ಹೋಳಿ ಹಬ್ಬಕ್ಕೂ ಕೊರೊನಾ ಭೀತಿ : ವಿಶ್ವದೆಲ್ಲೆಡೆ 3,400ಕ್ಕೇರಿದ ಸಾವಿನ ಸಂಖ್ಯೆ!

ಕೊರೊನಾ ವೈರಸ್…. ಹೆಸರು ಕೇಳಿದ್ರೆ ನಿದ್ದೆಯಲ್ಲಿ ಇರುವವರು ಕೂಡ ಎಚ್ಚರ ಆಗಿಬಿಡ್ತಾರೆ. ಯಾಕೆಂದ್ರೆ ಅಷ್ಟೊಂದು ವೇಗವಾಗಿ ಈ ವೈರಸ್ ವಿಶ್ವದಾದ್ಯಂತ ಹರಡುತ್ತಿದ್ದು ಇಲ್ಲಿಯವರೆಗೂ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ಕಾಣಿಸಿಕೊಂಡಿದೆ.

ಹೌದು… ವಿಶ್ವದೆಲ್ಲೆಡೆ ಕೊರೊನಾ ಎಗ್ಗಿಲ್ಲದೇ ಹರಡುತ್ತಿದೆ. ಈ ಪಡಂ ಭೂತ ಮನುಷ್ಯನ ದೇಹವನ್ನ ಸೇರುವುದು ಮಾತ್ರವಲ್ಲದೇ ಪ್ರಣವನ್ನು ಬಲಿ ಪಡೆದುಕೊಳ್ಳುತ್ತಿದೆ. ಇದು ಸಾಲದೂ ಎಂಬಂತೆ ಭಾರತಕ್ಕೂ ಕಾಲಿಟ್ಟ ಮಹಾಮಾರಿ  ಇಲ್ಲಿಯವರೆಗೆ 39 ಜನರ ದೇಹ ಹೊಕ್ಕು ನರಳಾಡುವಂತೆ ಮಾಡಿದೆ. ಕೇರಳದ ಒಂದೇ ಕುಟುಂಬದ ಐದು ಜನರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ.

ಚೀನಾದಲ್ಲೇ ಹೆಚ್ಚಾಗಿ ಆರ್ಭಟಿಸುತ್ತಿರುವ ಈ ವೈರಸ್​ ಈಗಾಗಲೇ 90ಕ್ಕೂ ಹೆಚ್ಚು ದೇಶಗಳಿಗೆ ಅಡಿ ಇಟ್ಟಿದ್ದು ಸಾವನ್ನಪ್ಪಿದವರ ಸಂಖ್ಯೆ 3,400 ದಾಟಿದೆ.

ನಾಳೆ ಹೋಳಿ ಇರುವುದರಿಂದ ಎಲ್ಲೆಡೆ ಎಚ್ಚರ ವಹಿಸಲು ಕರೆ ಕೊಡಲಾಗಿದೆ. ಹೋಳಿ ಆಡಿದರೆ ಕೊರೊನಾ ವೈರಸ್ ತಗಲುವ ಸಾಧ್ಯತೆ ಇರುವುದರಿಂದ ಹೋಳಿ ಆಡುವುದನ್ನ ಮುಂದೂಡುವಂತೆ ಕರೆ ನೀಡಲಾಗುತ್ತಿದೆ. ನೀವು ಕೂಡ ಹೋಳಿ ಮುಂದೂಡಿ ಕೊರೊನಾ ಸೋಂಕು ಹರಡದಂತೆ ಕಾಳಜಿ ವಹಿಸಿ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights