ಬಂಗಾಳ ಚುನಾವಣೆ: ಕಾಂಗ್ರೆಸ್‌-ಸಿಪಿಎಂ ಮೈತ್ರಿ; BJP-TMCಗಳನ್ನು ಮೀರಿಸಿ ಅಧಿಕಾರ ಹಿಡಿಯುತ್ತಾ ಎಡರಂಗ!

ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ 2021ರ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಸಿಪಿಎಂ ನೇತೃತ್ವದಲ್ಲಿ ಎಡಪಂಥೀಯ ಪಕ್ಷಗಳು ಮೈತ್ರಿಯಲ್ಲಿ ಚುನಾವಣಾ ಕಣಕ್ಕೆ ಇಳಿಯಲಿವೆ. ಹೀಗಾಗಿ ಇಂದು ಎಡರಂಗದ ನಾಯಕರು ಚುನಾವಣಾ ಸೀಟು ಹಂಚಿಕೆಗಾಗಿ ಸಭೆ ನಡೆಸಿವೆ ಎಂದು ತಿಳಿದು ಬಂದಿದೆ.

ಉಭಯ ಪಕ್ಷಗಳ ನಡುವೆ ಸ್ಥಾನ ಹಂಚಿಕೆ ಕುರಿತು ಮಾತುಕತೆ ತಿಂಗಳ ಅಂತ್ಯದ ವೇಳೆಗೆ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ. “ನಾವು ಒಟ್ಟಾಗಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ” ಎಂದು ಸಂಸದ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಧೀರ್ ಚೌಧರಿ ಹೇಳಿದ್ದಾರೆ.

ಎರಡು ಪಕ್ಷಗಳು ಸೀಟು ಹಂಚಿಕೆ ನಿರ್ಧಾರಕ್ಕೆ ಬರುವ ಮುನ್ನ ಇಂತಹ ಹೆಚ್ಚಿನ ಚರ್ಚೆಗಳು ಅಗತ್ಯ. ಪಕ್ಷಗಳು ಶೀಘ್ರದಲ್ಲೇ ಕೊಲ್ಕೊತ್ತಾದಲ್ಲಿ ಮೆಗಾ ಜಂಟಿ ರ್ಯಾಲಿಯನ್ನು ನಡೆಸಲಿವೆ ಎಂದು ಎಡಪಂಥೀಯ ಅಧ್ಯಕ್ಷ ಬಿಮನ್ ಬೋಸ್ ಹೇಳಿದ್ದಾರೆ.

ಇದನ್ನೂ ಓದಿ: ಬಂಗಾಳದಲ್ಲಿ BJPಗೆ TMCಗರ ದಂಡು; ಪಕ್ಷಕ್ಕೆ ಆನಂದ – RSSಗೆ ಆತಂಕ!

2016 ರ ರಾಜ್ಯ ಚುನಾವಣೆಯಲ್ಲಿ, ಉಭಯ ಪಕ್ಷಗಳು ಮೈತ್ರಿ ಮಾಡಿಕೊಂಡು 294 ವಿಧಾನಸಭಾ ಸ್ಥಾನಗಳ ಪೈಕಿ 76 ಸ್ಥಾನಗಳನ್ನು ಗೆದ್ದುಕೊಂಡಿದ್ದವು.

ಸದ್ಯ, ಮಾಧ್ಯಮಗಳೂ ಸೇರಿದಂತೆ ರಾಜಕೀಯ ತಜ್ಞರು ಬಂಗಾಳ ಚುನಾವಣೆಯನ್ನು ಬಿಜೆಪಿ ಮತ್ತು ಟಿಎಂಸಿ ನಡುವಿನ ಹೋರಾಟವೆಂದು ಬಿಂಬಿಸುತ್ತಿವೆ. ಕಾಂಗ್ರೆಸ್‌, ಎಡ ಪಕ್ಷಗಳು ಹಾಗೂ ಓವೈಸಿ ಅವರ ಪಕ್ಷವೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಅವುಗಳ ಮಾತುಕತೆ ಮುನ್ನೆಲೆಯಲ್ಲೇ ಇಲ್ಲ. ಹೀಗಾಗಿ ಎಡರಂಗದ ಮೈತ್ರಿ ಬಿಜೆಪಿ-ಟಿಎಂಸಿಗಳನ್ನೂ ಮೀರಿಸಿ ಅಧಿಕಾರದ ಗದ್ದುಗೆ ಏರುತ್ತವಾ ಕಾದು ನೋಡಬೇಕಿದೆ.

ಮೂಲಗಳ ಪ್ರಕಾರ, 294 ಸದಸ್ಯರ ಬಂಗಾಳ ವಿಧಾನಸಭೆಗೆ ಚುನಾವಣೆ ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಬಂಗಾಳ ಚುನಾವಣೆಯಲ್ಲಿ BJPಗೆ ನೆರವಾಗಿಲಿದ್ದಾರೆ ಓವೈಸಿ: ಬಿಜೆಪಿ ಸಂಸದನ ಸ್ಪೋಟಕ ಹೇಳಿಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights