FACT CHECK | ಪಾಕಿಸ್ತಾನದ ಮೇಲಿನ ದಾಳಿಗೆ ಪ್ರಧಾನಿ ಮೋದಿ ವಿಷಾದ ವ್ಯಕ್ತಪಡಿಸಿದ್ರಾ?

ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆದ ಸಂಘರ್ಷದ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಕ್ಷಮೆಯಾಚಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೊಗಳಲ್ಲಿ ಪ್ರಧಾನಿ ಮೋದಿ ಪಾಕಿಸ್ತಾನದೊಂದಿಗಿನ ದಾಳಿ ಪ್ರತಿದಾಳಿಯ ಬಗ್ಗೆ, ಈ ಸಂಘರ್ಷ ದೇಶದ ಮೇಲೆ ಉಂಟುಮಾಡಿದ ವಿನಾಶದ ಬಗ್ಗೆ ಮಾತನಾಡುತ್ತಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದ್ದು ಪೋಸ್ಟ್‌ಗಳಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸಸಸೋ.

ಫ್ಯಾಕ್ಟ್‌ಚೆಕ್‌ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಎರಡೂ ವಿಡಿಯೋಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ.

ವಿಡಿಯೋ-1

ಈ ವಿಡಿಯೋದಲ್ಲಿ, ಪ್ರಧಾನಿ ಮೋದಿ ಹಿಂದಿಯಲ್ಲಿ ಮಾತನಾಡುತ್ತಾ, “ನಾವು ಪಾಕಿಸ್ತಾನವನ್ನು ದುರ್ಬಲಗೊಳಿಸಬಹುದೆಂದು ಭಾವಿಸಿದ್ದೆವು. ಆದರೆ ಇಂದು ನಾವೇ ಛಿದ್ರಗೊಂಡಿದ್ದೇವೆ. ದಯವಿಟ್ಟು ಇನ್ನು ಮುಂದೆ ನಮ್ಮನ್ನು ಹಿಂಸಿಸಬೇಡಿ. ನಮಗೆ ಶಾಂತಿ ಬೇಕು.. ಈ ಯುದ್ಧವನ್ನು ಕೊನೆಗೊಳಿಸಿ. ದಯವಿಟ್ಟು ನಮ್ಮನ್ನು ಕ್ಷಮಿಸಿ” ಎಂದು ಹೇಳುವುದನ್ನು ಕಾಣಬಹುದು. ಆ ವಿಡಿಯೋದಲ್ಲಿ ಅವರ ಮುಖದ ಅಸ್ವಾಭಾವಿಕ ಚಲನೆಗಳು ಕಂಡುಬಂದಿದ್ದು, ಪ್ರಧಾನಿ ಮೋದಿಯವರ ಧ್ವನಿಯು ಅವರ ಇತರ ವೀಡಿಯೊಗಳಲ್ಲಿ ಸಾಮಾನ್ಯವಾಗಿ ಕೇಳಿಬರುವ ಧ್ವನಿಗೆ ಹೊಂದಿಕೆಯಾಗಲಿಲ್ಲ.

ವೈರಲ್ ವೀಡಿಯೊದ 20 ಸೆಕೆಂಡುಗಳ ಮಾದರಿ ಕ್ಲಿಪ್ ಅನ್ನು ನಾವು  ಹೈವ್ ಮಾಡರೇಟರ್ ಬಳಸಿ ವಿಶ್ಲೇಷಿಸಿದ್ದೇವೆ. ಫಲಿತಾಂಶಗಳು ವೀಡಿಯೊವು AI- ರಚಿತ ಅಥವಾ ಡೀಪ್‌ಫೇಕ್ ವಿಷಯವನ್ನು ಒಳಗೊಂಡಿರುವ ಸಾಧ್ಯತೆ ಶೇಕಡ 99.6 ರಷ್ಟು ಇದೆ ಎಂದು ಪಲಿತಾಂಶ ನೀಡಿತ್ತು. ಈ ಮೂಲಕ ವೈರಲ್‌ ವಿಡಿಯೋ ಡೀಪ್‌ಫೇಕ್‌ನಿಂದ ರಚಿಸಲಾಗಿದೆ ಎಂಬುದು ನಮಗೆ ಖಚಿತವಾಗಿದೆ.

ವಿಡಿಯೋ-2

ವೀಡಿಯೊದಲ್ಲಿ, ಪ್ರಧಾನಿ ಮೋದಿ ಪಾಕಿಸ್ತಾನದೊಂದಿಗಿನ ಯುದ್ಧ, ಯುದ್ಧವು ದೇಶದ ಮೇಲೆ ಉಂಟುಮಾಡಿದೆ ಎಂದು ಹೇಳಲಾದ ವಿನಾಶ ಮತ್ತು ನಂತರದ ಕದನ ವಿರಾಮದ ಬಗ್ಗೆ ಮಾತನಾಡುವುದನ್ನು ಕೇಳಬಹುದು. ಆದಾಗ್ಯೂ, ಈ ವೀಡಿಯೊವು ದೇಹ ಭಾಷೆಯಿಂದ ಸಂಪರ್ಕ ಕಡಿತಗೊಂಡ ವಿಚಿತ್ರವಾದ ಮುಖ ಚಲನೆಗಳನ್ನು ಸಹ ಹೊಂದಿದೆ. ಆಡಿಯೋ ಅನೇಕ ಅಸ್ವಾಭಾವಿಕ ವಿರಾಮಗಳೊಂದಿಗೆ ರೋಬೋಟಿಕ್ ಆಗಿದೆ. ವೈರಲ್ ವೀಡಿಯೊದ 20 ಸೆಕೆಂಡುಗಳ ಮಾದರಿ ಕ್ಲಿಪ್ ಅನ್ನು ಡೀಪ್‌ವೇರ್ ಬಳಸಿ ವಿಶ್ಲೇಷಿಸಲಾಗಿದೆ .ವೀಡಿಯೊ ಡೀಪ್‌ಫೇಕ್ ಎಂದು ಕಂಡುಬಂದಿದೆ. ನಾಲ್ಕು ಮಾದರಿಗಳಲ್ಲಿ ಮೂರು ವೀಡಿಯೊ ಶೇಕಡಾ 98 ಕ್ಕಿಂತ ಹೆಚ್ಚು ಡೀಪ್‌ಫೇಕ್ ಎಂದು ಫಲಿತಾಂಶ ನೀಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದೊಂದಿಗಿನ ದಾಳಿ ಪ್ರತಿದಾಳಿಯ ಬಗ್ಗೆ ಮಾತನಾಡಿ ಪಾಕಿಸ್ತಾನದ ಬಳಿ ಕ್ಷಮೆ ಕೇಳಿದ್ದಾರೆ ಎಂಬುದು ಸಂಪೂರ್ಣ ಸುಳ್ಳು. ವೈರಲ್‌ ವಿಡಿಯೋ ಡೀಪ್‌ಫೇಕ್‌ ಆಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ರಾ ಪಾಕ್ ಪ್ರಧಾನಿ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights