ಎರಡು ಕಟ್ಟಡಗಳ ನಡುವೆ ಇದೆ ಪಾರದರ್ಶಕ ಈಜುಕೊಳ; ವಿಡಿಯೋ ವೈರಲ್‌!

ಎರಡು ಕಟ್ಟಡಗಳ ನಡುವೆ ವಿಶ್ವದ ಮೊದಲ ಪಾರದರ್ಶಕ ಈಜುಕೊಳವನ್ನು ಲಂಡನ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಸ್ಕೈ ಪೂಲಿಸ್​ ಹೆಸರಿನ ಈ ಪಾರದರ್ಶಕ ಈಜುಕೋಳ 82 ಅಡಿ ಉದ್ದವಿದೆ.

ನೈಋತ್ಯ ಲಂಡನ್​ನ ರಾಯಭಾರ ಕಚೇರಿಯಲ್ಲಿ ಎರಡು ಅಪಾರ್ಟ್​ಮೆಂಟ್​ಗಳ 10ನೆ ಮಹಡಿಯ ಮಧ್ಯದಲ್ಲಿ ಈ ತೇಲುವ ಈಜುಕೊಳವನ್ನ ನಿರ್ಮಿಸಲಾಗಿದೆ. ಈ ಈಜುಕೊಳವು ಭೂಮಿಯಿಂದ 115 ಅಡಿ ಎತ್ತರದಲ್ಲಿದೆ. ಈ ಈಜುಕೊಳದಲ್ಲಿ 50 ಟನ್​ ನೀರನ್ನ ತುಂಬಿಸಲಾಗಿದೆ. ಅಲ್ಲದೇ ಮೇಲ್ಛಾವಣಿ ಬಾರ್​ ಹಾಗೂ ಸ್ಪಾ ವ್ಯವಸ್ಥೆ ಕೂಡ ಮಾಡಲಾಗಿದೆ.

ಈ ವಿಶೇಷವಾದ ಈಜುಕೊಳವನ್ನ ಎಕಸ್ರ್ಲೆಓ ಕಲ್ಲಗಾನ್ ಎಂಬ ಇಂಜಿನಿಯರ್​ ನಿರ್ಮಿಸಿದ್ದಾರೆ. 2 ಬೆಡ್​ ರೂಮ್​ ಮನೆಗಳನ್ನ ಹೊಂದಿರುವ ಎರಡು ಗಗನಚುಂಬಿ ಕಟ್ಟಡಗಳ ನಡುವೆ ಈ ಈಜುಕೊಳವನ್ನ ನಿರ್ಮಿಸಲಾಗಿದೆ. ಕಟ್ಟಡದ ನಿವಾಸಿಗಳಿಗೆ ಮಾತ್ರ ಈ ಈಜುಕೊಳವನ್ನ ಬಳಕೆ ಮಾಡಲು ಅನುಮತಿ ನೀಡಲಾಗಿದೆ.

ಈಜುಕೊಳದ ವಿಡಿಯೋವನ್ನ ರಾಯಭಾರ ಕಚೇರಿ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದು ಸಖತ್​ ವೈರಲ್​ ಆಗಿದೆ. ಈ ಈಜುಕೊಳವು ಮೇ 19ರಂದು ಲೋಕಾರ್ಪಣೆಗೊಂಡಿತ್ತು.

ಇದನ್ನೂ ಓದಿ: ಇಸ್ರೇಲ್ ಸರ್ಕಾರ ಪತನ ಸಾಧ್ಯತೆ; ಹೊಸ ಸರ್ಕಾರ ರಚನೆಗೆ ವಿಪಕ್ಷಗಳ ಸಿದ್ದತೆ!

Spread the love

Leave a Reply

Your email address will not be published. Required fields are marked *