ಮಹಿಳೆ ಮತ್ತು ಬಾಲಕಿ ಮೇಲೆ ಅತ್ಯಾಚಾರ; ಸಾಕ್ಷ್ಯಾನಾಶಕ್ಕಾಗಿ ಬಾಲಕಿಯ ಕೊಲೆ!

ದೇಶಾದ್ಯಂತ ಅತ್ಯಾಚಾರ ಪ್ರಕರಣಗಳು ದಿನ ಕಳೆದಂತೆ ಹೆಚ್ಚುತ್ತಲೇ ಇವೆ. ಅತ್ಯಾಚಾರ ಎಸಗಿ ಸಂತ್ರಸ್ತೆಯರ ಮೇಲೆ ಅಮಾನವೀಯ ಕ್ರೌರ್ಯ, ಹಿಂಸೆ, ಕೊಲೆಗಳಂತಹ ಪ್ರಕರಣಗಳೂ ಹೆಚ್ಚಾಗಿದೆ. ಅಂತದ್ದೇ ಎರಡು ಪ್ರಕರಣಗಳು ಮಧ್ಯಪ್ರದೇಶದಲ್ಲಿ ಇಂದು ಬೆಳಕಿಗೆ ಬಂದಿವೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಹಿಳೆ ಮತ್ತು ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಪ್ರಕರಣ ಮುಚ್ಚಿಹಾಕಲು ಬಾಲಕಿಯನ್ನು ಕೊಲೆ ಮಾಡಿರುವ ಘಟನೆಗಳು ನಡೆದಿವೆ.

ಮಧ್ಯಪ್ರದೇಶದ ಸಿದ್ದಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಮೇಲೆ ಮೂವರು ಅತ್ಯಾಚಾರ ಎಸಗಿ ಆಕೆಯ ಖಾಸಗೀ ಭಾಗಗಳ ಮೇಲೆ ಕಬ್ಬಿಣದ ರಾಡ್‌ನಿಂದ ಚಿತ್ರಹಿಂಸೆ ನೀಡಿದ್ದಾರೆ; ಮತ್ತೊಂದು ಪ್ರಕರಣದಲ್ಲಿ ಖಂಡ್ವಾ ಜಿಲ್ಲೆಯಲ್ಲಿ 45 ವರ್ಷದ ವ್ಯಕ್ತಿಯೊಬ್ಬ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ, ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಸಿದ್ಧಿ ಜಿಲ್ಲೆಯಲ್ಲಿ ಚಹಾ ಅಂಗಡಿ ನಡೆಸುತ್ತಿದ್ದ 45 ವರ್ಷದ ಮಹಿಳೆ ತನ್ನ ಗುಡಿಸಲಲ್ಲಿ ಮಲಗಿದ್ದರು. ಆ ವೇಳೆ ಆರೋಪಿಗಳು ಬಂದು ಬಾಗಿಲು ಬಡಿದು ನೀರು ಕೇಳಿದ್ದಾರೆ. ಯಾರೂ ಇಲ್ಲ ಎಂದು ಮಹಿಳೆ ಹೇಳಿದಾಗ ಗುಡಿಸಲಿಗೆ ನುಗ್ಗಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ಕಬ್ಬಿಣದ ರಾಡ್‌ನಿಂದ ಆಕೆಗೆ ಚಿತ್ರಹಿಂಸೆ ನೀಡಿದ್ದಾರೆ. ಮಹಿಳೆಯ ಪತಿ ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದ. ಮಹಿಳೆಯನ್ನು ರೇವಾ ಸಂಜಯ್ ‌ಗಾಂಧಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಮಿಲಿಯಾ ಪೊಲೀಸ್ ಠಾಣೆಯ ಐಜಿಪಿ ಉಮೇಶ್ ಜೋಹಾ ಮಾಹಿತಿ ನೀಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಖಂಡ್ವಾ ಜಿಲ್ಲೆಯ ಜಮಾನಿಯಾ ಗ್ರಾಮದಲ್ಲಿ ಕಿರಾಣಿ ಅಂಗಡಿಯಿಂದ ಬಿಸ್ಕೆಟ್ ಖರೀದಿಸಲು ಹೋಗಿದ್ದ 9ನೇ ತರಗತಿ ವಿದ್ಯಾರ್ಥಿನಿಯನ್ನು ಅಂಗಡಿ ಮಾಲಿಕ ಮನೆಯೊಳಕ್ಕೆ ಎಳೆದೊಯ್ದಯ ಅತ್ಯಾಚಾರ ಎಸಗಿದ್ದಾನ. ಪ್ರಕರಣ ಮುಚ್ಚಿ ಹಾಕುವ ಉದ್ದೇಶದಿಂದ ಉಸಿರುಗಟ್ಟಿಸಿ ಸಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: ಅತ್ಯಾಚಾರಕ್ಕೆ ಯತ್ನ: ಯುವಕನನ್ನು ಇರಿದು ಕೊಂದ ಯುವತಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights