ಚಲಿಸುವ ಕಾರಿನ ಮೇಲೆ ಯುವಕನ ಅಪಾಯಕಾರಿ ಪುಷ್-ಅಪ್! ವಿಡಿಯೋ ವೈರಲ್!

ಚಲಿಸುವ ಕಾರಿನ ಮೇಲೆ ವ್ಯಕ್ತಿಯೋರ್ವ ಅಪಾಯಕಾರಿ ಪುಷ್-ಅಪ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಉಜ್ವಾಲ್ ಯಾದವ್ ಎನ್ನುವ ವ್ಯಕ್ತಿ ಈ ಅಪಾಯಕಾರಿ ಸ್ಟಂಟ್ ಮಾಡಿದ್ದಾರೆ. ವಾಹನ ಚಲಿಸುತ್ತಿದ್ದ ಯಾದವ್ ಕಾರ್ ಡೋರ್ ತೆಗೆದು ತಕ್ಷಣ ಕಾರ್ ಮೇಲೆ ಹತ್ತಿ ಪುಷ್-ಅಪ್ ಮಾಡಿದ ವಿಡಿಯೋಗೆ ಪ್ರಶಂಸೆ ವ್ಯಕ್ತವಾದರೆ ಮತ್ತೊಂದು ಕಡೆ ಪೊಲೀಸರು ವ್ಯಕ್ತಿಗೆ ಎಚ್ಚರಿಕೆ ನೀಡಿದ್ದಾರೆ. ಮಾತ್ರವಲ್ಲದೇ ಯಾದವ್ ಕಾರ್ ಚಾಲನೆಗಾಗಿ ಯಾರನ್ನೂ ಬಳಸಿಕೊಂಡಿಲ್ಲ. ಚಲಿಸುತ್ತಿದ್ದ ವಾಹನದ ಮೇಲೆ ತಾವೇ ಹತ್ತಿ ಸ್ಟಂಟ್ ಮಾಡಿದ್ದಾರೆ. ಕಿರು ಕ್ಲಿಪ್ ಅನ್ನು ಯುಪಿ ಪೊಲೀಸರು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದು ಇದು ಶಿಕ್ಷಾರ್ಹ ಅಪರಾಧ ಎಂದಿದ್ದಾರೆ.

ಉಜ್ವಾಲ್ ಯಾದವ್ ಕ್ಲಿಪ್ನಲ್ಲಿ ಕ್ಷಮೆಯಾಚಿಸಿದ್ದಾರೆ. “ನನ್ನ ಹೆಸರು ಉಜ್ವಾಲ್ ಯಾದವ್. ನಾನು ಈ ಕಾರಿನೊಂದಿಗೆ ಅಪಾಯಕಾರಿ ವೀಡಿಯೊವನ್ನು ಮಾಡಿದ್ದೇನೆ. ಭವಿಷ್ಯದಲ್ಲಿ ನಾನು ಇದನ್ನು ಎಂದಿಗೂ ಮಾಡುವುದಿಲ್ಲ” ಎಂದಿದ್ದಾರೆ. ಯುಪಿ ಪೊಲೀಸರು ಪೋಸ್ಟ್ ಮಾಡಿದ ವೀಡಿಯೊದ ಶೀರ್ಷಿಕೆಯಲ್ಲಿ “ಡ್ರೈವಿಂಗ್ ಮಾಡುವಾಗ ಸಾಹಸವನ್ನು ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಮತ್ತು ಇದು ನಿಮಗೆ ಮತ್ತು ನಿಮ್ಮ ಸುತ್ತಮುತ್ತಲಿನ ಇತರರಿಗೆ ಹಾನಿಕಾರಕವಾಗಿದೆ” ಎಂದು ಬರೆದಿದ್ದಾರೆ.

ಪೋಸ್ಟ್ ಅನ್ನು ಇಲ್ಲಿ ನೋಡಿ:

ಯುಪಿ ಪೊಲೀಸರು ಪೋಸ್ಟ್ ಮಾಡಿದ ವಿಡಿಯೋ 61,000 ಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾಮೆಂಟ್ಗಳ ವಿಭಾಗದಲ್ಲಿ ಜನರು ಯುಪಿ ಪೊಲೀಸರನ್ನು ಶ್ಲಾಘಿಸಿದರು.

ಕಾಮೆಂಟ್ಗಳನ್ನು ಇಲ್ಲಿ ನೋಡಿ:
ಹಲವಾರು ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಯುಪಿ ಪೊಲೀಸರ ಸೃಜನಶೀಲ ಪೋಸ್ಟ್‌ಗಳನ್ನು ಶ್ಲಾಘಿಸಿದ್ದಾರೆ.

https://twitter.com/SKYwithnolimits/status/1371030210271879171?ref_src=twsrc%5Etfw%7Ctwcamp%5Etweetembed%7Ctwterm%5E1371030210271879171%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-does-push-ups-on-roof-of-moving-car-in-viral-video-here-s-what-up-police-did-next-1779816-2021-03-16

https://twitter.com/kashyaptwitt/status/1370664128793079811?ref_src=twsrc%5Etfw%7Ctwcamp%5Etweetembed%7Ctwterm%5E1370664128793079811%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-does-push-ups-on-roof-of-moving-car-in-viral-video-here-s-what-up-police-did-next-1779816-2021-03-16

https://twitter.com/Rajradha123/status/1370709774942183428?ref_src=twsrc%5Etfw%7Ctwcamp%5Etweetembed%7Ctwterm%5E1370709774942183428%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-does-push-ups-on-roof-of-moving-car-in-viral-video-here-s-what-up-police-did-next-1779816-2021-03-16

https://twitter.com/IMNARENDRA17/status/1370732377325015041?ref_src=twsrc%5Etfw%7Ctwcamp%5Etweetembed%7Ctwterm%5E1370732377325015041%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-does-push-ups-on-roof-of-moving-car-in-viral-video-here-s-what-up-police-did-next-1779816-2021-03-16

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights