ಬಾಲಕಿ ಮೇಲೆ ಪೇದೆಯಿಂದ ಲೈಂಗಿಕ ದೌರ್ಜನ್ಯ; ಬಯಲಾಯ್ತು ಪೊಲೀಸನ ಕರಾಳ ಮುಖ

ಪೊಲೀಸ್​ ಕಾನ್ಸ್​ಟೇಬಲ್​ ಒಬ್ಬ ಅಪ್ರಾಪ್ತ ಬಾಲಕಿಯ ಜತೆ ಅಸಭ್ಯವಾಗಿ ವರ್ತಿಸಿರುವ ಆತಂಕಕಾರಿ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಂಕರಪಲ್ಲಿಯಲ್ಲಿ ನಡೆದಿದೆ.

ಆರೋಪಿ ಪೊಲೀಸ್​ ಕಾನ್ಸ್​ಟೇಬಲ್​ ಶೇಖರ್​ (35) ಎಂಬಾತ ಶಂಕರಪಲ್ಲಿ ಪುರಸಭೆಯ ನಿವಾಸಿಯಾಗಿದ್ದು, ಹೈದರಾಬಾದ್​ನ ಕುಕಟಪಲ್ಲಿಯ ಪೊಲೀಸ್​ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ.

ಈತನಿಗೆ ಸೇರಿದ ಮನೆಯೊಂದನ್ನು ಬಾಲಕಿಯ ಕುಟುಂಬ ಬಾಡಿಗೆಗೆ ಪಡೆದು, ಕೆಲ ವರ್ಷಗಳಿಂದ ವಾಸವಾಗಿತ್ತು. ಬುಧವಾರ, ಬಾಲಕಿಯ ಪೋಷಕರು ಕೆಸಕ್ಕಾಗಿ ಹೊರಗೆ ಹೋಗಿದ್ದರು. ಈ ವೇಳೆ ಬಾಲಕಿಯೊಬ್ಬಳೇ ಮನೆಯಲ್ಲಿದ್ದಳು. ಇದನ್ನು ಗಮನಿಸಿದ್ದ ಪೇದೆ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ತನ್ನ ಕಾಮುಕ ನೀಚತನವನ್ನು ಪ್ರದರ್ಶಿಸಿದ್ದಾನೆ.

ಯಾರು ಇಲ್ಲದಿರುವುದನ್ನು ನೋಡಿ ಮನೆಯೊಳಗೆ ದಿಢೀರ್​ ನುಗ್ಗಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಬಾಲಕಿ ಜೋರಾಗಿ ಕೂಗಿಕೊಂಡಿದ್ದಾಳೆ. ಅದನ್ನು ಕೇಳಿ ಓಡಿಬಂದ ಸ್ಥಳೀಯರು ಪೇದೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪಾಲಕರ ದೂರಿನ ಅನ್ವಯ ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಅಲ್ಲದೆ, ಎಸ್​ಸಿ-ಎಸ್​ಟಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿಯೂ ದೂರು ದಾಖಲಾಗಿದೆ.

ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆಂದು ಆಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನು ಪೇದೆ ಶೇಖರ್​ ಸ್ಥಳೀಯ ಉದ್ಯಮಿಗಳಿಗೂ ಕಿರುಕುಳ ನೀಡುತ್ತಿದ್ದ ಎಂಬ ವಿಚಾರವೂ ಕೂಡ ಇದೇ ಸಂದರ್ಭದಲ್ಲಿ ಬಯಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights