ಮಂತ್ರಮಂಡಲ ವಿಸ್ತರಣೆ : ಬಿಎಸ್ವೈಗೆ ತಲೆ ನೋವಾದ ಬಿಜೆಪಿ ರೆಬೆಲ್ ಸ್ಟಾರ್‌ಗಳು ಎಚ್ಚರಿಕೆ!
ವಿಧಾನ ಮಂಡಲದ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನವೇ ರಾಜಕೀಯ ಕಾವು ಏರುಗತಿ ಪಡೆದಿದೆ. ಸಚಿವ ಸಂಪುಟ ವಿಸ್ತರಣೆಯ ಗೊಂದಲ ಸರಕಾರಕ್ಕೆ ಇರಿಸುಮುರಿಸು ತರುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ.
ಅಧಿವೇಶನಕ್ಕೆ ಮುನ್ನ ಶತಾಯ ಗತಾಯ ಮಂತ್ರಮಂಡಲ ವಿಸ್ತರಣೆ ಮಾಡಲೇಬೇಕಾದ ಅನಿವಾರ್‍ಯತೆ ಸಿಎಂ ಯಡಿಯೂರಪ್ಪ ಅವರ ಮುಂದೆ ತಲೆದೋರಿದೆ. ಒಂದು ವೇಳೆ ಅಧಿವಶನಕ್ಕೂ ಮುನ್ನ ಸಂಪಟು ವಿಸ್ತರಣೆ ಆಗದಿದ್ದರೇ ಬಹಿರಂಗವಾಗಿ ಬಂಡಾಯ ಎಳುವುದಾಗಿ ಬಿಜೆಪಿಯ ರೆಬೆಲ್ ಸ್ಟಾರ್‌ಗಳು ಎಚ್ಚರಿಕೆ ನೀಡಿದ್ದಾರೆ.
ಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿರುವ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಮುಂತಾದವರು ಸಂಪುಟ ವಿಸ್ತರಣೆಯ ಮುಂದೂಡಿಕೆ ವಿರುದ್ಧ ದನಿ ಎತ್ತಿದ್ದಾರೆ. ಸಿಎಂ ಬಿಎಸ್ವೈತಮ್ಮ ಮಾತು ಉಳಿಸಿಕೊಳ್ಳದಿದ್ದರೇ ಪಕ್ಷದ ವಿರುದ್ಧ ನಾವು ಮಾತನಾಡಬೇಕಾಗುತ್ತದೆ. ಇದರಿಂದ ಪಕ್ಷಕ್ಕೆ ಮತ್ತು ಸರಕಾರಕ್ಕೆ ಮುಜುಗರ ಆದರೆ ನಾವು ಹೊಣೆಯಲ್ಲ ಎಂಬ ಸಂದೇಶವನ್ನು ಅವರು ರವಾನಿಸಿದ್ದಾರೆ ಎನ್ನಲಾಗಿದೆ.
ಮಂತ್ರಿ ಮಡಲ ವಿಸ್ತರಣೆಗೆ ಖುದ್ದು ಯಡಿಯೂರಪ್ಪ ಉತ್ಸುಕರಾಗಿದ್ದರೂ ದಿಲ್ಲಿ ಕಮಾಂಡ್ ಅದಕ್ಕೆ ಅನುಮತಿಯನ್ನೇ ನೀಡುತ್ತಿಲ್ಲ. ವಿಸ್ತರಣೆಗೆ ಅನುಮತಿ ನೀಡುವುದಿರಲಿ ಈ ಬಗ್ಗೆ ಚರ್ಚೆಗೆ ದಿಲ್ಲಿಗೆ ಬರಲು ಯಡಿಯೂರಪ್ಪನವರಿಗೆ ಹೈಕಮಾಂಡ್ ಆಸ್ಪದವೇ ನೀಡಿಲ್ಲ.
ಒಂದು ಕಡೆ ಬಿಎಸ್ವೈ ನಾಯಕತ್ವ ಪಲ್ಲಟಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ತನ್ನ ದಿಡ್ಡಿ ಬಾಗಿಲು ತೆರದು ಕುಳಿತಿರುವ ಬಿಜೆಪಿ ದಿಲ್ಲಿ ಪ್ರಭುಗಳ ಇಎಸ್ವೈಗೆ ಮಾತ್ರ ಪ್ರವೇಶ ನಿರಾಕರಿಸಿದೆ ಎಂಬ ಮಾತು ಬಿಜೆಪಿ ಪಾಳೆಯದಲ್ಲಿಯೇ ಕೇಳಿಬರುತ್ತಿದೆ.
ತಮ್ಮ ಸರಕಾರ ಬರಲು ಕಾರಣಕರ್ತರಾದವರ ಪೈಕಿ ಈಗ ಎಂಎಲ್ಸಿಗಳಾಗಿರುವ ಶಂಕರ್, ನಾಗರಾಜ್ ಮತ್ತು ವಿಶ್ವನಾಥ್ ಅವರಿಗೆ ಮಂತ್ರಿ ಭಾಗ್ಯ ನೀಡಿ ಋಣಮುಕ್ತರಾಗುವುದು ಬಿಎಸ್ವೈ ಲೆಕ್ಕಾಚಾರ. ಜೊತೆಗೆ ಒಂದಿಬ್ಬರು ಹಿರಿಯ ನಾಯಕರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳಲು ಯಡಿಯೂರಪ್ಪ ಸಿದ್ಧರಿದ್ದಾರೆ. ಆದರೆ ಅದಾಶವುದಕ್ಕೂ ಬಿಜೆಪಿ ದಿಲ್ಲಿ ಕಮಾಂಡ್ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಪರಿಸ್ಥಿತಿಯ ಸೂಕ್ಷ್ಮತೆ ಅರಿತಿರುವ ರೆಬೆಲ್ ನಾಯಕರು ಅಧಿವೇಶನಕ್ಕೆ ಮುನ್ನ ತಮಗೆ ಮಂತ್ರಿಗಿ ನೀಡದಿದ್ದರೇ ತಮ್ಮ ದನಿಯನ್ನು ಗಟ್ಟಿಗೊಳಿಸಲು ತೀರ್ಮಾನಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾದ ವಿಶೇಷ ವರದಿ ತಿಳಿಸಿದೆ.

