ಫ್ಯಾಕ್ಟ್‌ಚೆಕ್: ಭಗತ್‌ ಸಿಂಗ್‌ಗೆ ಕೇಜ್ರಿವಾಲ್‌ರಿಂದ ಅವಮಾನ ಎಂದು ಸುಳ್ಳು ಸುದ್ದಿ ಹರಡಿದ BJP ಬೆಂಬಲಿಗರು

ದೇಶದ ಹುತಾತ್ಮ ಕ್ರಾಂತಿಕಾರಿಗಳಾದ ಭಗತ್‌ಸಿಂಗ್, ರಾಜ್‌ಗುರು ಮತ್ತು ಸಖ್‌ದೇವ್ ಅವರು ದೇಶದ ಸ್ವಾತಂತ್ರಕ್ಕಾಗಿ ನೇಣುಗಂಭಕ್ಕೇರಿ ಹುತಾತ್ಮರಾಗಿದ್ದಾರೆ. ಹುತಾತ್ಮ ಸಂಗಾತಿಗಳ ಬಲಿದಾನ ಈ ದೇಶದ ಜನಮಾನಸದಲ್ಲಿ ಎಂದೆಂದಿಗೂ ಜೀವಂತ. ಈ ಮಾರ್ಚ್‌ 23 ರಂದು ಇಡಿ ದೇಶವೇ ಇವರ ಬಲಿದಾನವನ್ನು ಸ್ಮರಿಸಿದೆ. ಆದರೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾತ್ರ ಭಗತ್‌ಸಿಂಗ್ ಅವರಿಗೆ ಅಗೌರವ ತೋರಿದ್ದಾರೆ ಎಂದು ಹೇಳುವ ಪೋಸ್ಟ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಪಂಜಾಬ್ ಸಿಎಂ ಭಗವಂತ್ ಮಾನ್, ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಕ್ಷದ ಕೆಲ ಬೆಂಬಲಿಗರು ಶಹೀದ್ ಭಗತ್ ಸಿಂಗ್ ಅವರ ಸ್ಮಾರಕಕ್ಕೆ ಭೇಟಿ ನೀಡಿ  ಹುತಾತ್ಮರ ಸಮಾಧಿಗೆ ನಮಿಸಿ ಹೂಗುಚ್ಚ ಇರಿಸಿ ಗೌರವ ನಮನ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ತೆಗೆದಿದೆ ಎನ್ನಲಾದ ಫೋಟೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು,  ಸಿಎಂ ಭಗವಂತ್ ಮಾನ್ ಸೇರಿದಂತೆ ಅರವಿಂದ್ ಕೇಜ್ರಿವಾಲ್ ಸುತ್ತಮುತ್ತಲಿನ ಎಲ್ಲರೂ ಬರಿಗಾಲಿನಲ್ಲಿ ನಡೆಯುತ್ತಿದ್ದರೆ  ಕೇಜ್ರಿವಾಲ್ ಒಬ್ಬರು ಮಾತ್ರ  ಶೂ ಧರಿಸಿದ್ದಾರೆ ಎಂದು ತೋರಿಸಲಾಗಿದೆ..

ಶಹೀದ್ ಭಗತ್ ಸಿಂಗ್ ಅವರ ಸ್ಮಾರಕದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಶೂ ಧರಿಸಿದ್ದರು ಎಂದು ಹೇಳುವ ಹಿಂದಿ ಶೀರ್ಷಿಕೆಯೊಂದಿಗೆ ಫೋಟೋ ಇದೆ.

ಈ ಫೊಟೋವನ್ನ ಬಿಜೆಪಿ ಬೆಂಬಲಿಗರು ಮತ್ತು ಅದರ ಹಿತೈಷಿಗಳು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಅದೇ ಹಿಂದಿ ಶೀರ್ಷಿಕೆಯೊಂದಿಗೆ ಫೇಸ್‌ಬುಕ್‌ನಲ್ಲಿ ಫೊಟೊ  ವೈರಲ್ ಆಗಿದೆ.

ಫ್ಯಾಕ್ಟ್‌ಚೆಕ್:

ವೈರಲ್ ಫೊಟೋ ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಲಾಗಿದೆ. ಅದರಲ್ಲಿ ಮಾರ್ಚ್ 14 ರಿಂದ ದೈನಿಕ್ ಜಾಗರಣ್ ಅವರ ಸುದ್ದಿ ವರದಿ ಲಭ್ಯವಾಗಿದೆ. ಅದು ವೈರಲ್ ಆಗಿರುವ ಫೋಟೋವನ್ನು ಹೋಲುತ್ತಿದ್ದು, ವರದಿಯ ಪ್ರಕಾರ, ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಇಬ್ಬರೂ ಚುನಾವಣೆಯಲ್ಲಿ ಎಎಪಿ ಪಕ್ಷವು ಭರ್ಜರಿ ಗೆಲುವುನ್ನು ದಾಖಲಿಸಿದ ಹಿನ್ನಲೆಯಲ್ಲಿ ದರ್ಬಾರ್ ಸಾಹಿಬ್‌ಗೆ ಭೇಟಿ ನೀಡಿದ್ದರು.

ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ಫೇಸ್‌ಬುಕ್ ಪೇಜ್‌ಅನ್ನು ಪರಿಶೀಲಿಸಲಾಗಿದ್ದು, ಮಾರ್ಚ್ 13 ರಿಂದ ಮಾಡಲಾಗಿರುವ  ಪೋಸ್ಟ್ ಅನ್ನು ಗಮನಿಸಿದಾಗ, ಅದರಲ್ಲಿ ಕೇಜ್ರಿವಾಲ್‌ ಮತ್ತು ಮಾನ್  ಅವರು “ಶ್ರೀ ದರ್ಬಾರ್ ಸಾಹಿಬ್, ಶ್ರೀ ರಾಮ್ ತೀರ್ಥ ದೇವಸ್ಥಾನ ಮತ್ತು ದುರ್ಗಿಯಾನ ದೇವಸ್ಥಾನದಲ್ಲಿ ಗೌರವ ಸಲ್ಲಿಸಿದ್ದಾರೆ ಮತ್ತು ಜಲಿಯನ್ ವಾಲಾ ಬಾಗ್ ಶಹೀದ್ ಸ್ಮಾರಕದಲ್ಲಿ ಪುಷ್ಪಗಳನ್ನು ಅರ್ಪಿಸಿದ್ದಾರೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ ”.

ಗೂಗಲ್ ಲೆನ್ಸ್ ಅನ್ನು ಬಳಸಿಕೊಂಡು, ಕೇಜ್ರಿವಾಲ್ ಅವರು ಪೋಸ್ಟ್ ಮಾಡಿದ ಫೋಟೋಗಳಲ್ಲಿ ಒಂದನ್ನು  ರಿವರ್ಸ್ ಇಮೇಜ್ ಸರ್ಚ್ ಮಾಡಲಾಗಿದ್ದು, ದಿ ಟ್ರಿಬ್ಯೂನ್‌ನಲ್ಲಿ ಪ್ರಕಟವಾಗಿರುವ ಲೇಖನದ ಆಧಾರದಲ್ಲಿ ಕೇಜ್ರೀವಾಲ್ ಮತ್ತು ಭಗವಂತ್ ಮಾನ್ ಇರುವ ಸ್ಥಳವನ್ನು ಜಲಿಯನ್‌ವಾಲಾ ಬಾಗ್ ಸ್ಮಾರಕ ಎಂದು ಗುರುತಿಸಲು ಸಾಧ್ಯವಾಯಿತು.

ದಿ ಟ್ರಿಬ್ಯೂನ್ ಸುದ್ದಿಯ ಸಹಾಯದಿಂದ ಅದನ್ನು ಕ್ಲೂ ಆಗಿ ಬಳಸಿಕೊಂಡು  YouTube ನಲ್ಲಿ ಕೀವರ್ಡ್ ಸರ್ಚ್ ಮಾಡಿದಾಗ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಅವರು  ಸ್ಮಾರಕಕ್ಕೆ  ಭೇಟಿ ನೀಡಿರುವ ವಿವಿಧ ವೀಡಿಯೊ ವರದಿಗಳನ್ನು ಲಭ್ಯವಾದವು.

ನ್ಯೂಸ್ 18 ಪಂಜಾಬ್/ಹರಿಯಾಣ/ಹಿಮಾಚಲ ವರದಿಯಲ್ಲಿ ವೈರಲ್ ಚಿತ್ರದಲ್ಲಿ ಕಂಡುಬರುವ ಅದೇ ದೃಶ್ಯಗಳನ್ನು ಯೂಟ್ಯೂಬ್ ವಿಡಿಯೋದಲ್ಲಿ ಗುರುತಿಸಲಾಗಿದ್ದು ವೈರಲ್ ಫೋಟೋಗಳಲ್ಲಿ ಕಂಡುಬರುವ ದೃಶ್ಯಗಳು ವಿಡಿಯೊದ 2:10 ನಿಮಿಷಗಳ ಅವಧಿಯಲ್ಲಿ ಕಾಣಿಸಿಕೊಳ್ಳುತ್ತದೆ. ಜಲಿಯನ್ ವಾಲಾ ಬಾಗ್ ಸ್ಮಾರಕದಲ್ಲಿ ವೈರಲ್ ಆಗಿರುವ ಫೋಟೊಗಳನ್ನು ಸೆರೆಹಿಡಿಯಲಾಗಿದೆ ಎಂದು ಖಚಿತವಾಗಿದೆ.

ANI ಯ ವೀಡಿಯೊ ವರದಿಯನ್ನು ಸಹ ಪರಿಶೀಲಿಸಿದ್ದೇವೆ, ಅಲ್ಲಿ ಕೇಜ್ರಿವಾಲ್ ಅವರು ಸ್ಮಾರಕದ ವೇದಿಕೆಯಲ್ಲಿ ಹೂಗುಚ್ಚವನ್ನು ಇಡುವಾಗ ಶೂಗಳನ್ನು ಧರಿಸಿಲ್ಲ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ. ಇದಲ್ಲದೆ, ನ್ಯೂಸ್ 18 ಪಂಜಾಬ್/ಹರಿಯಾಣ/ಹಿಮಾಚಲದ ವೀಡಿಯೊ ವರದಿಯಲ್ಲಿ, ಕೇಜ್ರಿವಾಲ್ ಅವರು 0:10 ಸೆಕೆಂಡುಗಳಲ್ಲಿ ಒಂದು ಸೆಕೆಂಡ್ ನಿಲ್ಲುವುದನ್ನು  ಕಾಣಬಹದಾಗಿದೆ.

ಸ್ಮಾರಕದ ಮುಖ್ಯ ವೇದಿಕೆನ್ನೇರುವ ಮೊದಲು ಸ್ವಲ್ಪ ದೂರ ನಡೆದುಕೊಂಡು ಬರುವಾಗ ಸೆರೆಹಿಡಿದಿರುವ ಫೋಟೋವನ್ನು ಕೇಜ್ರೀವಾಲ್ ಅವರು ಶೂ ತೆಗೆಯದೆ ಭಗತ್‌ಸಿಂಗ್ ಅವರ ಸ್ಮಾರಕ್ಕೆ ತೆರಳಿ ನಮನ ಸಲ್ಲಿಸಿದ್ದಾರೆ ಎಂದು ಸುಳ್ಳು ಪೋಸ್ಟ್‌ ಹಂಚಿಕೊಂಡಿದ್ದಾರೆ.

ANI ವೀಡಿಯೊ ವರದಿಯಲ್ಲಿ, ಮುಖ್ಯ ವೇದಿಗೆ ಬರುವ ಮೊದಲು  ಭದ್ರತಾ ಸಿಬಂಧ್ದಿಗಳು ಕೂಡ ತಮ್ಮ ಬೂಟುಗಳನ್ನು ತೆಗೆದಿಲ್ಲ  ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ ಅವರು ಸ್ಮಾರಕದ ಮುಖ್ಯ ವೇದಿಕೆಗೆ ಪ್ರವೇಶಿಸಿದಾಗ ಸರೆ ಹಿಡಿದಿರುವ ಫೋಟೋಗಳಲ್ಲಿ, ಭದ್ರತಾ ಸಿಬ್ಬಂದಿ ಬರಿಗಾಲಿನಲ್ಲಿ ಇರುವುದನ್ನು ಫೋಟೋದಲ್ಲಿ ನೋಡಬಹುದು.

ಭಗತ್ ಸಿಂಗ್ ಸ್ಮಾರಕದಲ್ಲಿ ಕೇಜ್ರಿವಾಲ್ ಇದ್ದರೇ?

ಮಾರ್ಚ್ 16 ರಂದು ಆಮ್ ಆದ್ಮಿ ಪಕ್ಷದ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಶಹೀದ್ ಭಗತ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿರುವ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ.

ಫೋಟೋಗಳಲ್ಲಿ ಕಾಣುತ್ತಿರುವಂತೆ ಅರವಿಂದ್ ಕೇಜ್ರಿವಾಲ್ ಧರಿಸಿರುವ ಭಟ್ಟೆಗಳನ್ನು ಗಮನಿಸಿದಾಗ ಕಂಡುಬರುವ ಬಟ್ಟೆಗಳು ವೈರಲ್ ಫೋಟೋದಲ್ಲಿ ಕಂಡುಬರುವ ಬಟ್ಟೆಗಳಿಗೂ ಹೋಲಿಕೆ ಇಲ್ಲ. ಅದಕ್ಕಿಂತ ಮುಖ್ಯವಾಗಿ, ಭಗತ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವಾಗ ಕೇಜ್ರಿವಾಲ್ ಅವರು ಶೂ ಧರಿಸಿರಲಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ ಕೇಜ್ರಿವಾಲ್ ಅವರು ಜಲಿಯನ್ ವಾಲಾಬಾಗ್ ಸ್ಮಾರಕಕ್ಕೆ ಭೇಟಿ ನೀಡಿದಾಗ ಕ್ಲಿಕ್ ಮಾಡಿದ ಫೋಟೋವನ್ನು ಅವರು ಶಹೀದ್ ಭಗತ್ ಸಿಂಗ್ ಸ್ಮಾರಕಕ್ಕೆ ಭೇಟಿ ನೀಡಿದ ಫೋಟೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಈ ಎರಡೂ ಸ್ಥಳಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಕೇಜ್ರಿವಾಲ್ ರವರು ತಮ್ಮ ಶೂಗಳನ್ನು ತೆಗೆದಿದ್ದರು. ಆದರೆ BJP ಯ ಬೆಂಬಲಿತ ಫೇಜ್‌ಗಳು ಈ ರೀತಿಸುಳ್ಳು ಸುದ್ದಿ ಹರಡುವ ಮೂಲಕ AAP ಪಕ್ಷದ ಮೇಲೆ ಜನರಿಗೆ ಅಸಹನೆ ಮೂಡುವಂತೆ ಮಾಡುವ ದುರುದ್ದೇಶದಿಂದ ಹೀಗೆ ಮಾಡಿದ್ದಾರೆ. ಈ ರೀತಿಯ ಸುದ್ದಿಗಳನ್ನು ನಂಬುವ ಮುನ್ನ ಎಚ್ಚರಿಕೆ ಇರಲಿ.


ಗಮನಿಸಿ: ನಿಮ್ಮ ಸುತ್ತಮುತ್ತ ಮತ್ತು ನಿಮ್ಮ ವಾಟ್ಸಪ್ ಗುಂಪುಗಳಲ್ಲಿ ಸುಳ್ಳು ಸುದ್ದಿಗಳು ಕಂಡು ಬಂದಲ್ಲಿ ensuddi.com  ವೆಬ್‌ಸೈಟ್‌ ಅನ್ನು ಸಂಪರ್ಕಿಸಿ [email protected]


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights