ಫ್ಯಾಕ್ಟ್‌ಚೆಕ್: Sir ಎಂದರೆ ‘ನಾನು ಗುಲಾಮ’ ಎಂದರ್ಥವೇ ?

Sir ಎಂಬುದರ ಪೂರ್ಣ ರೂಪ Slave I Remember (ನಾನು ಗುಲಾಮ ಮರೆಯದಿರಿ) ಎಂಬರ್ಥವಿದೆ ಎಂದು ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬ್ರೀಟಿಷರು ತಮ್ಮ ಆಡಳಿತದ ಕಾಲದಲ್ಲಿ ಭಾರತೀಯರನ್ನು ಹೀಯಾಳಿಸುವ ಸಲುವಾಗಿ ಹೀಗೆ ಬಳಸುವಂತೆ ಮಾಡಿದರೆ ಎಂದು ಪ್ರತಿಪಾದಿಸಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

Sir ಎಂಬುದರ ಪೂರ್ಣ ರೂಪ Slave I Remember ಎಂಬುದೇ ಅಥವಾ Slave I Remain ಎಂಬುದೇ ಎಂದು ಅಂತರ್ಜಾಲದಲ್ಲಿ ಹುಡುಕಿದಾಗಿ ಅದಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕೇಂಬ್ರಿಡ್ಜ್ ಡಿಕ್ಷನರಿಯ ಪ್ರಕಾರ sir ಎಂಬುದು ನಾಮಪದವಾಗಿದ್ದು ಇದನ್ನು ‘ಒಬ್ಬ ವ್ಯಕ್ತಿಯೊಂದಿಗೆ ಮಾತನಾಡುವ ಔಪಚಾರಿಕ ಮತ್ತು ಸಭ್ಯ ವಿಧಾನವಾಗಿ ಬಳಸಲಾಗುತ್ತದೆ, ವಿಶೇಷವಾಗಿ ನಿಮಗೆ ಸೇವೆಯನ್ನು ಒದಗಿಸುತ್ತಿರುವ ಅಥವಾ ಅಧಿಕಾರದ ಸ್ಥಾನದಲ್ಲಿರುವವರಿಗೆ ಇದನ್ನು ಬಳಸಲಾಗುತ್ತದೆ’. ಅದರ ಕುರಿತ ಹೆಚ್ಚಿನ ಸರ್ ಬಗ್ಗೆ ಹೆಚ್ಚಿನ ವ್ಯಾಖ್ಯಾನಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.

ಇಂಗ್ಲಿಷ್ ಪದಗಳ ಮೂಲವನ್ನು ವಿವರಿಸುವ etymonline.com ಎಂಬ ವೆಬ್‌ಸೈಟ್ ಪ್ರಕಾರ Sir ಪದವು ಹಳೆಯ ಫ್ರೆಂಚ್ ಪದ Sireನಿಂದ ಹುಟ್ಟಿಕೊಂಡಿದೆ. Sire ಎಂಬ ಲ್ಯಾಟಿನ್ ಪದ ಸೀನಿಯರ್ ನಿಂದ ಹುಟ್ಟಿಕೊಂಡಿದೆ. ಅದು ಯಾವುದೇ ಪದದ ಸಂಕ್ಷಿಪ್ತ ರೂಪವಲ್ಲ ಎಂದು ಆ ವೆಬ್‌ಸೈಟ್ ತಿಳಿಸಿದೆ.

ನೈಟ್‌ಹುಡ್ ಪದವಿ ಪಡೆದವನ್ನು ಸೂಚಿಸಲು ಅವರ ಹೆಸರಿನ ಮುಂದೆ Sire ಅನ್ನುಸೇರಿಲಾಗುತ್ತಿತ್ತು. ಇದರರ್ಥ ಹಿರಿಯರು ಅಥವಾ ದೊಡ್ಡವರು ಎಂಬುದೆ ಹೊರತು ಮೇಲಿನ ಪೋಸ್ಟ್‌ನಲ್ಲಿ ವಿವರಿಸಿದಂತೆ Slave I Remember ಎಂಬುದರ ಸಂಕ್ಷಿಪ್ತ ರೂಪವಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ Sir ಎಂಬುದರ ಪೂರ್ಣ ರೂಪ Slave I Remember ಎಂಬುದಲ್ಲ. ಅದು ಹಳೆದ ಫ್ರೆಂಚ್ ಪದ Sire ನಿಂದ ಉತ್ಪತ್ತಿಯಾಗಿದೆ.  ಇಂಗ್ಲಿಷ್ ಪದಗಳ ಮೂಲವನ್ನು ವಿವರಿಸುವ etymonline.com ಎಂಬ ವೆಬ್‌ಸೈಟ್ ಪ್ರಕಾರ Sir ಪದವು ಹಳೆಯ ಫ್ರೆಂಚ್ ಪದ Sireನಿಂದ ಹುಟ್ಟಿಕೊಂಡಿದೆ. ನೈಟ್‌ಹುಡ್ ಪದವಿ ಪಡೆದವನ್ನು ಸೂಚಿಸಲು ಅವರ ಹೆಸರಿನ ಮುಂದೆ Sire ಅನ್ನುಸೇರಿಲಾಗುತ್ತಿತ್ತು. Sire ಎಂಬ ಲ್ಯಾಟಿನ್ ಪದ ಸೀನಿಯರ್ ನಿಂದ ಹುಟ್ಟಿಕೊಂಡಿದೆ, ಇದರರ್ಥ ಹಿರಿಯರು ಅಥವಾ ದೊಡ್ಡವರು ಎಂಬುದೆ ಹೊರತು ಅದು ಯಾವುದೇ ಪದದ ಸಂಕ್ಷಿಪ್ತ ರೂಪವಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ‘ಲಯನ್ ಮ್ಯಾನ್’ ಶಿಲ್ಪವನ್ನು, ನರಸಿಂಹ ಶಿಲ್ಪ ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights