ಜಾನ್ಸನ್​ ಆ್ಯಂಡ್ ಜಾನ್ಸನ್​ ಕೊವಿಡ್​ 19 ಲಸಿಕೆ ಬಗ್ಗೆ ಎಫ್​ಡಿಎ ಆತಂಕಕಾರಿ ಹೇಳಿಕೆ..!

ಜಾನ್ಸನ್​ ಆ್ಯಂಡ್ ಜಾನ್ಸನ್​ ಕೊವಿಡ್​ 19 ಲಸಿಕೆ ಬಗ್ಗೆ ಎಫ್​ಡಿಎ ಆತಂಕಕಾರಿ ವಿಚಾರವನ್ನು ಬಹಿರಂಗಗೊಳಿಸಿದೆ.

ವಿಶ್ವದಲ್ಲಿ ಕೊರೊನಾ ವಿರುದ್ಧ ಹೋರಾಡಲು ಹಲವಾರು ಸಂಸ್ಥೆಗಳು ಕೊರೊನಾ ಲಸಿಕೆ ತಯಾರಿಸುತ್ತಿವೆ. ಇದರಲ್ಲಿ ಜಾನ್ಸನ್​ ಆ್ಯಂಡ್ ಜಾನ್ಸನ್​ ಕೂಡ ಹೊರತಾಗಿಲ್ಲ. ಆದರೆ ಜಾನ್ಸನ್​ ಆ್ಯಂಡ್ ಜಾನ್ಸನ್​ ಕೊರೊನಾ ಲಸಿಕೆ ಎಷ್ಟು ಸೂಕ್ತ ಎನ್ನುವ ಪ್ರಶ್ನೆಗೆ ಎಫ್ಡಿಎ ಆತಂಕಾರಿ ಹೇಳಿಕೆಯನ್ನು ನೀಡಿದೆ.

ಜಾನ್ಸನ್​ ಆ್ಯಂಡ್ ಜಾನ್ಸನ್​ ಲಸಿಕೆ ಪಡೆಯುವುದರಿಂದ ನರವೈಜ್ಞಾನಿಕ ತೊಂದರೆಗಳಾಗಬಹುದು ಎನ್ನುವುದನ್ನ ಯುಎಸ್ ನ ಆಹಾರ ಮತ್ತು ಔಷಧ ಆಡಳಿತ (ಎಫ್ಡಿಎ) ಎಚ್ಚರಿಕೆಯನ್ನು ನೀಡಿದೆ. ಆದರೆ ಈ ಲಸಿಕೆ ಪಡೆದವರೆಲ್ಲರಿಗೂ ಈ ತೊಂದರೆಯಾಗುತ್ತದೆ ಎಂದಿಲ್ಲ. ಬಹುತೇಕರಿಗೆ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಎಫ್ಡಿಎ ಹೇಳಿದೆ.

ಜಾನ್ಸನ್​ ಆ್ಯಂಡ್ ಜಾನ್ಸನ್​ ಕೊವಿಡ್​ 19 ಲಸಿಕೆ ನರವೈಜ್ಞಾನಿಕ ಸಮಸ್ಯೆಗಳನ್ನು ಉಂಟು ಮಾಡುತ್ತದೆಯೇ? ಇಲ್ಲವೇ ಎಂಬುದನ್ನು ನಾವಿನ್ನೂ ಪ್ರಮಾಣೀಕರಿಸಿಲ್ಲ. ಆದರೆ ಗುಯಿಲಿನ್-ಬಾರ್ ಸಿಂಡ್ರೋಮ್ ಎಂಬ ಒಂದು ರೂಪದ ಪಾರ್ಶ್ವವಾಯುವನ್ನು ಉಂಟುಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂಬುದನ್ನು ಗಮನಿಸಿದ್ದೇವೆ ಎಂದು ಎಫ್​​​ಡಿಎ ತಿಳಿಸಿದೆ.

ಜಾನ್ಸನ್​ ಆ್ಯಂಡ್​ ಜಾನ್ಸನ್​​ ಕೊವಿಡ್​ 19 ಲಸಿಕೆ ಬಗ್ಗೆ ಆತಂಕಕಾರಿ ಮಾಹಿತಿಯನ್ನು ನೀಡಿರುವ ಎಫ್​ಡಿಎ, ಮಾಡೆರ್ನಾ ಮತ್ತು ಫೈಜರ್​ ಲಸಿಕೆಗಳು ಅಂಥ ಅಪಾಯಕಾರಿ ಫಲಿತಾಂಶವನ್ನು ತೋರುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ. ಈವರೆಗೆ ಸುಮಾರು 12.8 ಮಿಲಿಯನ್​​ ಡೋಸ್​ ಜಾನ್ಸೆನ್​ ಲಸಿಕೆ ನೀಡಲಾಗಿದೆ. ಅದರಲ್ಲಿ ಗುಯಿಲಿನ್-ಬಾರ್ ಸಿಂಡ್ರೋಮ್​ನ ಸುಮಾರು 100 ಪ್ರಕರಣಗಳು ಪತ್ತೆಯಾಗಿವೆ ಎಂದೂ ಎಫ್​ಡಿಎ ಮಾಹಿತಿ ನೀಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights