FACT CHECK | ಬನಾರಸ್ ಹಿಂದೂ ವಿಶ್ವವಿದ್ಯಾಲಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಜಾಮೀನಿನ ಮೇಲೆ ಹೊರಬಂದ ಆರೋಪಿಯನ್ನು ಕೇಕ್ ಕತ್ತರಿಸಿ ಸ್ವಾಗತಿಸಿದೆಯೇ BJP?
ವಾರಣಾಸಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಬನಾರಸ್ ಹಿಂದೂ ವಿಶ್ವವಿದ್ಯಾಲಯ) ಬಿಟೆಕ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳಾದ ಕುನಾಲ್ ಪಾಂಡೆ ಮತ್ತು ಆನಂದ್ ಚೌಹಾಣ್‌ಗೆ ಅಲಹಾಬಾದ್ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಜನವರಿ 2024 ರಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು. ಏಳು ತಿಂಗಳ ನಂತರ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ಮೂರನೇ ಆರೋಪಿ ಸಾಕ್ಷಾ ಪಟೇಲ್ ನ ಜಾಮೀನು ಅರ್ಜಿಯನ್ನು ಸೆಪ್ಟೆಂಬರ್ 14, 2024 ರಂದು ಪರಿಶೀಲಿಸಲಿದೆ ಎಂದು ವರದಿಯಾಗಿದೆ.
How can a country be safe for women where rapists are welcomed by cutting cakes?? This is how BJP members celebrated the arrival of the rapist of a BHU student at his home. Will women be safe under the BJP government? @ChaudharyUncle @INCIndia @SupriyaShrinate @priyankac19 pic.twitter.com/E1LBFlRWR5
— amrish morajkar (@mogambokhushua) September 1, 2024
ಇದರ ಮಧ್ಯದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿಗಳನ್ನು BJP ಕೇಕ್ ಕತ್ತರಿಸುವ ಮೂಲಕ ಸ್ವಾಗತಿಸಿದೆ ಎಂದು ಆರೋಪಿಸಿ ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ.
ವೈರಲ್ ಚಿತ್ರದಲ್ಲಿ ಆರೋಪಿಯ ಮುಖವನ್ನು ಕೇಕ್‌ನಿಂದ ಮುಚ್ಚಿರುವುದನ್ನು ಕಾಣಬಹುದು. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಈ ಸಂಭ್ರಮಾಚರಣೆಯನ್ನು ಮಾಡಲಾಗಿದೆ ಎಂದು ಹೇಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
IIT-BHU ಬಿಟೆಕ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳಾದ ಕುನಾಲ್ ಪಾಂಡೆ ಮತ್ತು ಆನಂದ್ ಚೌಹಾಣ್‌ಗೆ ಷರತ್ತು ಬದ್ದ ಜಾಮೀನಿ ನೀಡಿದೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮುಖಕ್ಕೆ ಕೇಕ್ ಮೆತ್ತಿಕೊಂಡಿರುವ ವ್ಯಕ್ತಿ ಜಾಮೀನಿನ ಮೇಲೆ ಜೈಲಿನಿಂದ ಬಂದಿರುವ ಈ ಇಬ್ಬರು ಆರೋಪಿಗಳದ್ದಲ್ಲ ಎಂಬುದು ವಾಸ್ತವ.
Claim About BJP leader Welcoming IIT-BHU Gangrape Accused is False pic.twitter.com/CdT84Vrl0E
— Only Fact (@OnlyFactIndia) September 1, 2024
ವಾಸ್ತವದಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಚಿತ್ರ ಇತ್ತೀಚಿನದಲ್ಲ ಎಂದು ಡಿ-ಇಂಟೆಂಟ್ ಡೇಟಾ ಮತ್ತು Only Fact ತನ್ನ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಆರೋಪಿ ಸಕ್ಷಮ್ ಸಿಂಗ್ ಪಟೇಲ್ ಅವರ ಜನ್ಮದಿನದಂದು ಜುಲೈ 12, 2021 ರಂದು ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇದಕ್ಕೆ ಪೂರಕವಾಗಿ ಅಲಹಾಬಾದ್ ಹೈಕೋರ್ಟ್ ಸಕ್ಷಮ್ ಸಿಂಗ್ ಅವರಿಗೆ ಜಾಮೀನು ನೀಡಿಲ್ಲ.
ಐಐಟಿ-ಬಿಎಚ್‌ಯು ಅತ್ಯಾಚಾರ ಪ್ರಕರಣದ ಇಬ್ಬರು ಆರೋಪಿಗಳಾದ ಕುನಾಲ್ ಪಾಂಡೆ ಮತ್ತು ಆನಂದ್ ಚೌಹಾಣ್ ಅವರಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿರುವುದು ನಿಜಕ್ಕೂ ನಿಜ
ಕುನಾಲ್ ಆಗಸ್ಟ್ 24 ರಂದು ಬಿಡುಗಡೆಯಾಗಿದ್ದರೆ, ಆನಂದ್ ಕಳೆದ ತಿಂಗಳು 29 ರಂದು ಬಿಡುಗಡೆಯಾಗಿದ್ದರು. ಮೂರನೇ ಆರೋಪಿ ಸಕ್ಷಮ್ ಸಿಂಗ್ ಪಟೇಲ್ ಇನ್ನೂ ಜಾಮೀನು ಪಡೆದಿಲ್ಲ. ಆದರೂ ಈ ಆರೋಪಿಗಳ ಪೈಕಿ, ಕುನಾಲ್ ಆಗಸ್ಟ್ 24 ರಂದು ಬಿಡುಗಡೆಯಾಗಿದ್ದರೆ, ಆನಂದ್ ಆಗಸ್ಟ್ 29 ರಂದು ಬಿಡುಗಡೆಯಾಗಿದ್ದಾನೆ. ಆರೋಪಿ ಆನಂದ್ ನಾಗವಾ ಕಾಲೋನಿಯಲ್ಲಿರುವ ತನ್ನ ಮನೆಗೆ ಬಂದಾಗ ಹೂಹಾರ ಹಾಕಿ ಸ್ವಾಗತಿಸಲಾಯಿತು ಎಂದು ದೈನಿಕ್ ಜಾಗರಣ್ ವರದಿ ಮಾಡಿದೆ. ಕುನಾಲ್ ಮತ್ತು ಆನಂದ್ ಅವರ ಮನೆಗಳು ಅಕ್ಕಪಕ್ಕದಲ್ಲೇ ಇದೆ.
ಈ ಮೂವರು ಬಿಜೆಪಿ ಐಟಿ ಸೆಲ್‌ನ ಸದಸ್ಯರಾಗಿದ್ದರು ಆದರೆ ಕಳೆದ ವರ್ಷ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದ ನಂತರ ಅವರನ್ನು ಪಕ್ಷದಿಂದ ತೆಗೆದುಹಾಕಲಾಗಿದೆ. ಯೋಗಿ ಆದಿತ್ಯನಾಥ್ ಸರ್ಕಾರ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಂಡು ಅವರ ಬಂಧಸಿತ್ತು ಎಂದು BJP ಹೇಳಿಕೊಂಡಿದೆ.
ಆದರೆ 2021 ರ ಹಳೆಯ ಚಿತ್ರವನ್ನು ‘ಐಐಟಿ-ಬಿಎಚ್‌ಯು ಅತ್ಯಾಚಾರ ಆರೋಪಿಯ ಬಿಡುಗಡೆಯನ್ನು ಬಿಜೆಪಿ ಸಂಭ್ರಮಿಸುತ್ತಿದೆ’ ಎಂದು ಪರಿಶೀಲಿಸದೆ ತಪ್ಪಾಗಿ ಹಂಚಿಕೊಳ್ಳುವ ಮೂಲಕ ನಗೆಪಾಟಲಿಗೀಡಾಗಿದ್ದರೆ ಎಂದು ಹೇಳಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ದೇಶದಲ್ಲೆ ಹೆಚ್ಚು ಸದ್ದು ಮಾಡಿದ್ದ ಐಐಟಿ-ಬಿಎಚ್‌ಯು ಅತ್ಯಾಚಾರ ಪ್ರಕರಣದ ಭಾಗಿಯಾಗಿದ್ದ ಮೂವರಲ್ಲಿ ಇಬ್ಬರಿಗೆ ಜಾಮೀನು ಸಿಕ್ಕು ಹೊಬಂದಿದ್ದಾರೆ. ಆದರೆ ವೈರಲ್ ಫೋಟೊದಲ್ಲಿ ಕೇಕ್ ಕತ್ತರಿಸುತ್ತಿರುವ ಆರೋಪಿ ಸಕ್ಷಮ್ ಸಿಂಗ್ ಪಟೇಲ್ ಗೆ ಇನ್ನು ಜಾಮೀನು ಸಿಕ್ಕಿಲ್ಲ. ಹಾಗಾಗಿ ಕೇಕ್ ಕತ್ತರಿಸಿ ಅತ್ಯಾಚಾರಿ ಆರೋಪಿಯನ್ನು BJP ಸ್ವಾಗತಿಸಿದೆ ಎಂಬುದು ಸುಳ್ಳು. ಕತ್ತರಿಸುತ್ತಿರುವ ಚಿತ್ರ 2021ರ ಹಳೆಯ ಚಿತ್ರವಾಗಿದ್ದು, ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮುಸ್ಲಿಂ ವ್ಯಕ್ತಿಯನ್ನು ಜೈ ಶ್ರೀರಾಮ್ ಎಂದು ಕೂಗುವಂತೆ ಹಿಂದೂಗಳು ಹಲ್ಲೆ ಮಾಡಿದ್ದಾರೆ ಎಂಬುದು ನಿಜವೇ?