ಮೃಗಾಲಯದ ಪ್ರಾಣಿಗಳನ್ನು ಕಂಡು ಶಾಕ್‌ ಆದ ಪ್ರವಾಸಿಗ: ಸಾವು-ಬದುಕಿನ ಹೋರಾಟದಲ್ಲಿ ವನ್ಯಪ್ರಾಣಿಗಳು!

ಪ್ರವಾಸಿಗನೊಬ್ಬ ಮೃಗಾಲಯದಲ್ಲಿ ವನ್ಯ ಪ್ರಾಣಿಗಳನ್ನು ವೀಕ್ಷಿಸಿಲು ಮೃಗಾಲಯಕ್ಕೆ ತೆರಳಿದ್ದು, ಅಲ್ಲಿಯ ಪ್ರಾಣಿಗಳ ಅವಸ್ಥೆ ನೋಡಿ ಆತ ಬೆರಗಾಗಿದ್ದಾನೆ. ಆಹಾರವಿಲ್ಲದೆ ಪ್ರಾಣಿಗಳು ಬಡಕಲಾಗಿದ್ದು, ಅಸ್ಥಿಪಂಜರ ಕಾಣುವ, ಸಾವು-ಬದುಕಿನ ಹೋರಾಟ ನಡೆಸುತ್ತಿರುವ ಕೆಲವು ಪ್ರಾಣಿಗಳು ಮೃಗಾಲಯದಲ್ಲಿದ್ದು, ಅವುಗಳ ಫೋಟೋಗಳನ್ನು ಕ್ಲಿಕ್ಕಿಸಿ ಆತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.

A malnourished lion on the brink of starvation had to be rescued from a state-owned Zoo in Nigeria by an animal welfare charity after a visitor was horrified at the zoo's conditions

ನೈಜಿರಿಯಾದ ಕಾಡನಾದಲ್ಲಿರುವ ಸರ್ಕಾರಿ ಸ್ವಾಮ್ಯದ ಗಮ್ಜಿ ಗೇಟ್ ಮೃಗಾಲಯಕ್ಕೆ ಪ್ರವಾಸಿಗ ಭೇಟಿ ನೀಡಿದಾಗ ನೈಜ ಚಿತ್ರಣ ಬಯಲಾಗಿದೆ.

Among the other animals at the zoo, the man found a skinny hyena living in horrendous conditions. A healthy hyena's coat should look more full that the one that was found
ಒಂದು ಡಾಲರ್ ನೀಡಿ ಮೃಗಾಲಯ ಪ್ರವೇಶಿಸಿದ್ದನು, ಸಿಂಹ, ಮೊಸಳೆ ಕೆಲವು ಪ್ರಾಣಿಗಳ ನೈಜ ದೃಶ್ಯವನ್ನು ಕಂಡು ತನ್ನ ಕ್ಯಾಮೆರಾದ ಮೂಲಕ ಫೋಟೋ ಸೆರೆಹಿಡಿದಿದ್ದಾನೆ.

A baboon that was found in the zoo

ನಂತರ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾನೆ. ಅದರ ಜೊತೆಗೆ ಪ್ರಾಣಿಗಳನ್ನು ರಕ್ಷಿಸುವಂತೆ ವನ್ಯಜೀವಿ ಚಾರಿಟಿಗೆ ಮಾಹಿತಿ ನೀಡಿದ್ದಾನೆ.

The crocodiles were kept in a larger area in the zoo, but had shallow waters that were swamp-coloured and full of debris

ಸಾಮಾಜಿಕ ಜಾಲತಾಣದಲ್ಲಿ ಆತ ಪ್ರಾಣಿಗಳ ಚಿತ್ರವನ್ನು ಹಂಚಿಕೊಂಡ ನಂತರ, ನೈಜೀರಿಯಾದ ವನ್ಯಜೀವಿ ಚಾರಿಟಿ ಹಾಗೂ ಮೆನ್ಸ್ ಡಿಸ್ಕವರಿ ತಂಡ ಮೃಗಾಲಯದಲ್ಲಿದ್ದ ಪ್ರಾಣಿಗಳ ರಕ್ಷಣಾ ಕಾರ್ಯವನ್ನು ಆರಂಭಿಸಿದೆ. ತೀವ್ರ ಅಪೌಷ್ಠಿಕತೆಯಲ್ಲಿ ಬಳಲುತ್ತಿದ್ದ ಗಂಡು ಸಿಂಹದ ಪ್ರಾಣವನ್ನು ಉಳಿಸುವ ಪ್ರಯತ್ನ ನಡೆಸಿದೆ.

The charity performed a rescue operation at the zoo to rescue the male lion after it was found starving. It's ribs and other bones were clearly visible under its skin

ಸಿಂಹವನ್ನು ಅಭಯಾರಣ್ಯಕ್ಕೆ ಸ್ಥಳಾಂತರಿಸವು ಮುನ್ನ ಅದರ ಶಕ್ತಿಯನ್ನು ಹಿಂದಿರುಗಿ ಬರುವಂತೆ ಮಾಡಲು ಪ್ರಯತ್ನಿಸಲಾಗುತ್ತಿದ್ದು, ಆ ಸಿಂಹ ಸಾಕಷ್ಟು ಕಾಲ ಬದುಕಬಲ್ಲದು ಎಂದು ಹೇಳಲಾಗಿದೆ.

ಗಮ್ಜಿ ಗೇಟ್ ಮೃಗಾಲಯದಲ್ಲಿರುವ ಪ್ರಾಣಿಗಳು ಗಮ್ಜಿ ಗೇಟ್ ಮೃಗಾಲಯದಲ್ಲಿರುವ ಪ್ರಾಣಿಗಳು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights