ಸಾಹುಕಾರ ಸಿಡಿ ಪ್ರಕರಣ : ರಮೇಶ್ ಜಾರಕಿಹೊಳಿ ಮನೆಗೆ ಇಂದ್ರಜಿತ್ ಲಂಕೇಶ್ ಭೇಟಿ…!
ರಮೇಶ್ ಜಾರಕಿಹೊಳಿ ಸಿಡಿ ವಿಚಾರದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಇತ್ತ ಸದಾಶಿವನಗರದ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಇಂದ್ರಜಿತ್ ಲಂಕೇಶ್ ಭೇಟಿ ನೀಡಿದ್ದಾರೆ.
ಡ್ರಗ್ಸ್ ಕೇಸ್ ವಿಚಾರವಾಗಿ ದೊಡ್ಡ ಬಾಂಬ್ ಸಿಡಿದ್ದ ಇಂದ್ರಜಿತ್ ಲಂಕೇಶ್ ಜಾರಕಿಹೊಳಿ ಮನೆಗೆ ಭೇಟಿ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ರಮೇಶ್ ಮನೆಗೆ ಭೇಟಿ ನೀಡಿದ ಇಂದ್ರಜಿತ್ ಮಾದ್ಯಮಕ್ಕೂ ಪ್ರತಿಕ್ರಿಯಿಸದೆ ಹೋರಟು ಹೋಗಿದ್ದಾರೆ. ಅರ್ಧಗಂಟೆಗೂ ಹೆಚ್ಚು ಕಾಲ ಇಂದ್ರಜಿತ್ ಸಾಹುಕಾರ್ ನೊಂದಿಗೆ ಮಾತನಾಡಿದ್ದಾರೆ.
ಇದು ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ. ಡ್ರಗ್ಸ್ ಬಾಂಬ್ ಹಾಕಿ ಇಡೀ ಸ್ಯಾಂಡಲ್ ವುಡ್ ನಿದ್ದೆಗೆಡಿಸಿದ್ದ ಇಂದ್ರಜಿತ್ ಸದ್ಯ ರಮೇಶ್ ಮನೆಗೆ ಯಾಕೆ ಭೇಟಿ ನೀಡಿದ್ದರು ಎನ್ನುವ ಅನುಮಾನ ಶುರುವಾಗಿದೆ.
ಸಿಡಿ ಕಾನೂನು ಸಮರ ವಿಚಾರಕ್ಕೆ ರಮೇಶ್ ನಿನ್ನೆ ತಡರಾತ್ರಿವರೆಗೂ ಚರ್ಚೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಇಂದ್ರಜಿತ್ ಭೇಟಿ ಭಾರಿ ಅನುಮಾನಗಳಿಗೆ ಕಾರಣವಾಗಿದೆ.

