ಸುಳ್ಳು ಲೆಕ್ಕ: ಮೋದಿ ಸರ್ಕಾರದಿಂದ 4 ಲಕ್ಷ ಕೋಟಿಗಳ ಬೃಹತ್ ದೇಶದ್ರೋಹೀ ಭ್ರಷ್ಟಾಚಾರ?

ಮೋದಿ ಸರ್ಕಾರದ ಹೊಸ ಪೆಟ್ರೋಲಿಯಂ ಮಂತ್ರಿ ಹರದೀಪ್ ಪುರಿ ಯವರು 2020-21 ನೇ ಸಾಲಿನಲೀ ಪೆಟ್ರೋಲ್-ಡೀಸೆಲ್ ಬೆಲೆ ಏರಿಸಿ ಜನರಿಂದ ಹೆಚ್ಚುವರಿಯಾಗಿ 3.4 ಲಕ್ಷ ಕೋಟಿ ರೂ. ಗಳನ್ನೂ ಸಂಗ್ರಹಿಸಲಾಗಿದೆ ಎಂದು ಮೊನ್ನೆ ಒಪ್ಪಿಕೊಂಡಿದ್ದಾರೆ.

ಆದರೆ ಅದರ ದೊಡ್ಡ ಭಾಗವನ್ನು ಜನರಿಗೆ ಉಚಿತ ವ್ಯಾಕ್ಸಿನ್ ಕೊಡಲು ಹಾಗು 2020 ರ ಏಪ್ರಿಲ್- ನವಂಬರ್ ಹಾಗು 2021 ರ ಮೇ-ಜೂನ್, ಒಟ್ಟು ಹತ್ತು ತಿಂಗಳ ಕಾಲ 80 ಕೋಟಿ ಜನರಿಗೆ ಉಚಿತ ಪಡಿತರ ನೀಡಲು ವ್ಯಯ ಮಾಡಲಾಗಿದೆ ಎಂದು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ…

(https://www.organiser.org/Encyc/2021/7/27/Petroleum-Excise-Duty-Cess-Used-to-Provide-Free-Vaccines-Relief-to-Poor-Says-Union-Minister-Hard.html)

ಈ ಹೇಳಿಕೆಯ ಮೂಲಕ ಮೋದಿ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ ಬಂದಿದೆ… :

ಮೊದಲಿಗೆ- ವ್ಯಾಕ್ಸಿನ್ ಉಚಿತವಾಗೇನೂ ಕೊಡುತ್ತಿಲ್ಲ..

ಮೋದಿ ಸರ್ಕಾರವು ಬಡ-ಮಧ್ಯಮ ವರ್ಗದ ಜನರಿಂದ ಸುಲಿದ ತೆರಿಗೆಯಿಂದ ಜನರಿಗೆ ವ್ಯಾಕ್ಸಿನ್-ಪಡಿತರ ಕೊಡುತ್ತಿದೆಯೇ ವಿನಾ, ಶ್ರೀಮಂತರಿಗೆ ತೆರಿಗೆ ಹಾಕುವ ಮೂಲಕವೋ, ಅಥವಾ ಸರ್ಕಾರದ ದುಂದು ವೆಚ್ಚಗಳನ್ನೋ ಕಡಿಮೆ ಮಾಡುವುದರಿಂದಲ್ಲ.

ಅರ್ಥಾತ್ ಸರ್ಕಾರ ಬಡವರಿಗೆ ಅವರಿಂದ ಸಂಗ್ರಹಿಸಿದ ಹಣದಿಂದಲೇ ವ್ಯಾಕ್ಸಿನ್- ಪಡಿತರ ಕೊಡುತ್ತಿದೆಯೇ ವಿನಾ ಉಚಿತವಾಗಿಯಲ್ಲ…

ಆದ್ದರಿಂದ ಮೊದಲು ಉಚಿತ ವ್ಯಾಕ್ಸಿನ್, ಉಚಿತ ಪಡಿತರ ಎನ್ನುವ ಜನವಂಚಕ ಪ್ರಚಾರವನ್ನು ನಿಲ್ಲಿಸಬೇಕು…

ಎರಡನೆಯದಾಗಿ- ಉಳಿದ ಮೂರು ಕೋಟಿಗೆ ಲೆಕ್ಕವೆಲ್ಲಿ?
ಸರ್ಕಾರದ
ಅಧಿಕೃತ ಹೇಳಿಕೆಯ ಪ್ರಕಾರ ಜುಲೈ 29 ರವರೆಗೆ ಕೇವಲ 45 ಕೋಟಿ ವ್ಯಾಕ್ಸಿನ್ ಗಳನ್ನೂ ಜನರಿಗೆ ಮಾಡಿದೆ. (https://www.mohfw.gov.in/)

ಅದರ ಒಟ್ಟಾರೆ ಸರಾಸರಿ ಬೆಲೆ ವ್ಯಾಕ್ಸಿನ್ ಒಂದಕ್ಕೆ 500 ರೂ. ಎಂದಿಟ್ಟುಕೊಂಡರೂ ಈವರೆಗೆ ಸರ್ಕಾರ ಈ ಬಾಬತ್ತಿನಲ್ಲಿ ವೆಚ್ಚ ಮಾಡಿರುವುದು ಕೇವಲ 23,000 ಕೋಟಿ ರೂ. ಮಾತ್ರ ಎಂದಾಯಿತು!

ಅಂದರೆ ಪೆಟ್ರೋಲ್ ಬೆಲೆ ಏರಿಕೆಯಿಂದ ಸಂಗ್ರಹಿಸಿದ 3.4 ಲಕ್ಷ ಕೋಟಿಯ ಶೇ. 6.7 ಭಾಗ ಮಾತ್ರ

…ಉಳಿದದ್ದೇನಾಯ್ತು?

ವ್ಯಾಕ್ಸಿನ್ ಗಾಗಿ ಎಂದೇ 2021ರ ಬಜೆಟ್ಟಿನಲ್ಲಿ ಪೆಟ್ರೋಲ್ ತೆರಿಗೆಯನ್ನು ಹೊರತುಪಡಿಸಿ 66,000 ಕೋಟಿಗಳನ್ನು ಎತ್ತಿಡಲಾಗಿತ್ತು…

ಪೆಟ್ರೋಲ್ ಬೆಲೆ ಏರಿಕೆಯಿಂದ ಸಂಗ್ರಹಿಸಿದ ಹಣದಲ್ಲಿ ವ್ಯಾಕ್ಸಿನ್ ಕೊಡುತ್ತಿರುವುದಾದರೆ, ಅದಕ್ಕೆ ಮುಂಚೆಯೇ ಬಜೆಟ್ನಲ್ಲಿ ಎತ್ತಿಟ್ಟಿದ್ದ ವ್ಯಾಕ್ಸಿನ್ ಹಣದ ಲೆಕ್ಕವೇನು?

– 2020 ಮತ್ತು 2021 ರಲ್ಲಿ ಒಟ್ಟು ಹತ್ತು ತಿಂಗಳ ಕಾಲ 80 ಜನರಿಗೆ ಉಚಿತ ಪಡಿತರ ನೀಡಲು ಆದ ಖರ್ಚೆಷ್ಟು?

1.2 ಲಕ್ಷ ಕೋಟಿ ರೂಪಾಯಿಗಳು.

ಆದರೆ ಇದೆಲ್ಲವೂ ವಿಶೇಷ ಅಥವಾ ಹೆಚ್ಚುವರಿ ವೆಚ್ಚವಲ್ಲ.

2013 ರಲ್ಲಿ ಆಹಾರ ಭದ್ರತಾ ಕಾಯಿದೆ ಜಾರಿಯಾದ ಮೇಲೆ ಈ ದೇಶದ 83 ಕೋಟಿ ಜನರಿಗೆ ಪ್ರತಿವರ್ಷ ರಿಯಾಯತಿ ದರದಲ್ಲಿ ಆಹಾರ ಪಡಿತರವನ್ನು ಒದಗಿಸಲು ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗೆ ಪ್ರತಿವರ್ಷ ಕೇಂದ್ರ ಬಜೆಟ್ಟಿನಿಂದ ಹಣವನ್ನು ಒದಗಿಸಲಾಗುತ್ತದೆ.

ಅದರ ಭಾಗವಾಗಿಯೇ 2020ರಲ್ಲೇ ಈ ಬಾಬತ್ತಿಗೆ ಕೇಂದ್ರ ಬಜೆಟ್ಟಿನಲ್ಲಿ 1.15 ಲಕ್ಷ ಕೋಟಿ ಎತ್ತಿಡಲಾಗಿತ್ತು.!

ಹೀಗಾಗಿ ಈ ಬಾರಿ ಕೋವಿಡ್ ನಿಂದಾಗಿ ಬಜೆಟ್ಟಿನಲ್ಲಿ ಎತ್ತಿಟ್ಟ ಹಣದ ಜೊತೆಗೆ ಸರ್ಕಾರಕ್ಕೆ ಹೆಚ್ಚೆಂದರೆ 15,000 ಕೋಟಿ ಖರ್ಚಾಗಿರಬಹುದು ..

ಅಂದರೆ …

ವ್ಯಾಕ್ಸಿನ್ ಗಾಗಿ 25,000 ಕೋಟಿ

ಪಡಿತರಕ್ಕಾಗಿ 15,000 ಕೋಟಿ

ಒಟ್ಟು 40,000 ಕೋಟಿ …

ಪೆಟ್ರೋಲ್ ತೆರಿಗೆಯಿಂದ ಸಂಗ್ರಹಿಸಿದ

3.4 ಲಕ್ಷ ಕೋಟಿ ಯಲ್ಲಿ 40,000 ಕೋಟಿ ಕಳೆದರೆ ಉಳಿದ 3 ಲಕ್ಷ ಕೋಟಿ ಗಳ ಲೆಕ್ಕ???

– ಇನ್ನು ಭಾರತದ ಎಲ್ಲಾ ಜನರಿಗೆ ಬೇಕಿರುವ, ಮುಂದಿನ ವರ್ಷದ ಕೊನೆಯ ವೇಳೆಗೆ ಹಾಕಬಹುದಾದ, 200 ಕೋಟಿ ವ್ಯಾಕ್ಸಿನ್ ಗಳಿಗೆ ವೆಚ್ಚವಾಗುವುದು 1 ಲಕ್ಷ ಕೋಟಿ …

ಇದನ್ನೂ ಓದಿ: Pegasus ಗೂಢಚರ್ಯೆಯ ಅಸಲಿ ಕ್ರೋನಾಲಜಿ ಏನು ಗೊತ್ತೇ? ಡೀಟೇಲ್ಸ್‌

ಅದನ್ನೂ ಈಗಲೇ ಸೇರಿಸಿಬಿಟ್ಟರೂ ಸರ್ಕಾರಕ್ಕೆ ಒಟ್ಟಾರೆ ಯಾಗಿ ಮುಂದಿನ ಎರಡು ವರ್ಷಗಳಿಗೆ ಕೋವಿಡ್ ಹೆಚ್ಚುವರಿಯಾಗಿ ವೆಚ್ಚವಾಗುವುದು 1.15 ಲಕ್ಷ ಕೋಟಿ ಮಾತ್ರ..

ಕಳೆದ ಒಂದು ವರ್ಷದಲ್ಲಿ ಜನರಿಂದ ಸುಲಿದಿರುವ 3.4 ಲಕ್ಷ ಕೋಟಿಯಲ್ಲಿ 1.15 ಲಕ್ಷ ಕೋಟಿ ತೆಗೆದರೂ ಸರ್ಕಾರ ಕೋವಿಡ್ ಹೆಸರಲ್ಲಿ 2.25 ಲಕ್ಷ ಕೋಟಿ ರೂ. ಗಳು ಲೆಕ್ಕ ಕೊಡದ ಸುಲಿಗೆ ಎಂದಾಯಿತು..ಅಲ್ಲವೇ?

ಮೂರನೆಯದಾಗಿ: ಈಗಲಾದರೂ ಪೆಟ್ರೋಲ್ ಬೆಲೆ ಕಡಿಮೆ ಯಾಗಬೇಕಲ್ಲವೇ?

ಏನಿಲ್ಲವೆಂದರೂ ಇಡೀ ದೇಶಕ್ಕೆ ವ್ಯಾಕ್ಸಿನ್ ಹಾಕಲು ಬೇಕಿರುವ ಹಣದ ಮೂರು ಪಟ್ಟು…

ಹಾಗು ಪಡಿತರಕ್ಕೆ ಬೇಕಿರುವ ಮೂರು ಪಟ್ಟು ಹಣವನ್ನು..

ಒಂದೇ ವರ್ಷದಲ್ಲಿ ಪೆಟ್ರೋಲ್ ತೆರಿಗೆಯ ಮೂಲಕ ಸಂಗ್ರಹಿಸಲಾಗಿದೆಎಂದ ಮೇಲೆ…

ಈಗಲಾದರೂ ಪೆಟ್ರೋಲ್ ಬೆಲೆ ಕಡಿಮೆ ಮಾಡಬಹುದಲ್ಲವೇ?

ಆದ್ದರಿಂದ…

ಜನರ ಬಲಗೈಯನಲ್ಲಿರುವುದನ್ನು ಕಸಿದೂ ಎಡಗೈಗೆ ಕೊಟ್ಟು ಉಚಿತವಾಗಿ ಕೊಡಲಾಗುತ್ತಿದೆ ಎಂದು ಪ್ರಚಾರ ಮಾಡಿಕೊಳ್ಳುವುದು ಐಪಿಸ್ ಸೆಕ್ಷನ್ 415-420 ರ ಕಲಮುಗಳಡಿ ಮೋಸ, ವಂಚನೆ ಎಂಬ ಅಪರಾಧವಲ್ಲವೇ?

ವ್ಯಾಕ್ಸಿನ್ ಹೆಸರಿನಲ್ಲಿ ಅಗತ್ಯಕ್ಕಿಂತ ಮೂರು ಪಟ್ಟು ಹಣವನ್ನು ಸಂಗ್ರಹಿಸಿ ತಪ್ಪು ಲೆಕ್ಕವನ್ನು ನೀಡುವುದು ದೇಶದ್ರೋಹವಲ್ಲವೇ? ಸರ್ಕಾರಿ ಅಧಿಕಾರದ ದುರುಪಯೋಗವಲ್ಲವೇ?

ಕೋವಿಡ್ ಸಂಕಷ್ಟದಲ್ಲಿಯೂ ಬಡ-ಮಧ್ಯಮ ವರ್ಗದವರಿಂದ ಸುಲಿದ 3.4+0.60=4ಲಕ್ಷ ಕೋಟಿ ಗುಳುಂ ಮಾಡಿರುವುದು ಭ್ರಷ್ಟಾಚಾರವಲ್ಲವೇ?

– ಶಿವಸುಂದರ್

ಇದನ್ನೂ ಓದಿ: ಸಂವಿಧಾನ ರಚನೆಯಲ್ಲಿ ವಿಳಂಬದ ಕುರಿತ 1949ರ ಕಾಟೂರ್ನ್; 2012ರಲ್ಲಿ ಸದ್ದು ಮಾಡಿದ್ದೇಕೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights