ಫ್ಯಾಕ್ಟ್‌ಚೆಕ್: ನೆಹರೂ ಅವರ ಈ ವೈರಲ್ ಫೋಟೋಗಳ ಬಗ್ಗೆ ನಿಮಗೆಷ್ಟು ಗೊತ್ತು?

ಮಾಜಿ  ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ 133ನೇ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನರು ಹಂಚಿಕೊಂಡಿದ್ದಾರೆ. ಮಹಿಳೆಯರೊಂದಿಗೆ ಇರುವ ಫೋಟೋಗಳು ಕೆಟ್ಟ ವಿವರಣೆಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಆಗ್ಗಾಗ್ಗೆ ಕಾಣಿಸಿಕೊಳ್ಳುವ ಈ ಫೋಟೋಗಳು, ನೆಹರೂ ಅವರು ಅನೈತಿಕ ವ್ಯಕ್ತಿ ಎಂಬ ಅರ್ಥದಲ್ಲಿ, ನೆಹರೂರವರನ್ನು ತೇಜೊವಧೆ ಮಾಡುವ ಹಲವು ಫೋಟೋಗಳು ಒಮ್ಮೆಲೆ ಯಾವುದೋ ವಾಟ್ಸಾಪ್ ಗ್ರೂಪಿನಲ್ಲೊ, ಬಲಪಂಥೀಯ ಫೇಸ್‌ಬುಕ್ ಪೇಜುಗಳಲ್ಲಿ ಬರುವ ಪೋಸ್ಟ್‌ಗಳಲ್ಲಿ ಈ ರೀತಿಯ ಪೋಟೋಗಳನ್ನು ಕಾಣುತ್ತೇವೆ.

ಸಾಮಾನ್ಯವಾಗಿ ಈ ಫೋಟೋಗಳನ್ನು ನೋಡಿದ ಯಾವುದೇ ಜನ ಸಾಮಾನ್ಯನಿಗೂ ನೆಹರು ಅವರ ಬಗ್ಗೆ ಸಂದೇಹ ಮತ್ತು ಪ್ರಶ್ನೆ ಮೂಡುವುದು ಸಹಜ. ಆದರೆ ಸಾರ್ವಜನಿಕ ಜೀವನದಲ್ಲಿ ಉನ್ನತ ಸ್ಥಾನದಲ್ಲಿದ್ದ ನೆಹರೂರವರಿಗೆ ತಮ್ಮ ಹುದ್ದೆಯ ಘನತೆ ಮತ್ತು ಸಾಮಾಜಿಕ ಜವಬ್ದಾರಿಗಳು ಬಗ್ಗೆ ಹೆಚ್ಚಿನ ಅರಿವಿರುತ್ತದೆ. ಅದರ ನಡುವೆಯೂ ಈ ಪೋಟೋಗಳ ಹಿನ್ನಲೆ ಮತ್ತು ಸಂದರ್ಭ ಯಾವುದು? ಹಾಗೆಯೇ ಈ ಮಹಿಳೆಯರು ಯಾರು?  ಇವರಿಗೂ ನೆಹರು ಅವರಿಗೂ ಏನು ಸಂಬಂಧ ಎಂದು ತಿಳಿದುಕೊಳ್ಳೋಣ.

ಫ್ಯಾಕ್ಟ್‌ಚೆಕ್ :

ಚಿತ್ರ 1:

ಈ ಫೋಟೋದಲ್ಲಿ ನೆಹರು ಅವರ ಕೆನ್ನೆಗೆ  ಮುತ್ತು ಕೊಡುತ್ತಿರುವ ಮಹಿಳೆ ಬೇರೆ ಯಾರೂ ಅಲ್ಲ, ಅವರ ಸಹೋದರಿ ವಿಜಯಲಕ್ಷ್ಮಿ ಪಂಡಿತ್. ವಿಜಯಲಕ್ಷ್ಮಿ ಪಂಡಿತ್ 1949 ರಲ್ಲಿ ಯುನೈಟೆಡ್ ಸ್ಟೇಟ್ಸ್ನಲ್ಲಿ (ಅಮೆರಿಕಾದಲ್ಲಿ) ಭಾರತದ ರಾಯಭಾರಿಯಾಗಿದ್ದರು. ಈ ಸಂದರ್ಭದಲ್ಲಿ ನೆಹರು ಅವರು US ಗೆ ಭೇಟಿ ನೀಡಿದ ವೇಳೆ ತನ್ನ ಸಹೋದರಾದ ನೆಹರು ಅವರನ್ನು ಸ್ವಾಗತಿಸುತ್ತಿರುವ ಚಿತ್ರ.

In style Nehru meets sister Vijaylakshmi Pandit on his 1949 US visit

ಚಿತ್ರ 2:

ಈ ಚಿತ್ರದಲ್ಲಿ ನೆಹರೂ ಎಡ್ವಿನಾ ಮೌಂಟ್‌ಬ್ಯಾಟನ್ ಅವರೊಂದಿಗೆ (ಸಲುಗೆಯಿಂದ) ಕುಶಲೋಪರಿಯಿಂದ ನಗುತ್ತಿರುವ ಚಿತ್ರವಾಗಿದೆ. ಆದರೆ ಇಬ್ಬರ ನಡುವೆ ಪರಸ್ಪರ ಸಮಾನ ಸ್ನೇಹ ಮತ್ತು ಅಷ್ಟೇ ಗೌರವವನ್ನು ಹೊಂದಿದ್ದರು ಎಂದು ಮೌಂಟ್‌ಬ್ಯಾಟನ್ ಅವರ ಪುತ್ರಿ ತನ್ನ Daughter of Empire: Life as a Mountbatten‘ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

Nehru with Edwina Mountbatten

ಕೊನೆಯ ವೈಸರಾಯ್‌ ಆಗಿ ಮೌಂಟ್‌ಬ್ಯಾಟ್‌ನ್ ಭಾರತಕ್ಕೆ ಬಂದಾಗ ಅವರ ಪುತ್ರಿ ಪಮೇಲಾ ಹಿಕ್ಸ್ ಮೌಂಟ್‌ಬ್ಯಾಟನ್‌ಗೆ 17 ವರ್ಷ ವಯಸ್ಸು. ನೆಹರೂ ಮತ್ತು ಆಕೆಯ ತಾಯಿ ಎಡ್ವಿನಾ ಮೌಂಟ್‌ಬ್ಯಾಟನ್‌ ನಡುವೆ ಇದ್ದ ಪ್ರೀತಿ ಪರಸ್ಪರವಾಗಿ ನೀಡುತ್ತಿದ್ದ ಗೌರವ ಬಗ್ಗೆ ತಿಳಿದುಕೊಂಡಿದ್ದೆ ಎಂದು ಪುಸ್ತಕದಲ್ಲಿ ತಿಳಿಸಿದ್ದಾರೆ.

ಚಿತ್ರ 3:

ಈ ಚಿತ್ರದಲ್ಲೂ ನೆಹರೂ ಜೊತೆ ಇರುವುದು ಸಹೋದರಿ ವಿಜಯಲಕ್ಷ್ಮಿ ಪಂಡಿತ್. ಅವರು ರಷ್ಯಾದಲ್ಲಿ ರಾಯಭಾರಿಯಾಗಿದ್ದ ಸಮಯದಲ್ಲಿ, ಭಾರತದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದ ವಿಜಯಲಕ್ಷ್ಮಿ ಪಂಡಿತ್ ಅವರನ್ನು ಸಹೋದರ ನೆಹರು ಅವರು ಬರಮಾಡಿಕೊಳ್ಳುತ್ತಿರುವ ಸಂದರ್ಭದ ಚಿತ್ರ.

Nehru with sister Vijaylakshmi Pandit

ಚಿತ್ರ 4:

1948 ರಲ್ಲಿ ದೆಹಲಿಯಲ್ಲಿ ನಡೆದ ನೃತ್ಯ ಪ್ರದರ್ಶನದ ನಂತರ ನೆಹರು ಅವರು ಮೃಣಾಲಿನಿ ಸಾರಾಭಾಯ್ ಅವರನ್ನು ಅಭಿನಂದಿಸುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ರಾಜಕಾರಣಿಯಾಗಿದ್ದ ಮೃಣಾಲಿನಿ ಅವರ ತಾಯಿ ನೆಹರೂಗೆ ನಿಕಟರಾಗಿದ್ದರು ಮತ್ತು ಮೃಣಾಲಿನಿಯ ತಂದೆ ಕುಟುಂಬವು ನೆಹರೂ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು ಎಂಬುದನ್ನು ಗಮನಾರ್ಹ.

Nehru is congratulating Mrinalini Sarabhai after the Manushya performance in Delhi

ಚಿತ್ರ 5:

ಜಾಕ್ವೆಲಿನ್ ಕೆನಡಿ 1962 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಈ ಚಿತ್ರದಲ್ಲಿ ನೆಹರು ಅವರು ಅಮೇರಿಕನ್ ಪ್ರಥಮ ಮಹಿಳೆ ಜಾಕ್ವೆಲಿನ್ ಕೆನಡಿ ಅವರ ಹಣಗೆ “ತಿಲಕ” ಇಡುತ್ತಿರುವುದನ್ನು ಚಿತ್ರದಲ್ಲಿ ಕಾಣಬಹುದು.

ಪ್ರಧಾನ ಮಂತ್ರಿ ಪಂ. ಜವಾಹರಲಾಲ್ ನೆಹರು ಅವರು ಯುನೈಟೆಡ್ ಸ್ಟೇಟ್ಸ್‌ನ ಪ್ರಥಮ ಮಹಿಳೆ ಜಾಕ್ವೆಲಿನ್ ಕೆನಡಿ ಒನಾಸಿಸ್ ಅವರ ಹಣೆಗೆ ತಿಲಕವನ್ನು ಇಡುತ್ತಿರುವ ದೃಶ್ಯ. ಎಕ್ಸ್‌ಪ್ರೆಸ್ ಆರ್ಕೈವ್ ಫೋಟೋ
ಪ್ರಧಾನ ಮಂತ್ರಿ ಪಂ. ಜವಾಹರಲಾಲ್ ನೆಹರು ಅವರು ಯುನೈಟೆಡ್ ಸ್ಟೇಟ್ಸ್‌ನ ಪ್ರಥಮ ಮಹಿಳೆ ಜಾಕ್ವೆಲಿನ್ ಕೆನಡಿ ಒನಾಸಿಸ್ ಅವರ ಹಣೆಗೆ ತಿಲಕವನ್ನು ಇಡುತ್ತಿರುವ ದೃಶ್ಯ. ಎಕ್ಸ್‌ಪ್ರೆಸ್ ಆರ್ಕೈವ್ ಫೋಟೋ

ಚಿತ್ರ 6:

ಭಾರತದಲ್ಲಿನ ಮೊದಲ BOAC ವಿಮಾನದಲ್ಲಿ ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಅವರ ಪತ್ನಿ ಶ್ರೀಮತಿ ಸೈಮನ್ ಅವರಿಗೆ ಸಿಗರೇಟ್ ಹಚ್ಚುತ್ತಿದ್ದಾರೆ.

ಚಿತ್ರ 7:

ಈ ಚಿತ್ರದಲ್ಲಿ ನೆಹರೂ ಎಡ್ವಿನಾ ಮೌಂಟ್‌ಬ್ಯಾಟನ್‌ರ 18 ವರ್ಷದ ಮಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ಮೌಂಟ್‌ಬ್ಯಾಟನ್‌ರ ಕಿರಿಯ ಮಗಳಾದ ಪಮೇಲಾ ಮೌಂಟ್‌ಬ್ಯಾಟನ್ ತನ್ನ ಪೋಷಕರೊಂದಿಗೆ ಆಗಮಿಸಿದ್ದರು, ನವದೆಹಲಿಯಿಂದ ಹಿಂದಿರುಗುವ ವೇಳೆ ಪಂಡಿತ್ ನೆಹರೂಗೆ ವಿದಾಯ ಹೇಳುತ್ತಿರುವ ಫೋಟೋ.

ಚಿತ್ರ 8:

ಈ ಚಿತ್ರದಲ್ಲಿ, ನೆಹರು ಅವರು 1955 ರಲ್ಲಿ ಲಂಡನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅವರ ಸೋದರ ಸೊಸೆ ನಯನತಾರಾ ಸೆಹಗಲ್ ನೆಹರುಗೆ ಮುತ್ತು ನೀಡುತ್ತಿದ್ದಾರೆ. ಆ ಸಮಯದಲ್ಲಿ UK ಗೆ ಹೈ ಕಮಿಷನರ್ ಆಗಿದ್ದ ಸೆಹಗಲ್ ಅವರ ತಾಯಿ ವಿಜಯಲಕ್ಷ್ಮಿ ಪಂಡಿತ್ ಅವರನ್ನು ಸಹ ನೀವು ಚಿತ್ರದಲ್ಲಿ ನೋಡಬಹುದು.

Nehru being kissed by his niece Nayantara Sehgal
Nehru being kissed by his niece Nayantara Sehgal

ವಿಂಟೇಜ್ ಟೆಲಿವಿಷನ್ ಕಂಪನಿ ಬ್ರಿಟಿಷ್ ಪಾಥೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ನೆಹರೂ ಆಗಮನದ ವೀಡಿಯೊ ಸ್ಪಷ್ಟವಾದ ಸಂದರ್ಭವನ್ನು ಒದಗಿಸುತ್ತದೆ. ಕ್ಲಿಪ್‌ನ 27 ನೇ ಸೆಕೆಂಡ್‌ನಲ್ಲಿ ಚಿತ್ರವನ್ನು ಕಾಣಬಹುದು.

ಚಿತ್ರ 9:

ಈ ಚಿತ್ರವು ‘ಡ್ರೇಯಿಂಗ್ ದಿ ಲೈನ್’ ನಾಟಕದಿಂದ ಚಿತ್ರೀಕರಿಸಲ್ಪಟ್ಟಿದೆ ಮತ್ತು ಫೋಟೋದಲ್ಲಿರುವ ವ್ಯಕ್ತಿ ನೆಹರೂ ಅಲ್ಲ. ಅವರು ರಂಗಭೂಮಿ ಕಲಾವಿದ ಸಿಲಾಸ್ ಕಾರ್ಸನ್  ಮತ್ತು ಎಡ್ವಿನಾ ಮೌಂಟ್ ಬ್ಯಾಟನ್ ಪಾತ್ರವನ್ನು ನಿರ್ವಹಿಸಿದ ನಟಿ ಲೂಸಿ ಬ್ಲ್ಯಾಕ್ ಅವರೊಂದಿಗೆ ನಟಿಸಿರುವುದು . ನಾಟಕದ ಬಗ್ಗೆ ವಿವರಗಳು ಲಂಡನ್‌ನ ಹ್ಯಾಂಪ್‌ಸ್ಟೆಡ್ ಥಿಯೇಟರ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

 

ಒಟ್ಟಾರೆ ಹೇಳುವುದಾದರೆ ಈ ಎಲ್ಲಾ ಫೋಟೊಗಳಲ್ಲಿ ಹೆಚ್ಚಿನವು ತಮ್ಮ ಸಹೋದರಿಯರು ಮತ್ತು ಅವರ ಮಕ್ಕಳೊಂದಿಗೆ ನೆಹರೂ ಪ್ರೀತಿಯಿಂದ ಇರುವುದಾಗಿದೆ. ಉಳಿದವರು ರಾಜತಾಂತ್ರಿಕರ ಜೊತೆ ಇರುವ ಫೋಟೊಗಳನ್ನು ಕೆಟ್ಟ ವಿವರಣೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಭಾರತದ ಮೊಟ್ಟ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಬಗ್ಗೆ ಬಲಪಂಥೀಯ ಪ್ರತಿಪಾದಕರು ಸಾಮಾಜಿಕ ಮಾಧ್ಯಮಗಳಲ್ಲಿ ಅತಿ ಹೆಚ್ಚು ಅವಹೇಳನಾಕಾರಿ ನಿರೂಪಣೆಯೊಂದಿಗೆ ಪೋಸ್ಟ್‌ಗಳನ್ನು ಹಾಕುವ ಮೂಲಕ ನೆಹರೂ ಅವರ ಬಗ್ಗೆ ಇಲ್ಲ ಸಲ್ಲದ ಕಥೆಗಳನ್ನು ಕಟ್ಟಿ ಜನ ಸಾಮಾನ್ಯರ ಮನಸ್ಸಿನಲ್ಲಿ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಲಾಗಿದೆ.

ಅವರು ನಿಧನರಾಗಿ ಇಷ್ಟು ವರ್ಷ ಕಳೆದರೂ, ನೆಹರೂ ಅವರ ಫೋಟೋಗಳನ್ನು ಸುಳ್ಳು ನಿರೂಪಣೆಗಳೊಂದಿಗೆ ಹಂಚಿಕೊಳ್ಳುತ್ತಾ, ಅವರ ಅನೈತಿಕ ವ್ಯಕ್ತಿ ಎಂದು ಪ್ರಚಾರ ಮಾಡಲು ಫೋಟೋಶಾಪ್ ಮಾಡಲಾಗಿದೆ.

ಜವಾಹರಲಾಲ್ ನೆಹರು ಅವರನ್ನು ಗುರಿಯಾಗಿಸಲು ತಪ್ಪುದಾರಿಗೆಳೆಯುವ ಮತ್ತು ಫೋಟೋಶಾಪ್ ಮಾಡಿದ ಚಿತ್ರಗಳನ್ನು ಬಳಸಿರುವ ಹೆಚ್ಚಿನ ಉದಾಹರಣೆಗಳಿಗಾಗಿ ಕೆಳಗಿನ ಆಲ್ಟ್ ನ್ಯೂಸ್ ವೀಡಿಯೊವನ್ನು ವೀಕ್ಷಿಸಿ.

ಯಾವುದೇ ವ್ಯಕ್ತಿಯ ಪೋಟೋಗಳನ್ನು ಬಳಸಿ ಅವರ  ಗೌರವಕ್ಕೆ ಧಕ್ಕೆ ತರಲು ಯಾರಿಗೂ ಅಧಿಕಾರವಿಲ್ಲ ಮತ್ತು ಆ ರೀತಿ ಮಾಡುವುದು ಅಪರಾಧದ ವ್ಯಾಪ್ತಿಗೆ ಬರುತ್ತದೆ. ಅದರಲ್ಲೂ ರಾಜಕೀಯ ನಾಯಕರ ಬಗ್ಗೆ ಇಷ್ಟು ಹಗುರವಾಗಿ ಇಲ್ಲದ ಕಥೆಗಳನ್ನು ಕಟ್ಟಿ ಸುಳ್ಳು ನಿರೂಪಣೆ ಮಾಡುವುದು ಎಷ್ಟು ಸರಿ.

ಟೀಕೆ ಟಿಪ್ಪಣಿಗಳನ್ನು ಮಾಡುವಾಗ ಅದರಲ್ಲೂ ರಾಜಕೀಯವಾಗಿ ಟೀಕೆಗಳನ್ನು ಮಾಡುವಾಗ ರಚನಾತ್ಮಕವಾಗಿ ಮತ್ತು ಎದುರಿಗಿರುವ ವ್ಯಕ್ತಿಯು ಆ ಟೀಕೆಯನ್ನು ಒಪ್ಪುವಂತೆ ಮಾಡಬೇಕೆ ವಿನಃ, ಅವಮಾನ ಮಾಡುವ ರೀತಿ ಸುಳ್ಳು ಕತೆಗಳನ್ನು ಕಟ್ಟಿ ಹೀಗಳೆಯುವುದು ವೈರತ್ವವನ್ನು ಹೆಚ್ಚಿಸುವುದಲ್ಲದೆ ಅದರಿಂದ ಬೇರೆನನ್ನು ಸಾಧಿಸಲು ಸಾಧ್ಯವಿಲ್ಲ.

ಕೃಪೆ: ಆಲ್ಟ್‌ ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: Sir ಎಂದರೆ ‘ನಾನು ಗುಲಾಮ’ ಎಂದರ್ಥವೇ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights