05 ದಿನದಲ್ಲಿ 13 ಬಾರಿ ಸಾಮೂಹಿಕ ಅತ್ಯಾಚಾರ; 09 ಕಾಮುಕರಿಂದ ಬಾಲಕಿಗೆ ನರಕಯಾತನೆ!

09ನೇ ತರಗತಿ ಓದುತ್ತಿದ್ದ ಬಾಲಕಿಯ ಮೇಲೆ 09 ಮಂದಿ ಕಾಮುಕರು ಐದು ದಿನದಲ್ಲಿ 13 ಬಾರಿ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯಲ್ಲಿ ನಡೆಸಿದೆ.

ಆಕೆಯ ಸ್ನೇಹಿತ ಎಂದು ಹೇಳಲಾಗಿರುವ ಒಬ್ಬ ಸೇರಿದಂತೆ 09 ಕಾಮುಖರು ಆಕೆಯಲ್ಲಿ ಡಾಬಾ ಒಂದರಲ್ಲಿ ಒತ್ತೆಯಾಗಿ ಇರಿಸಿಕೊಂಡು 05 ದಿನಗಳ ಕಾಲ ಸತತವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದುಬಂದಿದೆ.

ಜಬಲ್ಪುರ ಮೂಲದ 13 ವರ್ಷದ ವಿದ್ಯಾರ್ಥಿನಿ ಲಾಕ್‌ಡೌನ್‌  ರಜೆಯ ಕಾರಣದಿಂದಾಗಿ ತನ್ನ ಅಜ್ಜಿಯ ಊರು ಉಮಾರಿಯಾಗೆ ತೆರಳಿದ್ದಳು. ಜ. 11ರಂದು ಆಕೆ ಮಾರುಕಟ್ಟೆಗೆ ತೆರಳಿದ್ದಾಗ, ಬಾಲಕಿಯ ಪರಿಷಯಸ್ಥರಾದ ಕುಸ್ವಾಹ ಮತ್ತು ಆಕಾಶ್‌ ಸಿಂಗ್‌ ಎಂಬ ಯುವಕರು ಆಕೆಗೆ ಸಿಕ್ಕಿದ್ದು, ಆಕೆಯನ್ನು ಬೈಕ್‌ನಲ್ಲಿ ಡ್ರಾಪ್‌ ಮಾಡುವುದಾಗಿ ಹೇಳಿ ಕರೆದೊಯ್ದಿದ್ದಾರೆ.

ಅವರು ಆಕೆಯನ್ನು ಭರೌಲಾ ಮತ್ತು ಛತನ್ ಪಕ್ಕದ​ ಅರಣ್ಯಕ್ಕೆ ಕರೆದೊಯ್ದು ಬೆದರಿಸಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ಎನ್​ಎಸ್​43ನಲ್ಲಿರುವ ಡಾಬಾಗೆ ಕರೆದೊಯ್ದು ಅಲ್ಲಿಯೂ ತಮ್ಮ ಐವರು ಸಹಚರದೊಂದಿಗೆ ಸೇರಿ ಅತ್ಯಾಚಾರ ಎಸಗಿದ್ದಾರೆ. ನಂತರ, ಈ ವಿಚಾರವನ್ನು ಯಾರಿಗೂ ಹೇಳಬಾರದು, ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಸಿ, ಕಾಡಿನಲ್ಲಿ ಬಿಟ್ಟು ಹೋಗಿದ್ದಾರೆ.

Read Also: ಮಹಿಳಾ ಪೊಲೀಸ್‌ ಪೇದೆ ಮೇಲೆ ಸಹೋದ್ಯೋಗಿ ಪೊಲೀಸನಿಂದಲೇ ಅತ್ಯಾಚಾರ; ಆರೋಪಿ ಪರಾರಿ

ಆಕೆ, ಮನೆಗೆ ತೆರಳಲು ಹೋಗುವ ಸಂದರ್ಭದಲ್ಲಿ, ಡ್ರಾಪ್‌ ನೀಡುವುದಾಗಿ ಹತ್ತಿಸಿಕೊಂಡ ಇಬ್ಬರು ಟ್ರಕ್‌ ಚಾಲಕರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.

ಕೊನೆಗೂ ಮನೆಗೆ ತೆರಳಿದ ಬಾಲಕಿ ಘಟನೆಯ ಬಗ್ಗೆ ಕುಟುಂಬದವರಿಗೆ ಹೇಳಿದ್ದು, ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. 9 ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್​ 376 ಮತ್ತು ಪೋಕ್ಸೋ ಕಾಯ್ದೆ ಅಡಿಯಲ್ಲಿ ಕೋಟ್ವಾಲಿ ಪೊಲೀಸ್​ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳಾದ, ಆಕಾಶ್​ ಸಿಂಗ್​, ರಾಹುಲ್​ ಕುಸ್ವಾಹ, ಮನು ಕಿವಾತ್​, ಓಂಕಾರ್​ ರೈ, ರಜನೀಶ್​ ಚೌಧರಿ, ಪರಾಸ್​ ಸೋನಿ ಮತ್ತು ಟ್ರಕ್​ ಡ್ರೈವರ್​ ರೋಹಿತ್​ ಯಾದವ್​ ಎಂಬ ಏಳು ಮಂದಿಯನ್ನು ಬಂಧಿಸಲಾಗಿದೆ. ಇತೇಂದ್ರ ಮತ್ತು ಇತರೆ ಟ್ರಕ್​ ಡ್ರೈವರ್​ಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

Read Also: ಮಹಿಳೆ ಮತ್ತು ಬಾಲಕಿ ಮೇಲೆ ಅತ್ಯಾಚಾರ; ಸಾಕ್ಷ್ಯಾನಾಶಕ್ಕಾಗಿ ಬಾಲಕಿಯ ಕೊಲೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights