ಫೋಟೋವನ್ನು ಟ್ವೀಟ್ ಮಾಡಿದ್ದರು. ಈ ಫೋಟೋ ಕುರಿತು ಡಿಕೆಶಿ ಪ್ರತಿಕ್ರಿಸಿದ್ದರು.
ಇಡೀ ಜಗತ್ತು ಆರೋಗ್ಯ ಸಂಕಷ್ಟದಲ್ಲಿ ಸಿಲುಕಿರುವಾಗ, ಕೊರೊನಾ ನಿಯಂತ್ರಣದ ಉಸ್ತುವಾರಿ ಸಚಿವ ಡಾ.ಸುಧಾಕರ್ ಈಜುಕೊಳದಲ್ಲಿ ಸಮಯ ಕಳೆಯುವ ಮೂಲಕ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಇದು ಅವರ ನೈತಿಕತೆಯು ಎಂಥಹದೆಂದು ಸೂಚಿಸುತ್ತದೆ. ಹಾಗಾಗಿ ಅವರು ಸ್ವ ಇಚ್ಛೆಯಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಮುಖ್ಯಮಂತ್ರಿಯವರು ಸುಧಾರಕ್ ಅವರನ್ನು ಮಂತ್ರಿಮಂಡಲದಿಂದ ವಜಾಗೊಳಿಸಬೇಕು ಆಗ್ರಹಿಸಿದ್ದರು.
ಡಿ.ಕೆ.ಶಿವಕುಮಾರ್ ಅವರ ಟೀಕೆಗೆ ಪ್ರತಿಕ್ರಿಸಿರುವ ಸುಧಾರಕ್ ‘ನನಗೆ ಈವರೆಗೆ ಡಿ.ಕೆ.ಶಿವಕುಮಾರ್ ಅವರ ಸುದ್ಗುಣಗಳು ಮಾತ್ರ ಗೊತ್ತಿತ್ತು. ಆದರೆ, ಅವರ ದೊಡ್ಡ ಗುಣ ಗೊತ್ತಿರಲಿಲ್ಲ’ ಎಂದು ವ್ಯಂಗ್ಯವಾಗಿ ನುಡಿದ್ದಾರೆ.
ಅಲ್ಲದೆ, ವಿವಾಧ ಸೃಷ್ಠಿಸಿದ ತಮ್ಮ ಟ್ವೀಟ್ ಅನ್ನು ಅವರ ಟ್ವಿಟರ್ ಖಾತೆಯಿಂದ ಸುಧಾಕರ್ ಅಳಿಸಿ ಹಾಕಿದ್ದಾರೆ.

