ಗಂಡು ಮಗುವಿಗೆ ‘ಲಾಕ್ ಡೌನ್’ ಎಂದು ಹೆಸರಿಟ್ಟ ಉತ್ತರ ಪ್ರದೇಶದ ದಂಪತಿ..!

ದೇಶದೆಲ್ಲೆಡೆ ಕೊರೊನಾ ಭೀತಿ ಒಂದು ಕಡೆಯಾದರೆ ಮತ್ತೊಂದು ಕಡೆ ಲಾಕ್ ಡೌನ್ ಇರುವುದರಿಂದ ಈ ವೇಳೆ ಹುಟ್ಟಿದ ಮಗುವಿಗೆ ಲಾಕ್ ಡೌನ್ ಎನ್ನುವ ಹೆಸರನ್ನು ಇಡಲಾಗಿದೆ.

ಹೌದು… ಉತ್ತರ ಪ್ರದೇಶ ದಂಪತಿ ತಮ್ಮ ಗಂಡು ಮಗುವಿಗೆ ಲಾಕ್ ಡೌನ್ ಎನ್ನುವ ಹೆಸರಿಟ್ಟು ನಾಮಕರಣ ಮಾಡಿದ್ದಾರೆ. ಇನ್ನೂ ಉತ್ತರ ಪ್ರದೇಶದಗೋರಕ್ ಪುರ ಅಸ್ಪತ್ರೆಯಲ್ಲಿ ಮಾರ್ಚ್ 22 ರಂದು ಜನಿಸಿದ ನವಜಾತ ಹೆಣ್ಣು ಮಗುವಿಗೆ ‘ಕೊರೊನಾ’ ಎಂದು ಹೆಸರಿಡಲಾಗಿತ್ತು.

ಅಷ್ಟು ಮಾತ್ರವಲ್ಲ ಕೊರೊನಾ ಎನ್ನುವುದು ಕೇವಲ ವೈರಸ್ ಮಾತ್ರವಲ್ಲ ಕೊರೊನಾ ಎನ್ನುವು ಒಂದು ಊರ ಹೆಸರು ಎನ್ನುವುದು ಬಹಿರಂಗವಾಗಿದೆ. ‘ಕೊರೊನಾ’ ಕ್ಯಾಲಿಫೋರ್ನಿಯಾದ ಒಂದು ಸುಂದರ ನಗರ. 1,55,000 ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಈ ನಗರವು ಲಾಸ್ ಏಂಜಲೀಸ್‌ನ ಆಗ್ನೇಯಕ್ಕೆ 45 ಮೈಲಿ ದೂರದಲ್ಲಿರುವ ಪಶ್ಚಿಮ ರಿವರ್ಸೈಡ್ ಕೌಂಟಿಯ ಸಾಂತಾ ಅನಾ ತಪ್ಪಲಿನಲ್ಲಿದೆ. ಕರೋನಾದಲ್ಲಿ ಸುಮಾರು ನೂರು ಎಕರೆ ಉದ್ಯಾನವನವಿದೆ. ಇದು ವಿವಿಧ ರೀತಿಯ ಮನರಂಜನಾ ಸೌಲಭ್ಯಗಳನ್ನು ಹೊಂದಿದೆ.

ಒಟ್ಟಿನಲ್ಲಿ ನಿದ್ದೆಯಲ್ಲೂ ನೆನೆಪಿಸಿಕೊಳ್ಳುವ ಕೊರೊನಾ ಮಹಾಮಾರಿಯನ್ನು ಮರಿಯಲಾಗದೇ ಜನ ಈ ಸಮಯದಲ್ಲಿ ಹುಟ್ಟಿದ ಮಕ್ಕಳಿಗೆ ಅದೇ ಹೆಸರನ್ನು ನಾಮಕರಣ ಮಾಡಲು ನಿರ್ಧರಿಸುವುದು ಟ್ರೆಂಡ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸುದ್ದಿಗಳು ಹರಿದಾಡುತ್ತಿರುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights