FACT CHECK | ‘ಈದ್ ಹಬ್ಬದ’ ಮರವಣಿಗೆಗೆಂದು ಕೊಂಡೊಯ್ಯುತ್ತಿದ್ದ ಇಸ್ಲಾಮಿಕ್ ಧ್ವಜವನ್ನು ಪಾಕ್ ಧ್ವಜ ಎಂದು ತಪ್ಪಾಗಿ ಹಂಚಿಕೆ

ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮೂವರು ಯುವಕರನ್ನು ಗುಂಪೊಂದು ಅಡ್ಡಗಟ್ಟಿ ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಯುವಕರು ತಮ್ಮ ದ್ವಿಚಕ್ರ ವಾಹನದ ಪೆಟ್ಟಿಗೆಯಲ್ಲಿ ಕೊಂಡೊಯ್ಯುತ್ತಿದ್ದ ಧ್ವಜವನ್ನು ಹೊರತೆಗೆದು ತೋರಿಸಲು ಮುಂದಾದಾಗ, ಆಗ ವ್ಯಕ್ತಿಯೊಬ್ಬ ಯುವಕನಿಗೆ ಕಪಾಳಮೋಕ್ಷ ಮಾಡುವುದನ್ನು ನೋಡಬಹುದು. ಗುಂಪಿನವರಿಗೆ ಯುವಕ ಧ್ವಜದ ಬಗ್ಗೆ ಹೇಳಲು ಮುಂದಾಗುತ್ತಾನೆ, ಆದರೆ ಹಸಿರು ಧ್ವಜವನ್ನು ನೋಡುವ ಗುಂಪು ಇದನ್ನು ಪಾಕ್ ಧ್ವಜ ಎಂದು ವಿವಾದ ಎಬ್ಬಿಸಿ ಜಗಳ ಮಾಡುತ್ತಾರೆ.

ಇದೇ ವಿಡಿಯೋವನ್ನು ಎಕ್ಸ್‌ ಬಳಕೆದಾರರು, “ಬಾಗ್‌ಪತ್ ಪೊಲೀಸ್ ಠಾಣೆಯ ಸಿಂಘವಾಲಿ ಅಹಿರ್‌ನಲ್ಲಿರುವ ಅಮಿನಗರ ಸರಾಯ್‌ನಲ್ಲಿ ಪಾಕಿಸ್ತಾನದ ಧ್ವಜವನ್ನು ಪ್ರದರ್ಶಿಸುತ್ತಿದ್ದ ಯುವಕರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ” ಎಂಬ ಬರಹದೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, “ಸಿಂಘವಾಲಿ ಪ್ರದೇಶದ ಅಮಿನಗರ ಸರಾಯ್‌ನಲ್ಲಿ ಪಾಕಿಸ್ತಾನಿ ಧ್ವಜ ಪ್ರದರ್ಶನ” ಎಂಬ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ಸರ್ಚ್ ಮಾಡಿದಾಗ, ಸೆಪ್ಟೆಂಬರ್ 17, 2024 ರಂದು ಬಾಗ್‌ಪತ್ ಪೊಲೀಸರು ಹಂಚಿಕೊಂಡ ಪೋಸ್ಟ್‌ವೊಂದು ಲಭ್ಯವಾಗಗಿದೆ.

Image

ಸೆಪ್ಟೆಂಬರ್ 17, 2024 ರಂದು ಬಾಗ್‌ಪತ್ ಪೊಲೀಸರು ಹಂಚಿಕೊಂಡ ನೋಟೀಸ್ ಪ್ರಕಾರ, “16-09-2024 ರಂದು 03 ಬೈಕ್ ಸವಾರರು  ಗೌಸ್‌ಪುರ ಗ್ರಾಮದಿಂದ ಮೀರತ್‌ಗೆ ಹೋಗುತ್ತಿದ್ದರು. ತಮ್ಮ ಬೈಕ್‌ನಲ್ಲಿ ಹಸಿರು ಬಟ್ಟೆಯನ್ನು ಕೊಂಡೊಯ್ಯುತ್ತಿದ್ದರು, ದಾರಿಯಲ್ಲಿ ಕೆಲ ಸ್ಥಳೀಯರು ಅವರನ್ನು ತಡೆದು ಹಸಿರು ಬಟ್ಟೆಯನ್ನು ಪಾಕಿಸ್ತಾನದ ಧ್ವಜ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಂಘವಾಲಿ ಅಹಿರ್ ಠಾಣೆ ಪೊಲೀಸರು ಮೇಲ್ಕಂಡ ಪ್ರಕರಣದ ತನಿಖೆ ನಡೆಸಿದಾಗ, ಯುವಕನ ಬಳಿ ಇದ್ದ ಹಸಿರು ಬಟ್ಟೆ ಪಾಕಿಸ್ತಾನದ ಧ್ವಜ ಅಲ್ಲ. ಈದ್-ಎ-ಮಿಲಾದ್ ಹಬ್ಬಕ್ಕೆ ಸಂಬಂಧಿಸಿದ್ದು, ಅದನ್ನು ಈದ್ ಮೆರವಣಿಗೆಯಲ್ಲಿ ಹಿಡಿಯಲು ಉದ್ದೇಶಿಸಲಾಗಿತ್ತು ಎಂದಿದ್ದಾರೆ.

ಬಾಗ್ಪತ್ ಪೊಲೀಸರು ಸುಳ್ಳು ಸುದ್ದಿಯನ್ನು ನಿರಾಕರಿಸಿದ್ದಾರೆ. ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ, ಒಂದು ವೇಳೆ ಸುಳ್ಳು ಸುದ್ದಿಯನ್ನು ಹರಡಿದರೆ ಅಂತವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು” ಎಂದಿದ್ದಾರೆ. ಹಾಗಾಗಿ ಮೇಲೆ ತಿಳಿಸಲಾದ ವಿವರಗಳ ಪ್ರಕಾರ ಯುವಕರು ಪಾಕಿಸ್ತಾನದ ಧ್ವಜವನ್ನು ಹೊಂದಿರಲಿಲ್ಲ ಎಂದು ಸ್ಪಷ್ಟಪಡಿಸುತ್ತದೆ ಮತ್ತು ಈ ಆರೋಪವನ್ನು ದೃಢೀಕರಿಸುವ ಸಲುವಾಗಿ ಬಾಗ್ಪತ್ ಪೊಲೀಸರು ನಿರಾಕರಣೆ ನೋಟಿಸ್ ನೀಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಿಂಘವಾಲಿ ಅಹಿರ್‌ನಲ್ಲಿರುವ ಅಮಿನಗರ ಸರಾಯ್‌ನಲ್ಲಿ ಪಾಕ್ ಧ್ವಜವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಗುಂಪೊಂದು ಮೂವರು ಯುವಕರ ಮೇಲೆ ಹಲ್ಲೆ ಮಾಡಿದೆ. ವಾಸ್ತವವಾಗಿ ಹಸಿರು ಬಣ್ಣದ ಬಟ್ಟೆಯು ಈದ್-ಎ-ಮಿಲಾದ್ ಆಚರಣೆಗೆ ಸಂಬಂಧಿಸಿದ ಇಸ್ಲಾಮಿಕ್ ಧ್ವಜವಾಗಿದ್ದು, ಈದ್ ಮೆರವಣಿಗೆಗೆಂದು ತರಲಾಗಿತ್ತು. ಆದರೆ ಇದನ್ನು ಪಾಕ್ ಧ್ವಜ ಎಂದು ತಪ್ಪಾಗಿ ಗ್ರಹಿಸಿ ಪುಂಡರಗುಂಪು ಹಲ್ಲೆ ನಡೆಸಿದೆ. ಪಾಕ್ ಧ್ವಜ ಎಂಬ ಆರೋಪವನ್ನು ಪೊಲೀಸರು ನಿರಾಕರಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮೋದಿಯವರ ಗುಜರಾತ್ ಮಾಡೆಲ್ ಎಂದು 2021ರ ಹಳೆಯ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights