FACT CHECK | ಎದೆ ಮಟ್ಟದ ನೀರಲ್ಲಿ ನಿಂತು ಮುಸ್ಲಿಮರು ಪ್ರಾರ್ಥನೆ ಮಾಡುತ್ತಿರುವ ಚಿತ್ರ ಇತ್ತೀಚಿನದ್ದಲ್ಲ
ಮುಸ್ಲಿಂ ಪುರುಷರ ಗುಂಪು ಎದೆಯ ಮಟ್ಟದ ನೀರಿನಲ್ಲಿ ನಿಂತು ಪ್ರಾರ್ಥನೆ ಸಲ್ಲಿಸುತ್ತಿರುವ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಇದು ಬಾಂಗ್ಲಾದೇಶದಲ್ಲಿ ಪ್ರಸ್ತುತ 2024 ರ ಪ್ರವಾಹಕ್ಕೆ ಸಂಬಂಧಿಸಿದೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ.
ಆಕ್ರೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ಹಾಗೆಯೇ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಲೆನ್ಸ್ ನಲ್ಲಿ ಸರ್ಚ್ ಮಾಡಿದಾಗ, ‘ಮಿಲಾನೊ ಫೋಟೋ ಫೆಸ್ಟಿವಲ್‘ ವೆಬ್ಸೈಟ್‌ಗೆ ಪ್ರಕಟವಾದ ಫೊಟೊವೊಂದು ಲಭ್ಯವಾಯಿತು. ಇಲ್ಲಿ, ವಿಶ್ವ ಜಲ ದಿನದ ಫೋಟೋ ಸ್ಪರ್ಧೆ 2022 ರ ಬಗ್ಗೆ ಲೇಖನದಲ್ಲಿ ಕಾಣಿಸಿಕೊಂಡ ಅದೇ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ. ಹೆಚ್ಚುವರಿಯಾಗಿ, ಚಿತ್ರವನ್ನು ಉತ್ಸವದ ಇನ್ಸ್ಟಾಗ್ರಾಮ್ ಪುಟದಲ್ಲಿ 12 ಸೆಪ್ಟೆಂಬರ್ 2022 ರಂದು ಹಂಚಿಕೊಳ್ಳಲಾಗಿದೆ. ಈ ಫೋಟೋ ಹಳೆಯದು ಮತ್ತು ಬಾಂಗ್ಲಾದೇಶದ ಪ್ರಸ್ತುತ 2024 ರ ಪ್ರವಾಹಕ್ಕೆ ಸಂಬಂಧಿಸಿಲ್ಲ ಎಂದು ಇದು ಸ್ಪಷ್ಟಪಡಿಸುತ್ತದೆ.
ಇಂಟರ್ನ್ಯಾಷನಲ್ ಫೋಟೋಗ್ರಫಿ ಅವಾರ್ಡ್ಸ್ ವೆಬ್ಸೈಟ್‌ನಲ್ಲಿ ಶಾರ್ವಾರ್ ಹುಸೇನ್ ಅವರಿಗೆ ಕ್ರೆಡಿಟ್ ಮಾಡಲಾದ ಈ ಫೋಟೋವು ಬಾಂಗ್ಲಾದೇಶದ ಸತ್ಖೀರಾದಿಂದ 8 ಅಕ್ಟೋಬರ್ 2021 ರಂದು ತೆಗೆದ ದೃಶ್ಯ ಎಂಬ ಮಾಹಿಯೊಂದಿಗೆ ಹಂಚಿಕೊಳ್ಳಲಾಗಿದೆ. ಸತ್ಖೀರಾ ಸುಂದರ್ಬನ್ ಮ್ಯಾಂಗ್ರೋವ್ ಅರಣ್ಯದ ಬಳಿಯ ತಗ್ಗು ಕರಾವಳಿ ಪ್ರದೇಶವಾಗಿದ್ದು, ಪ್ರವಾಹ ಪ್ರದೇಶವಾದ ಇಲ್ಲಿನ ಜನರು ಪ್ರಾರ್ಥನೆ ಸಲ್ಲಿಸುವಾಗ ಎದೆಯ ಮಟ್ಟದವರೆಗೆ ನೀರು ಆವರಿಸಿರುತ್ತದೆ ಎಂದು ಹೇಳಲಾಗಿದೆ.
ಶರ್ವಾರ್ ಹುಸೇನ್ ಅವರ ಇನ್ಸ್ಟಾಗ್ರಾಮ್ ಪ್ರೊಫೈಲ್ ಅನ್ನು ಪರಿಶೀಲಿಸಿದಾಗ 2022ರ ಎರಡು ಪೋಸ್ಟ್‌ಗಳನ್ನು (ಇಲ್ಲಿ ಮತ್ತು ಇಲ್ಲಿ) ಲಭ್ಯವಾಗಿವೆ. ಶೀರ್ಷಿಕೆಗಳಲ್ಲಿ, ಹುಸೇನ್ ಈ ಫೋಟೋ “ಜಾಗತಿಕ ತಾಪಮಾನ ಏರಿಕೆಯ ಕಣ್ಣೀರು” ಎಂಬ ಶೀರ್ಷಿಕೆಯ ತಮ್ಮ ದೀರ್ಘಕಾಲೀನ ಯೋಜನೆಯ ಭಾಗವಾಗಿದೆ ಎಂದು ವಿವರಿಸಿದ್ದಾರೆ. ಅಭಿವೃದ್ಧಿ ಶೀಲ ರಾಷ್ಟ್ರಗಳ ಮೇಲೆ ಹವಾಮಾನ ಬದಲಾವಣೆಯ ಪರಿಣಾಮವನ್ನು ಎತ್ತಿ ತೋರಿಸಲು ಅವರು ಇದನ್ನು ಹಂಚಿಕೊಂಡಿದ್ದರು, ಜಾಗತಿಕ ನಾಯಕರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದ್ದರು. ವಿಶ್ವ ಜಲ ದಿನದ ಫೋಟೋ ಸ್ಪರ್ಧೆ 2022 ರಲ್ಲಿ ಎರಡನೇ ಸ್ಥಾನವನ್ನು ಗೆಲ್ಲುವುದು ಅವರ ಸಂದೇಶವನ್ನು ವಿಶ್ವಾದ್ಯಂತ ಹರಡಲು ಸಹಾಯ ಮಾಡುತ್ತದೆ ಎಂದು ಅವರ ಅಂದಾಜಿಸಿದ್ದರು.
ಒಟ್ಟಾರೆಯಾಗಿ ಹೇಳುವುದಾದರೆ, ಮುಸ್ಲಿಮರು ಎದೆಯ ಮಟ್ಟದ ನೀರಿನಲ್ಲಿ ಪ್ರಾರ್ಥಿಸುವ ಹಳೆಯ ಫೋಟೋವನ್ನು 2024 ರ ಬಾಂಗ್ಲಾದೇಶದ ಪ್ರವಾಹಕ್ಕೆ ಸಂಬಂಧಿಸಿದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಉತ್ತರಾಖಂಡದ ಮುಸ್ಲಿಂ ಜನಸಂಖ್ಯೆ ಬಗ್ಗೆ ಸುಳ್ಳು ಪೋಸ್ಟ್ ಹಂಚಿಕೆ