ಮಂಡ್ಯ ಮನ್ಮುಲ್ ನಲ್ಲಿ SMK ಬೆಂಬಲಿಗನಿಗೆ ಮಣೆ : ಸಿ.ಎಂ. ಆದೇಶದ ವಿರುದ್ದ ಸಿಡಿದೆದ್ದ ಜಿಲ್ಲಾಧ್ಯಕ್ಷ

ಮಂಡ್ಯದ ಹಾಲು ಒಕ್ಕೂಟಕ್ಕೆ ಈಗಷ್ಟೆ ಚುನಾವಣೆ ಮುಗಿದಿದೆ. ಇನ್ನೇನು ಅಧ್ಯಕ್ಷರ ಆಯ್ಕೆಯಾಗಿಬೇಕಿದೆ.‌ಇದರ ನಡುವೆ ರಾಜ್ಯದ ಸಿ.ಎಂ.ಬಿಎಸ್ವೈ ಮನ್ಮುಲ್ ಗೆ ಮಾಜಿ ಸಿ.ಎಂ.SM ಕೃಷ್ಣರ ಬೆಂಬಲಿಗನನ್ನು ಸರ್ಕಾತದಿಂದ ನಾಮ ನಿರ್ದೇಶನ ಮಾಡಿದೆ. ಇದ್ರಿಂದ ಸಿಟ್ಟಿಗೆದ್ದಿರೋ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಂ.‌ವಿರುದ್ದವೇ ಸಿಡಿದೆದಿದ್ದು ಬಿಜೆಪಿ ಗೆ ರಾಜ್ಯಾಧ್ಯಕ್ಷರಿಗೆ ಸಿ.ಎಂ.ಆದೇಶಕ್ಕೆ ತಡೆ ನೀಡುವಂತೆ ಪತ್ರ ಬರೆದಿದಿದ್ದಾರೆ.

ಹೌದು! ಇತ್ತೀಚೆಗೆ ಮಂಡ್ಯ ಹಾಲು ಒಕ್ಕೂಟದ ಚುನಾವಣೆ ಮುಗಿದು ನಿರ್ದೇಶಕರಾಗಿ ೧೨ ಜನ್ರು‌ ಆಯ್ಕೆಯಾಗಿದ್ದಾರೆ. ಸೆ-೨೨ ಕ್ಕೆ ಹಾಲು ಒಕ್ಕೂಟದ ಚುನಾವಣೆ ನಿಗದಿಯಾಗಿದ್ದು, ಈ‌ ನಡುವೆ ಸರ್ಕಾರದ ನಾಮಿನಿ ನಿರ್ದೇಶಕ ನಾಗಿ ಮಾಜಿ ಸಿ.ಎಂ. ಬಿಜೆಪಿಯ ಎಸ್.ಎಂ ಕೃಷ್ಣರ ಬೆಂಬಲಿಗನಾಗಿರೋ ಮದ್ದೂರು ತಾಲೂಕಿನ ಹೂತಗೆರೆಯ ಪ್ರಸನ್ನರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.‌ಸಿ.ಎಂ‌. ಬಿಎಸ್ವೈ ಸ್ವತಃ ಈ ಆದೇಶ‌ ಹೊರಡಿಸಿದ್ದು ಮಾಜಿ ಸಿ.ಎಂ‌ ಎಸ್.ಎಂ.ಕೆ ಬೆಂಬಲಿಗನಿಗೆ ಮಣೆ ಹಾಕಲಾಗಿದ್ದು,SMK ಬೆಂಬಲಿಗ ಆಯ್ಕೆ ಮಾಡಿದ್ದಕ್ಕೆ ಸಿ.ಎಂ‌. ಬಿಎಸ್ವೈ ಸೇರಿ ಪಕ್ಷದ ಮುಖಂಡರಿಗೆ ನೂತನ‌ ನಾಮಿನಿ ನಿರ್ದೇಶಕ ಪ್ರಸನ್ನ ಕೃತಜ್ಞತೆ ಅರ್ಪಿಸಿದ್ದಾರೆ.

ಇನ್ನು ಸರ್ಕಾರದಿಂದ SMK ಬೆಂಬಲಿಗನಿಗೆ ಮಣೆ ಹಾಕಿರೋದು ಜಿಲ್ಲೆಯ ಬಿಜೆಪಿಯಲ್ಲಿ ಕೆಲವರ ಭಿನ್ನಮತಕ್ಕೆ ಕಾರಣವಾಗಿದೆ. ಇದ್ರಿಂದ ಅಸಮಧಾನಗೊಂಡಿರೋ‌ ಮಂಡ್ಯದ ಬಿಜೆಪಿ ಜಿಲ್ಲಾಧ್ಯಕ್ಷ ನಾಗಣ್ಣಗೌಡ ‌ಈ‌ ಆದೇಶಕ್ಕೆ ತಡೆ ನೀಡಿವಂತೆ ಸಿ.ಎಂ. ಸೇರಿದಂತೆ ಪಕ್ಷದ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದು ತಮ್ಮ ಅಸಮಧಾನ ಹೊರ ಹಾಕಿದ್ದಾರೆ. ಆದ್ರೆ ನಗರದ ಘಟದ ಅಧ್ಯಕ್ಷ ಅರವಿಂದ್ ಮಾತ್ರ ಸಿ.ಎಂ.ನಿರ್ಧಾರದ ಆದೇಶವನ್ನು ಸ್ವಾಗತಿಸಿದ್ದು ಎಲ್ರು ಸಿ.ಎಂ.‌ ಮತ್ತು ಪಕ್ಷದ ಆದೇಶವನ್ನು ಗೌರವಿಸುವಂತೆ ಕರೆ ನೀಡಿದ್ದಾರೆ. ಇತ್ತ ನೂತನ‌ ನಾಮಿನಿಯಾಗಿರುವ ಪ್ರಸನ್ನ ಜಿಲ್ಲೆಯಲ್ಲಿರುವ ಪಕ್ಷದ ಮುಖಂಡರ ಮನೆಗೆ ಭೇಟಿ‌ ನೀಡಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡ್ತಿದ್ದು, ಅಸಮಧಾನ ಇರೋದು‌ ಸಹಜ.ಇದನ್ನ ನಮ್ಮ ನಮ್ಮಲ್ಲೇ ಬಗೆಹರಿಸಿಕೊಂಡು ಒಗ್ಗಟ್ಟಿನಿಂದ ಹೋಗುವುದಾಗಿ ತಿಳಿಸಿ ಮನ್ಮುಲ್ ನ‌ ಅಧಿಕಾರ ಹಿಡಿಯೋದಾಗಿ ತಿಳಿಸಿದ್ರು.

ಒಟ್ಟಾರೆ ಮಂಡ್ಯ ಹಾಲು ಒಕ್ಕೂಟಕ್ಕೆ ನಾಮ ನಿರ್ದೇಶನದ ವಿಷಯದಲ್ಲಿ ಮಂಡ್ಯ ಬಿಜೆಪಿಯಲ್ಲಿ ಪರ ವಿರೋಧ ವ್ಯಕ್ತವಾಗ್ತಿದ್ದು,ಮನ್ಮುಲ್ ನ ಅಧಿಕಾರದ ಗದ್ದುಗೆ ಹಿಡಯುವ ಆಶಾಭಾವನೆ ಇರೋ ಬಿಜೆಪಿ ವರಿಷ್ಟರುಇದೀಗ ಒಗ್ಗಟ್ಟಿನ ಮಂತ್ರದ ಮೂಲಕ ಜಿಲ್ಲೆಯ ಭಿನ್ನಮತ ಶಮನಕ್ಕೆ ಮುಂದಾಗಿದೆ.‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights