ಫ್ಯಾಕ್ಟ್‌ಚೆಕ್: ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದಕ್ಕೆ ಪೊಲೀಸರಿಂದ ಥಳಿತ ಎಂಬುದು ಸುಳ್ಳು

‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ ವ್ಯಕ್ತಿಯನ್ನು ಉತ್ತರ ಪ್ರದೇಶ ಪೊಲೀಸರು ಥಳಿಸುತ್ತಿದ್ದಾರೆ ಎಂದು ಪ್ರತಿಪಾದಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

“ನಿನ್ನೇ ಹೋಳಿ ಹುಣ್ಣಿಮೆಯ ಪ್ರಯುಕ್ತ ಮೆರವಣಿಗೆ ಹೊರಟಾಗ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಮುಸ್ಲಿಂ ಯುವಕನಿಗೆ ಉತ್ತರಪ್ರದೇಶ ಪೋಲಿಸರಿಂದ ಉಡುಗೊರೆ“. ಎಂಬಂತಹ ಹೇಳಿಕೆಗಳನ್ನು ಒಳಗೊಂಡ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.

ಹಾಗಿದ್ದರೆ ಪೊಲೀಸರು ಥಳಿಸುತ್ತಿರುವ ವ್ಯಕ್ತಿಯು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದನೆ ಎಂದು ಪರಿಶೀಲಿಸೋಣ.

 

 

ಫ್ಯಾಕ್ಟ್‌ಚೆಕ್:

ವೀಡಿಯೊದ ಸ್ಕ್ರೀನ್‌ಶಾಟ್‌ ಸಹಾಯದಿಂದ ಗೂಗಲ್  ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಕಳ್ಳತನದ ಆರೋಪದ ಕಾರಣ ಪೊಲೀಸರು ಜನರನ್ನು ಥಳಿಸುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಕನಿಷ್ಠ ಮೇ 2021 ರಿಂದ ಸಾಮಾಜಿಕ ಮಾಧ್ಯಮದಲ್ಲಿ ಒಂದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊಗಳು (ಇಲ್ಲಿ ಮತ್ತು ಇಲ್ಲಿ) ಹರಿದಾಡುತ್ತಿದೆ. ಉತ್ತರಪ್ರದೇಶದ ಚಂದೌಲಿ ಜಿಲ್ಲೆಯ ಮಥೇಲಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಳ್ಳತನದ ಆರೋಪದ ಮೇಲೆ ಪೊಲೀಸರು ಹುಡುಗನನ್ನು ಅಮಾನುಷವಾಗಿ ಥಳಿಸಿದ್ದಾರೆ ಎಂದು ಪೋಸ್ಟ್‌ಗಳು ಹೇಳುತ್ತವೆ. ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಹೇಳಿದ ಕಾರಣಕ್ಕೆ ಪೊಲೀಸರು ಆತನನ್ನು ಥಳಿಸಿದ್ದಾರೆ ಎಂದು ಈ  ಪೋಸ್ಟ್‌ಗಳಲ್ಲಿ ಎಲ್ಲಿಯೂ ಹೇಳಿಲ್ಲ.

ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದು ಸುಳ್ಳು

ಘಟನೆಗೆ ಸಂಬಂಧಿಸಿದ ಕೀವರ್ಡ್‌ಗಳೊಂದಿಗೆ ಗೂಗಲ್‌ನಲ್ಲಿ  ಸರ್ಚ್ ಮಾಡಿದಾಗ, ಘಟನೆಯ ಕುರಿತು ವರದಿ ಮಾಡಿದ ಸುದ್ದಿ ವರದಿಗಳು ಕಂಡುಬಂದವು. ಟೈಮ್ಸ್ ಆಫ್ ಇಂಡಿಯಾ ಪೋಸ್ಟ್ ಮಾಡಿದ ಇದೇ ರೀತಿಯ ವೀಡಿಯೊದಲ್ಲಿ ಮೊಬೈಲ್ ಕಳ್ಳತನದ ಆರೋಪದ ಮೇಲೆ ಪೊಲೀಸರು ಕೆಲವರನ್ನು ಥಳಿಸುತ್ತಿರುವುದನ್ನು ತೋರಿಸುತ್ತದೆ. ಮೊಬೈಲ್ ಅಂಗಡಿಯೊಂದರಲ್ಲಿ ಕಳ್ಳತನದ ಆರೋಪದಲ್ಲಿ ಸಿಕ್ಕಿಬಿದ್ದ ಆರೋಪಿತರಿಗೆ ಪೊಲೀಸ್ ಸಿಬ್ಬಂದಿ  ಥಳಿಸಿದ್ದಾರೆ ಎಂದು ವರದಿಯಾಗಿದೆ. ಘಟನೆಯ ವೀಡಿಯೊ ವೈರಲ್ ಆದ ನಂತರ, ಎಸ್ಪಿ ಅಮಿತ್ ಕುಮಾರ್ ಅವರು ಕೈಲಾವರ್ ಹೊರಠಾಣೆ ಪ್ರಭಾರಿ ಶಿವಾನಂದ್ ವರ್ಮಾ ಮತ್ತು ಬಲುವಾ ಪೊಲೀಸ್ ಠಾಣೆಯ (ಯುಪಿಯ ಚಂದೌಲಿ ಜಿಲ್ಲೆಯಲ್ಲಿ) ಹೆಡ್ ಕಾನ್‌ಸ್ಟೆಬಲ್ ದಿಲೀಪ್ ಕುಮಾರ್ ಅವರನ್ನು ಅಮಾನತುಗೊಳಿಸಿದ್ದಾರೆ.

ಚಂದೌಲಿ ಪೊಲೀಸರ ಅಧಿಕೃತ ಟ್ವಿಟರ್ ಅಕೌಂಟ್‌ನಿಂದ 20 ಮಾರ್ಚ್ 2022 ರಂದು ಟ್ವೀಟ್ ಮಾಡಿದ್ದು, ವೈರಲ್ ವೀಡಿಯೊ ಒಂದು ವರ್ಷಕ್ಕಿಂತ ಹಳೆಯದು ಮತ್ತು ಘಟನೆಗೆ ಸಂಬಂಧಿಸಿದಂತೆ ಮಕ್ಕಳಿಗೆ ಅಮಾನವೀವಾಗಿ  ಥಳಿಸಿದ ಇಬ್ಬರೂ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದೆ. ಅದೇ ಟ್ವೀಟ್‌ನಲ್ಲಿ, ಪೂರ್ಣ ಸತ್ಯ ಮತ್ತು ಸ್ಪಷ್ಟ ಮಾಹಿತಿಯಿಲ್ಲದೆ ಅಂತಹ ಮಾಹಿತಿಯನ್ನು ಪ್ರಸಾರ ಮಾಡದಂತೆ ಚಂದೌಲಿ ಪೊಲೀಸರು ಜನರಿಗೆ ಮನವಿ ಮಾಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಕಳ್ಳತನದ ಆರೋಪದ ಮೇಲೆ ಉತ್ತರಪ್ರದೇಶದ ಪೊಲೀಸರು ಹುಡುಗರನ್ನು ಥಳಿಸುವ ಹಳೆಯ ವೀಡಿಯೊವನ್ನು ತಿರುಚಿ ಸುಳ್ಳು ಪೋಸ್ಟ್‌ ಹಾಕುವ ಮೂಲಕ ಹೋಳಿ ಹಬ್ಬದ ಮೆರವಣಿಗೆ ಸಂದರ್ಭದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಹೇಳಿದ್ದಕ್ಕಾಗಿ ವ್ಯಕ್ತಿಯನ್ನು ಉತ್ತರ ಪ್ರದೇಶದ ಪೊಲೀಸರು ಥಳಿಸುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಮತ್ತು ಅಮಾನುಷವಾಗಿ ಥಳಿಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ರೀತಿ ಪೋಸ್ಟ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿದಾಗ ಅವುಗಳನ್ನು ನಂಬಿ ಶೇರ್ ಮಾಡುವ ಮುನ್ನ ಪರಿಶೀಲಿಸಿ ಎಂಬುದು Ensuddi.com ನ ಮನವಿ.

ಕೃಪೆ:ಫ್ಯಾಕ್ಟ್‌ಲಿ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ನೆದರ್‌ಲ್ಯಾಂಡ್ ತನ್ನ ವಿದ್ಯಾರ್ಥಿಗಳಿಗೆ ಭಗವದ್ಗೀತೆಯನ್ನು ಪಠ್ಯದಲ್ಲಿ ಕಡ್ಡಾಯಗೊಳಿಸಿದೆ ಎಂಬುದು ಸುಳ್ಳು!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights