FACT CHECK | ಮುಸ್ಲಿಂ ವ್ಯಕ್ತಿಯನ್ನು ಜೈ ಶ್ರೀರಾಮ್ ಎಂದು ಕೂಗುವಂತೆ ಹಿಂದೂಗಳು ಹಲ್ಲೆ ಮಾಡಿದ್ದಾರೆ ಎಂಬುದು ನಿಜವೇ?
ನಡು ರಸ್ತೆಯಲ್ಲೇ ಮುಸ್ಲಿಂ ವ್ಯಕ್ತಿಯೊಬ್ಬನ ಮೇಲೆ ಗುಂಪೊಂದು ಹಲ್ಲೆ ನಡೆಸುತ್ತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಳ್ಳುತ್ತಿದ್ದು ಮುಸ್ಲಿಂ ವ್ಯಕ್ತಿಯನ್ನು “ಜೈ ಶ್ರೀ ರಾಮ್” ಎಂದು ಕೂಗುವಂತೆ ಒತ್ತಾಯಿಸುತ್ತಿರುವುದನ್ನು ವಿಡಿಯೋದಲ್ಲಿ ಕೇಳಬಹುದು.
Some hindutva terrorists are lynching muslim man In the middle of the street, thrashing him brutality, forcing him to chant Jai Shri Ram pic.twitter.com/nrnCgFNYCU
— Mr.Haque (@faizulhaque95) August 30, 2024
ಕ್ಲಿಪ್ ಅನ್ನು ಹಂಚಿಕೊಳ್ಳುವಾಗ, ಜನರು “ಕೆಲವು ಹಿಂದುತ್ವದ ಭಯೋತ್ಪಾದಕರು ಮುಸ್ಲಿಂ ವ್ಯಕ್ತಿಯನ್ನು ನಡುಬೀದಿಯಲ್ಲಿ ಹತ್ಯೆ ಮಾಡುತ್ತಿದ್ದಾರೆ, ಕ್ರೂರವಾಗಿ ಥಳಿಸುತ್ತಿದ್ದಾರೆ, ಜೈ ಶ್ರೀ ರಾಮ್ ಎಂದು ಜಪಿಸುವಂತೆ ಒತ್ತಾಯಿಸುತ್ತಿದ್ದಾರೆ” ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಈ ವೈರಲ್ ವಿಡಿಯೋದಲ್ಲಿ ಪ್ರತಿಪಾದಿಸಿದಂತೆ, ಮುಸ್ಲಿಂ ವ್ಯಕ್ತಿಯನ್ನು ‘ಜೈ ಶ್ರೀರಾಮ್’ ಎಂದು ಕೂಗುವಂತೆ ಒತ್ತಾಯಿಸಿ ಹಲ್ಲೆ ಮಾಡಲಾಗಿದೆಯೇ? ಈ ವಿಡಿಯೋದಲ್ಲಿ ಕಂಡಬಂದಿರುವ ಘಟನೆ ಎಲ್ಲಿ ಮತ್ತು ಯಾವಾಗ ನಡೆದಿದೆ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 12 ಮೇ 2022ರಂದು ಎಕ್ಸ್ ಖಾತೆಯಲ್ಲಿ ಇದೇ ವಿಡಿಯೋವನ್ನು ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಹಾಗಾಗಿ ಈ ವಿಡಿಯೋ ಎರಡು ವರ್ಷಗಳಷ್ಟು ಹಳೆಯದಾಗಿದೆ ಮತ್ತು ವ್ಯಕ್ತಿಯನ್ನು “ಜೈ ಶ್ರೀ ರಾಮ್” ಎಂದು ಜಪಿಸಲು ಬಲವಂತವಾಗಿ ಸೂಚಿಸುವ ಯಾವುದೇ ಆಡಿಯೋ ಇಲ್ಲ. ವಾಸ್ತವವಾಗಿ ವಿಡಿಯೋದ ಧ್ವನಿಯನ್ನು ಬದಲಾಯಿಸಲಾಗಿದೆ.
Muslim man assaulted by mob of Hindu extremists in Delhi, yesterday.#MuslimGenocideInIndia pic.twitter.com/MolE0ZhquY
— Arkam Ali (@ArkamAli18) May 12, 2022
ಪೋಸ್ಟ್‌ನಲ್ಲಿ ಹೀಗೆ ಬರೆಯಲಾಗಿದೆ: “ನಿನ್ನೆ ದೆಹಲಿಯಲ್ಲಿ ಹಿಂದೂ ಉಗ್ರಗಾಮಿಗಳ ಗುಂಪೊಂದು ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದೆ.” ಆದರೆ ಈ ವಿಡಿಯೋದಲ್ಲಿ ಎಲ್ಲಿಯೂ ವ್ಯಕ್ತಿಯನ್ನು “ಜೈ ಶ್ರೀ ರಾಮ್” ಎಂದು ಕೂಗುವಂತೆ ಬಲವಂತ ಮಾಡಲಾಗಿಲ್ಲ
ಕೀವರ್ಡ್ ಸಹಾಯದಿಂದ ಮತ್ತಷ್ಟು ಸರ್ಚ್ ಮಾಡಿದಾಗ, 12 ಮೇ, 2022 ರಂದು ANI ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ ಲಭ್ಯವಾಗಿದ್ದು, 13 ವರ್ಷದ ಹುಡುಗಿಯನ್ನು ಹಿಂಬಾಲಿಸಿದ ಮತ್ತು ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು ಇರ್ಫಾನ್ ಖಾನ್ ಎಂಬ ವ್ಯಕ್ತಿಯನ್ನು ಪೋಕ್ಸೋ ಕಾಯ್ದೆಯಡಿಯೂ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
Delhi Police arrested a 37-year-old man namely Irfan Khan for allegedly stalking & misbehaving with a 13-years-old girl. Case registered against him u/s 354D IPC & 12 POCSO Act. Accused was produced before court &remanded to judicial custody, police said
— ANI (@ANI) May 12, 2022
ವರದಿಯ ಪ್ರಕಾರ, ದೆಹಲಿಯ ಶಾಹದಾರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಟ್ಯೂಷನ್‌ಗೆ ಹೋಗುತ್ತಿದ್ದ ಬಾಲಕಿಗೆ ಇರ್ಫಾನ್ ಖಾನ್ ಎಂಬ ವ್ಯಕ್ತಿಯು ಕೆಲವು ದಿನಗಳಿಂದ ತನ್ನನ್ನು ಹಿಂಬಾಲಿಸುತ್ತ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿ ಬಾಲಕಿಯ ಕುಟುಂಬ ದೂರು ದಾಖಲಿಸಿದ ನಂತರ 37 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹಾಗಿದ್ದರೆ ವಿಡಿಯೋದಲ್ಲಿರುವ ಜೈ ಶ್ರೀರಾಮ್ ಆಡಿಯೋ ಎಲ್ಲಿಯದ್ದು?
ವೈರಲ್ ಆಗಿರುವ ವಿಡಿಯೋದ ಆಡಿಯೋದಲ್ಲಿ ಕೆಲವು ಧ್ವನಿಗಳು ಹಿಂದಿಯಲ್ಲಿ ಮಾತನಾಡುತ್ತಿರುವುದು ಕೇಳಿಬರುತ್ತಿದೆ. ಆ ಪದಗಳೆಂದರೆ, “ಜೈ ಶ್ರೀ ರಾಮ್ ಬೋಲ್. ಬೋಲ್ ನಾ ಜೈ ಶ್ರೀ ರಾಮ್. ಜೈ ಶ್ರೀ ರಾಮ್ ಬೋಲ್ನೆ ಮೇ ಕ್ಯಾ ಹೈ? ಬೋಲ್ನಾ ಪಡೆಗಾ. ಜೈ ಶ್ರೀ ರಾಮ್ ಬೋಲ್ ಔರ್ ಜಾ. ಬೋಲ್ ಜೈ ಶ್ರೀ ರಾಮ್. ಮೇರಿ ಬಾತ್ ಸುನ್.”
ಈ ಬಗ್ಗೆ ಮಾಹಿತಿ ಪಡೆಯಲು ಶ್ರೀ ರಾಮ್. ಜೈ ಶ್ರೀ ರಾಮ್ ಬೋಲ್ನೆ ಮೇ ಕ್ಯಾ ಹೈ ಎಂಬ ಕೀವರ್ಡ್ ಬಳಸಿ ಸರ್ಚ್ ಮಾಡಿದಾಗ, 29 ಆಗಸ್ಟ್, 2021 ರಂದು CNN-News18 YouTube ಗೆ ಅಪ್‌ಲೋಡ್ ಮಾಡಲಾದ ವಿಡಿಯೋ ಲಭ್ಯವಾಗಿದೆ. ಈ ವಿಡಿಯೋ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಮಹಿದ್‌ಪುರದಲ್ಲಿ ನಡೆದ ಘಟನೆಯನ್ನು ಚಿತ್ರಿಸುತ್ತದೆ, ವರದಿಯ ಪ್ರಕಾರ, ಅಲ್ಲಿ ವ್ಯಾಪಾರಿಯೊಬ್ಬ ಕೋಮು ಗದ್ದಲದಲ್ಲಿ ಸಿಕ್ಕಿಬಿದ್ದಿದ್ದು ಕೆಲವರು ಆತನನ್ನು “ಜೈ ಶ್ರೀ ರಾಮ್” ಎಂದು ಕೂಗುವಂತೆ ಒತ್ತಾಯಿಸಿದರುಎಂದು ಉಲ್ಲೇಖಿಸಲಾಗಿದೆ.
ಏಳು ಮತ್ತು 23 ಸೆಕೆಂಡುಗಳ ನಡುವಿನ ಈ ಕ್ಲಿಪ್‌ನ ಆಡಿಯೊವನ್ನು ಆಲಿಸಿದ ನಂತರ, ಈ ಆಡಿಯೊವನ್ನು ವೈರಲ್ ಆಗಿರುವ ವಿಡಿಯೋಗೆ ಸೇರಿಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ವೈರಲ್ ವಿಡಿಯೋ ಮತ್ತು CNN-News18 ನ 23-ಸೆಕೆಂಡ್‌ನ ವೀಡಿಯೊದಲ್ಲಿನ ಕೊನೆಯ ಪದಗಳು (“ಮೇರಿ ಬಾತ್ ಸನ್.”) ಒಂದೇ ಆಗಿವೆ ಎಂಬುದನ್ನು ಕೇಳಿದಾಗ, ಎರಡು ವರ್ಷದ ಹಳೆಯ ವಿಡಿಯೋಗೆ ಮೂರು ವರ್ಷದ ಹಿಂದಿನ ಆಡಿಯೋವನ್ನು ಸೇರಿಸಿ ಸುಳ್ಳು ಮತ್ತು ಕೋಮು ದ್ವೇಷ ನಿರೂಪಣೆಯೊಂದಿಗೆ ವಿಡಿಯೋವನ್ನು ಸೃಷ್ಟಿಸಿ ಶಾಂತಿ ಮತ್ತು ಸೌಹಾರ್ದತೆಯನ್ನು ಹಾಳು ಮಾಡುವ ಉದ್ದೇಶದಿಂದ ಹಂಚಿಕೊಳ್ಳಲಾಗುತ್ತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದ್ದನ್ನು ಓದಿರಿ : FACT CHECK | ಎದೆ ಮಟ್ಟದ ನೀರಲ್ಲಿ ನಿಂತು ಮುಸ್ಲಿಮರು ಪ್ರಾರ್ಥನೆ ಮಾಡುತ್ತಿರುವ ಚಿತ್ರ ಇತ್ತೀಚಿನದ್ದಲ್ಲ