FACT CHECK | ಮೋದಿಯವರ ಗುಜರಾತ್ ಮಾಡೆಲ್ ಎಂದು 2021ರ ಹಳೆಯ ವಿಡಿಯೋ ಹಂಚಿಕೆ

ಪ್ರಧಾನಿ ನರೇಂದ್ರ ಮೋದಿ ತವರು ಗುಜರಾತ್ ಮಾಡೆಲ್ ಹೇಗಿದೆ ನೋಡಿ ” ಉದ್ಯೋಗಕ್ಕಾಗಿ ಲಕ್ಷಾಂತರ ಯುವಕರ ನೂಕುನುಗ್ಗಲು” ಎಂದು ಪ್ರತಿಪಾದಿಸಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

“ಮೋದಿಯವರ ಗುಜರಾತ್ ಮಾಡೆಲ್ ಇಲ್ಲಿ 15 ಲಕ್ಷ ಕೊಡುತ್ತಿಲ್ಲ..! ಕೇವಲ 600 ಹುದ್ದೆಗಾಗಿ ಎಂಪ್ಲಾಯ್ಮೆಂಟ್ ಎಕ್ಸ್ ಚೇಂಜ್‌ ಕಚೇರಿ ಮುಂದುಗಡೆ ಸೇರಿರುವ ಲಕ್ಷಾಂತರ ಯುವ ಜನತೆ. ತಮ್ಮ ತವರು ರಾಜ್ಯದ ಯುವಕರಿಗೆ ಉದ್ಯೋಗ ಕೊಟ್ಟಿಲ್ಲ,ಇನ್ನು ದೇಶದ ಯುವಕರಿಗೆ ಕೊಡುತ್ತಾರ?” ಎಂಬ ಬರಹದೊಂದಿಗೆ ಎಕ್ಸ್‌ನಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

Fact Check: ಮೋದಿಯವರ ಗುಜರಾತ್ ನಲ್ಲಿ ಉದ್ಯೋಗಕ್ಕಾಗಿ ನೂಕುನುಗ್ಗಲು ಎಂದು ತೋರಿಸಿದ ವೀಡಿಯೋ ಈಗಿನದ್ದಲ್ಲ!

ವೈರಲ್ ಪೋಸ್ಟ್‌ನಲ್ಲಿ ಪ್ರಸಾರವಾಗುತ್ತಿರುವ ವಿಡಿಯೋ ಇತ್ತೀಚಿಗಿನ ನಡೆದ ವಿದ್ಯಮಾನಗಳ ದೃಶ್ಯಾವಳಿಗಳಾ ಅಥವಾ ಹಳೆಯ ಘಟನೆಯಾ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 27 ನವೆಂಬರ್ 2021ರಂದು ANI ತನ್ನ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ ವಿಡಿಯೋ ಲಭ್ಯವಾಗಿದೆ.

“ಗುಜರಾತಿನ ಬನಸ್ಕಂತದ ಪಾಲನ್ಪುರ ಪ್ರದೇಶದಲ್ಲಿ ಗ್ರಾಮ ರಕ್ಷಕ ದಳದ 600 ಹುದ್ದೆಗಾಗಿ ದೊಡ್ಡ ಸಂಖ್ಯೆಯಲ್ಲಿ ಆಕಾಂಕ್ಷಿಗಳು ನೆರೆದಿದ್ದರು ಎಂದಿದೆ” ಎಂದು ಬರೆಯಲಾಗಿದೆ.

28 ನವೆಂಬರ್ 2021 ರಂದು ಇಂಡಿಯಾ ಟೈಮ್ಸ್‌ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ವಿಡಿಯೋವನ್ನು ಇದೇ ಹೇಳಿಕೆಯೊಂದಿಗೆ ಪೋಸ್ಟ್‌ ಮಾಡಿದೆ.

ದೇಶದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಹೆಚ್ಚಿನ ಸಂಖ್ಯೆಯ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಈಗ ಯಾವುದೇ ಇಲಾಖೆಯಲ್ಲಿ ಯಾವುದೇ ಹುದ್ದೆ ಖಾಲಿಯಾದಾಗಲೂ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಉದ್ಯೋಗ ಸಿಗುವ ಭರವಸೆಯೊಂದಿಗೆ ಬರುತ್ತಾರೆ. ಗುಜರಾತಿನ ಬನಸ್ಕಾಂತದಲ್ಲಿ ಇಂತಹದ್ದೇ ದೃಶ್ಯ ಕಂಡು ಬಂದಿದೆ. ಗ್ರಾಮ ರಕ್ಷಾ ದಳದ 600 ಹುದ್ದೆಗಳಿಗೆ ಸಾವಿರಾರು  ಉದ್ಯೋಗಾಕಾಂಕ್ಷಿಗಳು ಇಲ್ಲಿನ ಪಾಲನ್‌ಪುರಕ್ಕೆ ಬಂದಿದ್ದಾರೆ, ಅವರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರವನ್ನೂ ನಡೆಸಬೇಕಾಯಿತು ಎಂದು 28 ನವೆಂಬರ್ 2021ರಂದು  ನ್ಯೂಸ್‌ 18 ವರದಿ ಮಾಡಿದೆ

ಇದೇ ರೀತಿಯ ವರದಿಗಳನ್ನು  ಇಲ್ಲಿಇಲ್ಲಿ, ಇಲ್ಲಿ ನೋಡಬಹುದು. ಈ ವರದಿಗಳ ಪ್ರಕಾರ, ಗುಜರಾತಿನಲ್ಲಿ ನೇಮಕಾತಿ ಸಂದರ್ಭ ಆಕಾಂಕ್ಷಿಗಳ ನೂಕುನುಗ್ಗಲು ನಡೆದಿರುವುದು 2021ರ ಘಟನೆಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಗುಜರಾತಿನ ಬನಸ್ಕಂತದ ಪಾಲನ್ಪುರ ಪ್ರದೇಶದಲ್ಲಿ ಗ್ರಾಮ ರಕ್ಷಕ ದಳದ 600 ಖಾಲಿ ಹುದ್ದೆಗಾಗಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಜಮ್ಮಾಯಿಸಿದ್ದರಿಂದ್ದ ನೂಕುನುಗ್ಗಲು ಉಂಟಾಗಿ ಪೊಲೀಸರು ಲಾಠಿ ಚಾರ್ಜ್ ಮೂಲಕ ನಿಯಂತ್ರಿಸಿದ ಘಟನೆ 2021ರಲ್ಲಿ ನಡೆದಿದ್ದು, ಇದೇ ಹಳೆಯ ವಿಡಿಯೋ ದೃಶ್ಯಗಳನ್ನು ಇತ್ತೀಚಿಗೆ ಗುಜರಾತ್‌ನಲ್ಲಿ ನಡೆದಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights