ದೆಹಲಿಯಲ್ಲಿ ಭಾರೀ ಮಳೆ : ಮೂರು ಜನ ಸಾವು – 9 ಮಂದಿ ಕಾಣೆ..!

ಬಿಸಿಲಿನ ಬೇಗೆಗೆ ತತ್ತರಿಸಿದ್ದ ರಾಷ್ಟ್ರರಾಜಧಾನಿಗೆ ಇಂದು ಮಾನ್ಸೂನ್ ಮಳೆ ಎಂಟ್ರಿ ಕೊಟ್ಟಿದೆ. ದೆಹಲಿಯ ಹಲವೆಡೆ ಭಾರೀ ಮಳೆಯಾಗುತ್ತಿದ್ದು ಮೂರು ಮಂದಿ ಮೃತಪಟ್ಟಿದ್ದಾರೆ.

ದೆಹಲಿಯಲ್ಲಿ ಮಂಗಳವಾರ ಬೆಳಿಗ್ಗೆ ಮಳೆ ಸುರಿಸಿದ್ದು, ಸುಡುವ ಬಿಸಿಲಿನಿಂದ ಜನ ತತ್ತರಿಸಿ ಹೋಗಿದ್ದಾರೆ. ಸಾಮಾನ್ಯ ದಿನಾಂಕಕ್ಕಿಂತ 16 ದಿನಗಳ ಹಿಂದಿಯೇ ಮಾನ್ಸೂನ್ ಪ್ರಾರಂಭವನ್ನು ಭಾರತೀಯ ಹವಾಮಾನ ಇಲಾಖೆ ತಿಳಿಸಿದ್ದು, ಆದರೆ ರಾಜಧಾನಿಗೆ ಈ ಬಾರಿ ತಡವಾಗಿ ಮಾನ್ಸೂನ್ ಆರಂಭಗೊಂಡಿದೆ. 2002 ರಲ್ಲಿ, ಜುಲೈ 19 ರಂದು ಮಾನ್ಸೂನ್ ದೆಹಲಿಯನ್ನು ತಲುಪಿತು. ಇದಾದ ಬಳಿಕ ಇದು ನಗರದಲ್ಲಿ ಹೆಚ್ಚು ವಿಳಂಬವಾಗಿದೆ. ಭಾರತ ಹವಾಮಾನ ಇಲಾಖೆ (ಐಎಂಡಿ) ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.

ಮಾನ್ಸೂನ್ ಮಂಗಳವಾರ ದೆಹಲಿಗೆ ಆಗಮಿಸಿ, ಮೂರು ಜನರು ಸಾವನ್ನಪ್ಪಿದ್ದು ಮತ್ತು 9 ಮಂದಿ ಕಾಣೆಯಾಗಿದ್ದಾರೆ.

ಐಎಂಡಿ ರಾಜಸ್ಥಾನ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಆರೆಂಜ್ ಅಲರ್ಟ್ ನೀಡಿದ್ದು, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಉತ್ತರ ಪ್ರದೇಶಗಳಿಗೆ ಮಂಗಳವಾರ ಎಲ್ಲೋ ಅಲರ್ಟ್ ನೀಡಿದೆ.

ಹಿಮಾಚಲ ಪ್ರದೇಶದಲ್ಲಿ ಭಾನುವಾರ ರಾತ್ರಿ ಭಾರಿ ಮಳೆಯಾಗಿದ್ದು, ಕಾಂಗ್ರಾ ಜಿಲ್ಲೆಯ ಧರ್ಮಶಾಲಾ ಪಟ್ಟಣದಲ್ಲಿ ಪ್ರವಾಹ ಉಂಟಾಗಿದ್ದು, ಕಟ್ಟಡಗಳು ಕಾರುಗಳ ಮೇಲಿ ಕಸಿದಿವೆ. ಹಿಮಾಚಲ ಪ್ರದೇಶದ ಎರಡು ದೂರದ ಕಾಂಗ್ರಾ ಹಳ್ಳಿಗಳ ಮನೆಗಳಲ್ಲಿ ಪ್ರವಾಹದಂತೆ ಮಳೆ ನೀರು ನುಗ್ಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights