ಚುನಾವಣೆ ವೇಳೆ ರಜನಿಕಾಂತ್‌ಗೆ ಫಾಲ್ಕೆ ಪ್ರಶಸ್ತಿ: ಇದು BJPಯ ಕೊಳಕು ರಾಜಕೀಯದ ಸಮಯ!

ರಜನಿಕಾಂತ್ ಅವರು ಸಿನಿಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ವಿಚಾರದಿಂದ ಅವರು ರೋಮಾಂಚನಗೊಳ್ಳುವುದಕ್ಕಿಂತ ಹೆಚ್ಚು ಮುಜುಗರಕ್ಕೊಳಗಾಗಿದ್ದಾರೆ.

ತಮಿಳುನಾಡು ವಿಧಾನಸಭಾ ಚುನಾವಣೆಯ ಮತದಾನಕ್ಕೆ ಇನ್ನು ಒಂದು ವಾರಕ್ಕೂ ಕಡಿಮೆ ದಿನಗಳು ಇರುವ ಸಮಯದಲ್ಲಿ ಪ್ರಶಸ್ತಿ ನೀಡಲಾಗಿದೆ. ಇದು ಸೂಪರ್‌ಸ್ಟಾರ್‌ಗೆ ವಿಚಿತ್ರವಾಗಿ ಕಾಣತ್ತದಾದರೂ, ಇದರ ಹಿಂದಿನ ಉದ್ದೇಶ ಸ್ಪಷ್ಟವಾಗಿದೆ. ಏಕೆಂದರೆ, ತಮಿಳುನಾಡಿನಲ್ಲಿ ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟಕ್ಕೆ ಮತ ಚಲಾಯಿಸುವಂತೆ ಮೋದಿ ಸರ್ಕಾರವು ರಜಿನಿಕಾಂತ್‌ ಅವರ ಅಭಿಮಾನಿಗಳನ್ನು ಸೆಳೆಯುವ ಪ್ರಯತ್ನ ಇದಾಗಿದೆ.

ರಜನಿಕಾಂತ್ ಅವರಿಗೆ ನೀಡಲಾಗಿರುವ ಪ್ರಶಸ್ತಿಗೆ ತಮಿಳುನಾಡು ಚುನಾವಣೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂಬ ಕೇಂದ್ರ ಮಾಹಿತಿ ಸಚಿವ ಪ್ರಕಾಶ್ ಜಾವಡೇಕರ್ ಅವರ ಸಮರ್ಥನೆಯು, ಅವರ ಹೇಳಿಕೆಗೇ ವಿರುದ್ಧವಾದ ಅರ್ಧವನ್ನು ನೀಡುತ್ತದೆ. ಈ ಪ್ರಶಸ್ತಿಯು ತಮಿಳುನಾಡಿನಲ್ಲಿ ಏಪ್ರಿಲ್‌ 06ರಂದು ನಡೆಯುವ ಮತದಾನದಿಂದ ಹೊರಗಿರಲು ಸಾಧ್ಯವಿಲ್ಲ.

ಬಿಜೆಪಿ ರಜನಿಕಾಂತ್ ರಾಜಕೀಯಕ್ಕೆ ಪ್ರವೇಶಿಸುವಂತೆ ಪ್ರೇರೇಪಿಸುತ್ತಿತ್ತು. ಅವರನ್ನು ಬಹಿರಂಗವಾಗಿಯೂ, ರಹಸ್ಯವಾಗಿಯೂ ಸೆಳೆಯುವ ಪ್ರಯತ್ನವನ್ನೂ ಮಾಡಿತ್ತು. 2016 ರಲ್ಲಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ, 2017 ರಲ್ಲಿ ಅವರು ರಾಜಕೀಯಕ್ಕೆ ಪ್ರವೇಶಿಸುವುದಾಗಿ ಘೋಷಿಸಿದರು. ಆದರೆ, ಆರೋಗ್ಯ ಸಮಸ್ಯೆಯಿಂದಾಗಿ ಅವರು ರಾಜಕೀಯದಿಂದ ದೂರ ಉಳಿಯುವುದಾಗಿ ತಿಳಿಸಿದರು. ಇದೀಗ, ರಜನಿಕಾಂತ್‌ಗೆ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಗಿದೆ. ಈ ಮೂಲಕ ರಾಜ್ಯದಲ್ಲಿ ಎನ್‌ಡಿಎ ಮೈತ್ರಿಗೆ ಮತ ಚಲಾಯಿಸುವಂತೆ ರಜನಿಕಾಂತ್ ಅವರ ಲಕ್ಷಾಂತರ ಅಭಿಮಾನಿಗಳನ್ನು ಪ್ರಚೋದಿಸಲು ಬಿಜೆಪಿ ಮುಂದಾಗಿದೆ.

ಹೆಚ್ಚಿನ ಚುನವಣಾ ಪೂರ್ವ ಸಮೀಕ್ಷೆಗಳು ಡಿಎಂಕೆ ಮತ್ತದರ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿವೆ. ಡಿಎಂಕೆ ಅಧಿಕಾರಕ್ಕೆ ಬರುವುದನ್ನು ತಡೆಯಲಾಗುವುದಿಲ್ಲವೆಂದು ಬಿಜೆಪಿ-ಎಐಎಡಿಎಂಕೆ ಹತಾಶಗೊಂಡಿವೆ. ಸಮೀಕ್ಷೆಗಳ ಪ್ರಕಾರ, ಬಿಜೆಪಿಯ 20 ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ಛಾಪು ಮೂಡಿಸಲು ಎಣಗಾಡುತ್ತಿವೆ. ಆ ಪೈಕಿ ಒಬ್ಬರು ಮಾತ್ರ ಗೆಲ್ಲುವ ಹಂತದಲ್ಲಿ ಹೋರಾಟ ಮಾಡಬಹುದು ಎಂದು ತೋರಿಸುತ್ತದೆ.

ಅಲ್ಲದೆ, ರಜಿನಿ ಅವರು ಬಿಜೆಪಿಯನ್ನು ಬೆಂಬಲಿಸುವ ಸಲುವಾಗಿ ರಾಜಕೀಯವಾಗಿ ಅನುಕೂಲಕರವಾಗಿ ಮಾತನಾಡುತ್ತಾರೆ. ಅವರು ಡಿಮಾನಿಟೈಸೇಶನ್, ಸಿಎಎ ಅನ್ನು ಬೆಂಬಲಿಸಿದ್ದರು. ಮುರುಗ ಭಗವಂತನ ಬಗ್ಗೆ ಬಂದ ಅವಹೇಳನಕಾರಿ ಟೀಕೆಗಳನ್ನು ವಿರೋಧಿಸಿದರು. ಹೀಗಿರುವಾಗ, “ಸೂಪರ್‌ಸ್ಟಾರ್‌ಗಾಗಿ ಫಾಲ್ಕೆ ಪ್ರಶಸ್ತಿಯನ್ನು ನೀಡಿ, ಅವರ ಅಭಿಮಾನಿಗಳನ್ನುಬಿಜೆಪಿ ಏಕೆ ಆಕರ್ಷಿಸಬಾರದು?”

ಫಾಲ್ಕೆ ಪ್ರಶಸ್ತಿಯೊಂದಿಗೆ ತಮಿಳುನಾಡಿನ ಶ್ರೇಷ್ಠ ನಟನೊಬ್ಬನನ್ನು ಗೌರವಿಸಲು ಕೇಂದ್ರ ಬಯಸಿದರೆ, ಕಮಲ್ ಹಾಸನ್ ಅವರನ್ನೂ ಪ್ರಶಂಸಿಸಬಹುದಿತ್ತು. ಅವರು ರಜಿನಿಗಿಂತಲೂ ಹಿರಿಯರಾಗಿದ್ದಾರೆ, ಚಿತ್ರೋದ್ಯಮದಲ್ಲೂ ಸೀನಿಯರ್‌ ಮತ್ತು ಬಾಲ ಕಲಾವಿದರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ಆರು ದಶಕಗಳಿಂದ ನಟಿಸುತ್ತಿದ್ದಾರೆ. ಅವರು ವಿವಿಧ ಭಾಷೆಗಳಲ್ಲಿ ನಟಿಸಿದ್ದಾರೆ, ಹೊಸ ರೀತಿಯಲ್ಲಿ ಪಾತ್ರಗಳನ್ನು ಪ್ರಯೋಗಿಸಿದ್ದಾರೆ, ಅತ್ಯುತ್ತಮ ನಟನಿಗಾಗಿ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ, ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ ಮತ್ತು ಗಾಯಕರೂ ಆಗಿದ್ದಾರೆ.

ದುರದೃಷ್ಟವಶಾತ್, ಪ್ರಸ್ತುತ ಚುನಾವಣೆಗಳಲ್ಲಿ ಕಮಲ್ ರಾಜಕೀಯ ಸ್ಪರ್ಧಿಯಾಗಿದ್ದಾರೆ. ಕೊಯಮತ್ತೂರು ದಕ್ಷಿಣದ ಬಿಜೆಪಿ ಅಭ್ಯರ್ಥಿಯನ್ನು ನೇರವಾಗಿ ಎದುರಿಸುತ್ತಿದ್ದಾರೆ. ಮೋದಿ-ಪಳನಿಸ್ವಾಮಿ ಸರ್ಕಾರಗಳನ್ನೂ ಟೀಕಿಸುತ್ತಿರುವ ಇಂತಹ ರಾಜಕೀಯ ಎದುರಾಳಿಯು ಕೇಂದ್ರ ಸರ್ಕಾರದ ವಿವೇಚನೆಯಿಂದ ಘೋಷಿಸಲ್ಪಟ್ಟ ಫಾಲ್ಕೆ ಪ್ರಶಸ್ತಿಗೆ ಅರ್ಹತೆ ಪಡೆಯಲು ಸಾಧ್ಯವೇ?

ಅಲ್ಲದೆ, ಕಮಲ್ ಅವರು ಬುಧವಾರ ರಾಜಕೀಯ ಹೇಳಿಕೆ ನೀಡಿದ್ದಾರೆ.  ಅವರು ಕೊಯಮತ್ತೂರಿನಲ್ಲಿ ಮುಸ್ಲಿ ಒಡೆತನದ ಪಾದರಕ್ಷೆಗಳ ಅಂಗಡಿಗೆ ಭೇಟಿ ನೀಡಿ ಒಂದು ಜೋಡಿ ಚಪ್ಪಲ್‌ಗಳನ್ನು ಖರೀದಿಸಿದ್ದರು. ಆ ಅಂಗಡಿಯಲ್ಲಿ ಕೊಳ್ಳಲು ಕಾರಣ – ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ರ್ಯಾಲಿಯ ಸಂದರ್ಭದಲ್ಲಿ ಆ ಪ್ರದೇಶದ ಮೂಲಕ ಹಾದುಹೋಗವಾಗ ಆ ಅಂಗಡಿ ತೆರೆದಿತ್ತು. ಆ ಕಾರಣಕ್ಕಾಗಿ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಲಾಗಿತ್ತು. ಇಂತಹ ಘಟನೆಗಳನ್ನು ವಿರೋಧಿಸುವ ಕಮಲ್‌ ಅವರು ಪ್ರಸ್ತುತ ಸರ್ಕಾರಕ್ಕೆ ವಿಲನ್‌ ಆಗಿ ಕಾಣುತ್ತಿದ್ದಾರೆ.

ಇದನ್ನೂ ಓದಿ: ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ 51 ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ…!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights