ಮೃಗಾಲಯದ ಗೊರಿಲ್ಲಾಗಳಲ್ಲಿ ಕೊರೊನಾ ದೃಢ!

ಒಂದು ವರ್ಷದಲ್ಲಿ ಜಗತ್ತಿನ ಮನುಷ್ಯರನ್ನು ಕಾಡಿದ್ದ ಕೊರೊನಾ ಇದೀಗ ಪ್ರಾಣಿಗಳಲ್ಲೂ ಪತ್ತೆಯಾಗಿದೆ. ಕ್ಯಾಲಿಫೋರ್ನಿಯಾದ ಸ್ಯಾನ್‌ ಡಿಯಾಗೋ ನಗರದಲ್ಲಿರುವ ಮೃಗಾಲಯದಲ್ಲಿರುವ ಸಫಾರಿ ಪಾರ್ಕ್‌ನ ಹಲವು ಗೊರಿಲ್ಲಾಗಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದಲ್ಲಿ ಇದೇ ಮೊದಲ ಬಾರಿಗೆ ಗೊರಿಲ್ಲಾಗಳಂತಹ ವಾನರ ಪ್ರಭೇದದಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. ಬಹುಶಃ ರೋಗ ಲಕ್ಷಣವಿಲ್ಲದ ಮೃಗಾಲಯ ಸಿಬ್ಬಂದಿಯಿಂದ ಸೋಂಕು ಹರಡಿರಬಹುದು ಎಂದು ಫೆಡರಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾ ಸೋಂಕು ದೇಶದಲ್ಲಿ ಕಾಣಿಸಿಕೊಂಡಾಗಿನಿಂದ ಮೃಗಾಲಯದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿತ್ತು. ಪ್ರಾಣಿಗಳ ಬಳಿ ತೆರಳುವಾಗ ಸಿಬ್ಬಂದಿಗಳು ವೈಯಕ್ತಿಕ ರಕ್ಷಣಾ ಕಿಟ್ ಸೇರಿದಂತೆ ಎಲ್ಲ ರೀತಿಯ ಮುನ್ನಚ್ಚರಿಕೆಯನ್ನು ವಹಿಸುತ್ತಿದ್ದರು. ಆದರೂ, ಮೊದಲ ಬಾರಿಗೆ ಸೋಂಕು ಎಂಟು ವೆಸ್ಟರ್ನ್ ಲೋಲ್ಯಾಂಡ್ ಗೊರಿಲ್ಲಾಗಳಲ್ಲಿ ಕಾಣಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.

ಗೊರಿಲ್ಲಾಗಳ ಆರೋಗ್ಯ ಪರೀಕ್ಷೆ ನಡೆಸಿದರುವ ವೈದ್ಯರು, ಮೂರು ಪ್ರಾಣಿಗಳಲ್ಲಿ ಮಾತ್ರ ಕೆಮ್ಮುವಿಕೆಯಂತಹ ಲಕ್ಷಣ ಕಂಡುಬಂದಿದೆ. ಶೀತ ಮತ್ತು ಕೆಮ್ಮಿನ ಹೊರತಾಗಿ, ಗೊರಿಲ್ಲಾಗಳಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ. ಸೋಂಕಿತ ಪ್ರಾಣಿಗಳು ಸಂಪೂರ್ಣ ಚೇತರಿಸಿಕೊಳ್ಳುವ ಭರವಸೆ ಇಂದು ತಿಳಿಸಿದ್ದಾರೆ.


ಇದನ್ನೂ ಓದಿ: ಮೃಗಾಲಯದ ಪ್ರಾಣಿಗಳನ್ನು ಕಂಡು ಶಾಕ್‌ ಆದ ಪ್ರವಾಸಿಗ: ಸಾವು-ಬದುಕಿನ ಹೋರಾಟದಲ್ಲಿ ವನ್ಯಪ್ರಾಣಿಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights