ಫ್ಯಾಕ್ಟ್‌ಚೆಕ್: ರಸ್ತೆ ಅಗಲೀಕರಣಕ್ಕಾಗಿ ಮಸೀದಿ ಉಳಿಸಿ, ದೇವಸ್ಥಾನ ಕೆಡವಿದರೆ ಆಂಧ್ರ ಸಿಎಂ! ವಾಸ್ತವವೇನು?

ಆಂಧ್ರ ಪ್ರದೇಶದ ವಿಜಯವಾಡದಲ್ಲಿ ರಸ್ತೆ ಅಗಲೀಕರಣ ಮಾಡುವ ಉದ್ದೇಶದಿಂದ ರಸ್ತೆಯ ಆಸು ಪಾಸಿನಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸುತ್ತಿರುವ ಸಂದರ್ಭದಲ್ಲಿ ಮಸೀದಿಯನ್ನು ಕೆಡವದೆ ಕೇವಲ ದೇವಸ್ಥಾನದ ಕಟ್ಟಡವನ್ನು ಕೆಡುವುತ್ತಿರುವ ದೃಶ್ಯಗಳು ಎಂದು ಪ್ರತಿಪಾದಿಸಿ ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

https://twitter.com/RUDRA_VSR/status/1504007174787256320?ref_src=twsrc%5Etfw%7Ctwcamp%5Etweetembed%7Ctwterm%5E1504007174787256320%7Ctwgr%5E%7Ctwcon%5Es1_&ref_url=https%3A%2F%2Fwww.altnews.in%2Fold-video-clip-of-temple-renovation-from-vijaywada-shared-with-a-false-communal-claim%2F

ಟ್ವಿಟರ್ @RUDRA_VSR, ಬಿಜೆಪಿ ಮತ್ತು ಆರೆಸ್ಸೆಸ್ ಬೆಂಬಲಿಗರು, ಅದೇ ಹೇಳಿಕೆಯೊಂದಿಗೆ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಆಂಧ್ರಪ್ರದೇಶ ಸರ್ಕಾರವು ಮಸೀದಿಯ ತಂಟೆಗೆ ಹೋಗದೆ , ರಸ್ತೆಯನ್ನು ಅಗಲಗೊಳಿಸುವ ಸಲುವಾಗಿ ದೇವಾಲಯವನ್ನು ಕೆಡವುತ್ತಿದೆ ಇದು ಯಾವ ನ್ಯಾಯ? ಎಂದು ಪ್ರಶ್ನಿಸಲಾಗಿದೆ. “ವಿಜಯವಾಡದಲ್ಲಿ ರಸ್ತೆ ಅಗಲೀಕರಣಕ್ಕೆಂದು ಶಿವನ ಮಂದಿರ ಕೆಡವಲಾಗುತ್ತಿದೆ, ಅದರ ಮುಂದಿರುವ ಮಸೀದಿಯನ್ನು ಮುಟ್ಟುವ ಧೈರ್ಯ ಇಲ್ಲ. ಇದೆಲ್ಲಾ ಕ್ರೈಸ್ತ ಮುಖ್ಯಮಂತ್ರಿ ಜಗಮೋಹನ್ ರೆಡ್ಡಿಯ ತಪ್ಪಿನ ಫಲ” ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೊ ಕ್ಲಿಪ್‌ಅನ್ನು ಅತೀ ಪ್ರಭಾವಿ ಅಕೌಂಟ್‌ಗಳಿಂದ ಕನಿಷ್ಠ 70 ಫೇಸ್‌ಬುಕ್ ಪೇಜ್‌ಗಳ ಮೂಲಕ ಬಿಜೆಪಿ ಅಥವಾ ಹಿಂದುತ್ವ ಗುಂಪುಗಳು ಅಥವಾ ಬಲಪಂಥೀಯ ಅಕೌಂಟ್ಗಳಿಂದ ಹಂಚಿಕೊಳ್ಳಲಾಗಿದೆ — भाजपा लक्ष्य 2024 ( समर्थन के लिए जुड़े ) [10 lakh members], भाजपा का परिवार मेरा परिवार(यूपी मिशन 2022- भाजपा समर्थको का स्वागत है) [over 4 lakh members] Kangna Ranaut Group [over 2 lakh members] राजपुताना इतिहास और विरासत [over 2 lakh members], Sudarshan News [70K members], and Namo [50K followers]. You can view the full list here. ವೀಕ್ಷಿಸಬಹುದು.

ಬಿಜೆಪಿ ಮತ್ತು ಆರೆಸ್ಸೆಸ್ ಬೆಂಬಲಿಗರು, ಅದೇ ಹೇಳಿಕೆಯೊಂದಿಗೆ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ಪೊಸ್ಟ್‌ಗಳಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಸೋಣ.

ಫ್ಯಾಕ್ಟ್‌ಚೆಕ್:

ಗೂಗಲ್ ಕೀವರ್ಡ್ ಸರ್ಚ್ ಮೂಲಕ ವೈರಲ್ ವಿಡಿಯೋದ ಅಸಲೀಯತ್ತನ್ನು ಕಂಡುಹಿಡಿಯಲಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವು  ಹಳೆಯ ವೀಡಿಯೊ  ಅಂದರೆ 2020ರಲ್ಲಿ ನಡೆದಿದ್ದು ಎಂಬ ಮಾಹಿತಿ ಲಭ್ಯವಾಗಿದೆ.

ಆಲ್ಟ್ ನ್ಯೂಸ್ ಈ ವಿಡಿಯೋದ ಫ್ಯಾಕ್ಟ್‌ಚೆಕ್ ಮಾಡುವ ಸಲುವಾಗಿ ವಿಜಯವಾಡ ಮೂಲದ ಪತ್ರಕರ್ತರು ಮತ್ತು ದೇವಸ್ಥಾನದ ಅರ್ಚಕರೊಂದಿಗೆ ಮಾತನಾಡಿ ಮಾಹಿತಿ ಪಡೆದುಕೊಂಡಿದೆ. ಆಲ್ಟ್‌ನ್ಯೂಸ್‌ಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ವಿಡಿಯೊದ ಪ್ರತಿಪಾದನೆ ತಪ್ಪಾಗಿದ್ದು ವೀಡಿಯೊ ಹಳೆಯದು ಎಂದು ಅವರು ಹೇಳಿದ್ದಾರೆ. ಅವರ ಪ್ರಕಾರ, ವಿಡಿಯೊದಲ್ಲಿರುವುದು ದೇವಸ್ಥಾನದ ತೆರವು ಕಾರ್ಯಾಚರಣೆ ಅಲ್ಲ ಬದಲಿಗೆ ದೇವಸ್ಥಾನದ ನವೀಕರಣವನ್ನು ಮಾಡಲಾಗುತ್ತಿದೆ. ಶ್ರೀ ವಿಜಯೇಶ್ವರ ಸ್ವಾಮಿ ವಾರಿ ದೇವಸ್ಥಾನದ ನವೀಕರಣವನ್ನು ಮಾಡುತ್ತಿರುವ ಸಂದರ್ಭದಲ್ಲಿ ವಿಡಿಯೊ ಮಾಡಿದ್ದು, ಅದನ್ನು ಕೆಡವ ಉದ್ದೇಶ ಯಾರಿಗೂ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಫೇಸ್‌ಬುಕ್ ಬಳಕೆದಾರ ಶ್ರೀ ರಾಕೇಶ್ ಕುರಪಾಟಿ ಅವರು ಕಟ್ಟಡವನ್ನು ನವೀಕರಿಸುತ್ತಿರುವ ಪೇಪರ್ ಕಟ್ಟಿಂಗ್‌ಅನ್ನು ತಮ್ಮ ಫೇಸ್‌ಬುಕ್ ನಲ್ಲಿ ಶೇರ್ ಮಾಡಿದ್ದಾರೆ. ಈ ಹಿಂದೆ, ನ್ಯೂಸ್‌ಮೀಟರ್ ಈ ಕ್ಲಿಪ್ಪಿಂಗ್ ಅನ್ನು ಆಧರಿಸಿ ವೀಡಿಯೊವನ್ನು ಫ್ಯಾಕ್ಟ್-ಚೆಕ್ ಮಾಡಿದೆ.

ಈ ಪತ್ರಿಕೆಯಲ್ಲಿ ಪ್ರಸಾರವಾಗಿರುವ ಸುದ್ದಿಯ ಪ್ರಕಾರ ವಿಜಯೇಶ್ವರ ದೇವಸ್ಥಾನದಲ್ಲಿ ಅಭಿವೃದ್ಧಿ ಕ್ರಮಗಳನ್ನು ವೀಡಿಯೊ ತೋರಿಸುತ್ತದೆ. ದೇವಾಲಯವನ್ನು ನವೀಕರಣ ಮಾಡುವ ಉದ್ದೇಶದಿಂದ ಕಟ್ಟಡದ ಒಂದು ಭಾಗವನ್ನು ಕೆಡವಲಾಯಿತು. ಈ ನವೀಕರಣದ  ಕಾಮಗಾರಿಯ ವಿಡಿಯೊವನ್ನು ತಿರುಚಿ ಮಸೀದಿಯನ್ನು ಹಾಗೆಯೇ ಬಿಟ್ಟು ದೇವಸ್ಥಾನ ಕೆಡುವಿ ರಸ್ತೆ ಅಗಲೀಕರಣ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ತಪ್ಪಾಗಿ ಹಂಚಿಕೊಂಡಿದ್ದಾರೆ.


ಮತ್ತಷ್ಟು ಮಾಹಿತಿಯನ್ನು ಪಡೆಯುವ ಉದ್ದೇಶದಿಂದ ವಿಜಯೇಶ್ವರ ದೇವಸ್ಥಾನದ ವೀಡಿಯೊವನ್ನು ಪ್ರಸ್ತುತದಲ್ಲಿ ಹೇಗಿದೆ ಎಂದು ವಾಸ್ತವವನ್ನು ತಿಳಿಯುವ ಉದ್ದೇಶದಿಂದ ದೇವಸ್ಥಾನದ ಪಕ್ಕದಲ್ಲಿ ವಾಸಿಸುವ ವಿಜಯವಾಡದ ನಿವಾಸಿಗೆ ವಿನಂತಿ ಮಾಡಲಾಗಿತ್ತು.  ಈ ವಿಡಿಯೋದಲ್ಲಿ ತೋರಿಸಿರುವಂತೆ ದೇವಸ್ಥಾನ ನವೀಕರಣಗೊಂಡು ಮತ್ತಷ್ಟು ಸುಂದರವಾಗಿ ಕಂಗೊಳಿಸುತ್ತಿರುವುದನ್ನು ಈ ವಿಡಿಯೊದಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, 2020 ರಿಂದ ವಿಜಯವಾಡದಲ್ಲಿ ದೇವಾಲಯದ ನವೀಕರಣದ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಆಂಧ್ರಪ್ರದೇಶ ಸರ್ಕಾರವು ರಸ್ತೆಯನ್ನು ಅಗಲೀಕರಣ ಮಾಡುವ ಉದ್ದೇಶದಿಂದ ಮಸೀದಿಯನ್ನು ಉಳಿಸಿಕೊಂಡು ದೇವಸ್ಥಾನವನ್ನು ನೆಲಸಮ ಮಾಡಿದೆ ಎಂದು ಸುಳ್ಳು ಸುದ್ದಿ ಹರಡಿ ಸಾಮಾಜಿಕ ಅಶಾಂತಿಯನ್ನು ಉಂಟುಮಾಡಲು ವಿಡಿಯೊ ಕ್ಲಿಪ್‌ ಅನ್ನು ಬಳಸಿಕೊಂಡಿತ್ತು. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಪಾದಿಸಿರುವ ಪೋಸ್ಟ್‌ ಸುಳ್ಳು ಎಂದು ಸ್ಪಷ್ಟವಾಗಿದೆ.

ಕೃಪೆ: ಆಲ್ಟ್‌ನ್ಯೂಸ್


ಇದನ್ನುಓದಿರಿ: ಫ್ಯಾಕ್ಟ್‌ಚೆಕ್: ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದಕ್ಕೆ ಪೊಲೀಸರಿಂದ ಥಳಿತ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights