ದಕ್ಷಿಣ ಆಫ್ರಿಕಾದಲ್ಲಿ ಭುಗಿಲೆದ್ದ ಹಿಂಸಾಚಾರ : 10 ಮಂದಿ ಸಾವು- 490 ಜನರ ಬಂಧನ!

ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್ ಜುಮಾ ಅವರನ್ನು ಜೈಲಿಗೆ ಹಾಕಿದ ಬೆನ್ನಲ್ಲೆ ಅವರ ಬೆಂಬಲಿಗರಿಂದ ಹಿಂಸಾಚಾರ ತಾರಕೆಕ್ಕೇರಿದೆ. ಈ ಗಲಭೆಯಲ್ಲಿ  10 ಮಂದಿ ಸಾವನ್ನಪ್ಪಿದ್ದು 490 ಜನರನ್ನು ಬಂಧಿಸಲಾಗಿದೆ. ಗಲಭೆಯನ್ನು ತಡೆಯುವಲ್ಲಿ ಪೊಲೀಸರು ಹರಸಾಹಸವೇ ಪಡುತ್ತಿದ್ದಾರೆ.

79 ವರ್ಷದ ಜುಮಾ ಅವರು 2009 ರಿಂದ 2018 ರವರೆಗೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಭ್ರಷ್ಟಾಚಾರದ ವಿಚಾರಣೆಗೆ ಹಾಜರಾಗಲು ವಿಫಲವಾದ ನಂತರ ನ್ಯಾಯಾಲಯದ ತಿರಸ್ಕಾರಕ್ಕಾಗಿ ಜುಲೈ 7 ರಂದು 15 ತಿಂಗಳು ಶಿಕ್ಷೆ ವಿಧಿಸಲಾಯಿತು.

ಹೀಗಾಗಿ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್ ಜುಮಾ ಅವರನ್ನು ಜೈಲಿಗೆ ಹಾಕಿದ ಬೆನ್ನಲ್ಲೇ ಈ ಹಿಂಸಾಚಾರ ನಡೆದಿದೆ ಎಂದು ಹೇಳಲಾಗುತ್ತಿದೆ. ಪ್ರಕರಣದಲ್ಲಿ ಪೊಲೀಸರಿಗೆ ಸಹಾಯ ಮಾಡಲು ದೇಶದ ಮಿಲಿಟರಿ ಮುಂದಾಗಿದ್ದು, ಹಿಂಸಾಚಾರ ತಡೆಯಲು 490 ಕ್ಕೂ ಹೆಚ್ಚು ಜನರನ್ನು ಬಂಧಿಸಿದೆ.

ದೇಶದ ಅತಿದೊಡ್ಡ ನಗರವಾದ ಜೋಹಾನ್ಸ್‌ಬರ್ಗ್‌ನಲ್ಲಿರುವ ಶಾಪಿಂಗ್ ಮಾಲ್‌ಗಳು ಈ ಹಿಂಸಾಚಾರಕ್ಕಿಂದು ಸಾಕ್ಷಿಯಾಗಿವೆ. ಜೊತೆಗೆ ಟೈರ್‌ಗಳನ್ನು ಸುಡುವ ಮೂಲಕ ಪ್ರಮುಖ ರಸ್ತೆಗಳನ್ನು ನಿರ್ಬಂಧಿಸಲಾಗಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights