ಟಿಆರ್‌ಎಸ್ ಪಕ್ಷ ತೊರೆದ ಮಾಜಿ ಸಚಿವ ರಾಜೇಂದರ್; ಬಿಜೆಪಿ ಸೇರುವ ಸಾಧ್ಯತೆ!
ತೆಲಂಗಾಣದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಜಿ ಸಚಿವ ಇಟಾಲಾ ರಾಜೇಂದರ್ ಅವರು ತಮ್ಮ ಶಾಸಕ ಸ್ಥಾನಕ್ಕೆ ಟಿಆರ್‌ಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲಾಗಿತ್ತು. ಇದಾದ ಬೆನ್ನಲ್ಲೆ ಅವರು ಪಕ್ಷ ತೊರೆಯಲು ಮುಂದಾಗಿದ್ದು, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಇಂದು ತಮ್ಮ ರಾಜಿನಾಮೆ ಪತ್ರವನ್ನು ವಿಧಾನಸಭೆ ಸ್ಪೀಕರ್ ಗೆ ಅವರಿಗೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇತ್ತೀಚೆಗೆ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ರಾಜೇಂದರ್ ಭೇಟಿ ಮಾಡಿದ್ದರು. ಇದೀಗ ಶೀಘ್ರದಲ್ಲೇ ಅವರು ಬಿಜೆಪಿ ಸೇರುವ ಸಾಧ್ಯತೆಯಿದೆ.
ನನ್ನ ಪ್ರಯತ್ನದ ಫಲವಾಗಿ ಕರೀಮ ನಗರ ಜಿಲ್ಲೆಯಲ್ಲಿ ಟಿಆರ್ ಎಸ್ ಹಲವು ಚುನಾವಣೆಗಳಲ್ಲಿ ಗೆಲುವು ಸಾಧಿಸಿದೆ. ಹುಜುರಾಬಾದ್ ಅಸೆಂಬ್ಲಿ ವಿಭಾಗವನ್ನು ಬಹುಮತದೊಂದಿಗೆ ಗೆದ್ದಿದ್ದೇನೆ. ಜನರ ಬೆಂಬಲದಿಂದಾಗಿ ಗೆಲುವು ಸಾಧಿಸಿದ್ದೇನೆಯೇ ಹೊರತು ಟಿಆರ್ ಎಸ್ ಬಿ-ಫಾರ್ಮ್ ನಿಂದ ಅಲ್ಲ ಎಂದು ಅವರು ಹೇಳಿದ್ದಾರೆ.
ಟಿಆರ್ ಎಸ್ ಬಿ ಫಾರಂ ನಿಂದ ನಿಜಾಮಾಬಾದ್ ಲೋಕಸಭೆಯಲ್ಲಿ ಸ್ಪರ್ಧಿಸಿದ್ದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ ಕವಿತಾ ಸಹ ಸೋತಿದ್ದರು ಎಂದು ರಾಜೇಂದರ್ ನೆನಪಿಸಿಕೊಂಡರು.
ಇದನ್ನೂ ಓದಿ: 2020ರಲ್ಲಿ ರೈಲ್ವೆ ಹಳಿಗಳ ಮೇಲೆ 8,700 ಜನ ಸಾವು : ಇವರಲ್ಲಿ ಹೆಚ್ಚಿನವರು ಕಾರ್ಮಿಕರು..!

