ರಾಜರಾಜೇಶ್ವರಿ ನಗರ ಉಪಚುನಾವಣೆ ಫಲಿತಾಂಶಕ್ಕೂ ಮುನ್ನ ಸೋಲೊಪ್ಪಿಕೊಂಡ ಹೆಚ್ಡಿಕೆ…!
ಆರ್ ಆರ್ ನಗರ ಹಾಗೂ ಶಿರಾ ವಿಧಾನಸಭಾ ಉಪಚುನಾವಣೆ ಫಲಿತಾಂಶಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಬಿಜೆಪಿ , ಕಾಂಗ್ರೆಸ್ ಹಾಗೂ ಜೆಡಿಎಸ್ ಗೆಲುವು ನಮ್ಮದೇ ಎಂದು ಹೇಳಿಕೊಳ್ಳುತ್ತಿವೆ.
ಆದರೆ ಉಪಚುನಾವಣೆಗೂ ಮುನ್ನ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಸೋಲನ್ನು ಒಪ್ಪಿಕೊಂಡಿದ್ದಾರೆ. ಹೌದು… ನವೆಂಬರ್ 10ರಂದು ಉಪಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು, ವಿಜಯಲಕ್ಷ್ಮಿ ಯಾರ ಕೈಹಿಡಿಯಲಿದ್ದಾಳೆ ಎನ್ನುವ ಕುತೂಹಲ ಮೂಡಿದೆ. ಚುನಾವಣೆಗೂ ಮುನ್ನ ಭಾರೀ ಪ್ರಚಾರ ಮಾಡಿದ ಮೂರು ಪಕ್ಷಗಳು ಗೆಲವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದ್ದವು.
ಆದರೆ ಈ ಬಗ್ಗೆ ಇಂದು ಹೆಚ್ಡಿಕೆ ಮಾತನಾಡಿದ್ದು ಭಾರೀ ಆಶ್ಚರ್ಯ ಮೂಡಿಸಿದೆ. “ಶಿರಾದಲ್ಲಿ ಜೆಡಿಎಸ್ ಗೆಲ್ಲಲ್ಲಿದೆ. ಆದರೆ ರಾಜರಾಜೇಶ್ವರಿ ನಗರದಲ್ಲಿ ಗೆಲುವಿನ ಸನಿಹಕ್ಕೆ ಬರಲಿದ್ದೇವೆ” ಎಂದು ಹೇಳುವ ಮೂಲಕ ಒಂದು ಕ್ಷೇತ್ರದಲ್ಲಿ ಫಲಿತಾಂಶಕ್ಕೂ ಮುನ್ನವೇ ಸೋಲನ್ನು ಒಪ್ಪಿಕೊಂಡಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸಿನವರು ನೀರಿನಂತೆ ಚುನಾವಣೆಗೆ ಹಣವನ್ನು ಖರ್ಚು ಮಾಡಿದ್ದಾರೆ. ನಮಗೆ ಎಲ್ಲಿಂದ ಬರಬೇಕು ಅಷ್ಟು ದುಡ್ಡು ಎಂದು ಕುಮಾರಸ್ವಾಮಿ ಹೇಳುವ ಮೂಲಕ ಆರ್ ಆರ್ ನಗರದಲ್ಲಿ ಸೋಲು ಖಚಿತ ಎನ್ನುವ ಮಾತನ್ನಾಡಿದ್ದಾರೆ.
ಸದ್ಯ ಈ ಹೇಳಿಕೆ ಜೆಡಿಎಸ್ ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು ಫಲಿತಾಂಸಕ್ಕೂ ಮುನ್ನ ಸೋಲೊಪ್ಪಿಕೊಂಡಿರುವುದು ಸರಿಯಲ್ಲ ಎನ್ನುವುದು ಜೆಡಿಎಸ್ ಆತಂರಿಕ ವಲಯದಲ್ಲಿ ಹೇಳಲಾಗುತ್ತಿದೆ.