FACT CHECK | ಶವ ಮೆರವಣಿಗೆ ವೇಳೆ ಬಾಂಬ್ ಸ್ಪೋಟ ! ಈ ವಿಡಿಯೋ ಇಸ್ರೇಲ್‌ನದ್ದು ಅಲ್ಲ ಭಾರತದ್ದು ಅಲ್ಲ! ಮತ್ತೆಲ್ಲಿಯದ್ದು?

ಅಂತ್ಯಕ್ರಿಯೆಯ ಮೆರವಣಿಗೆಯ ಸಮಯದಲ್ಲಿ ನಡೆದ  ಸ್ಫೋಟದ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ  “ಭಯೋತ್ಪಾದಕನ ದೇಹದೊಳಗೆ ಟೈಮ್ ಬಾಂಬ್‌ನ್ನು ಇರಿಸಿ  ಪ್ಯಾಲೆಸ್ಟೀನಿಯರಿಗೆ ಹಿಂದಿರುಗಿಸಿದ ಇಸ್ರೇಲ್‌. ಅದರ ಪರಿಣಾಮ ಇದರಲ್ಲಿದೆ.” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಇನ್ನೂ ಕೆಲವರು ಇದು ಭಾರತದ್ದು ಎಂದು ಪ್ರತಿಪಾದಿಸಿ ವಾಟ್ಸಾಪ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ವಿಡಿಯೋ ಎಲ್ಲಿಯದ್ದು ಮತ್ತು ಯಾವಾಗಿನದ್ದು ಎಂಬುದರ ವಾಸ್ತವವನ್ನು ಕುರಿತು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,ಯುರೋ ನ್ಯೂಸ್  ಜುಲೈ2012 ರಲ್ಲಿ “ಫ್ಯೂನರಲ್ ಅಟ್ಯಾಕ್ ಇನ್ ಸಿರಿಯಾ – ಕ್ಲೈಮ್ಸ್” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡ ವಿಡಿಯೋ ಲಭ್ಯವಾಗಿದೆ.

2012ರ ಜುಲೈ ತಿಂಗಳಿನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಘಟನೆ ಸಿರಿಯಾದ ಡಮಾಸ್ಕಸ್ ಉಪನಗರದಲ್ಲಿ ಸರ್ಕಾರಿ ಪಡೆಯಿಂದ ಹತ್ಯೆಗೀಡಾದ ವ್ಯಕ್ತಿಯೋರ್ವನ ಅಂತ್ಯಕ್ರಿಯೆಯ ಮೆರವಣಿಗೆಯ ವೇಳೆಯಲ್ಲಿ ಸಂಭವಿಸಿದ್ದು ಸರ್ಕಾರಿ ಪ್ರಾಯೋಜಿತ ಕಾರ್‌ಬಾಂಬ್‌ ಸ್ಪೋಟದಿಂದಾಗಿ ಅಂತ್ಯಕ್ರೀಯೆಯ ಮೆರವಣಿಗೆಯಲ್ಲಿ ಭಾಗವಹಿಸಿದ ಸುಮಾರು 85 ಜನರು ಸಾವನ್ನಪ್ಪಿದ್ದಾಗಿ ವರದಿಯಾಗಿದೆ. ಹಾಗಾಗಿ ಇಸ್ರೇಲ್‌ನಲ್ಲಿ ನಡೆದ ಇತ್ತೀಚಿನ ಘಟನೆ ಎಂಬುದು ಸುಳ್ಳು.

ವಿಡಿಯೋದಲ್ಲಿನ ಸುಳಿವುಗಳನ್ನು ಬಳಸಿಕೊಂಡು ಕೀವರ್ಡ್‌ನ ಸಹಾಯದಿಂದ ಸರ್ಚ್ ಮಾಡಿದಾಗ,  CNN ಲೇಖನ  ಲಭ್ಯವಾಗಿದೆ. ಲೇಖನದಲ್ಲಿ ಡಮಾಸ್ಕಸ್‌ನ  ಉಪನಗರದಲ್ಲಿ ಸರ್ಕಾರಿ ಪಡೆಯಿಂದ ಹತ್ಯೆಗೀಡಾದ ವ್ಯಕ್ತಿಯ ಶವದ ಮೆರವಣಿಗೆಯನ್ನು ಮಾಡಲಾಯಿತು. ಸಿರಿಯಾದ ಕ್ರಾಂತಿಕಾರಿಗಳು ಆ ವ್ಯಕ್ತಿಯ ಮೃತ ದೇಹವನ್ನು ಧ್ವಜದಿಂದ ಮುಚ್ಚಿದ್ದರು. ಅಲ್ಲಿನ ಜನಸಮೂಹವು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಸರ್ಕಾರವು ಆಯೋಜಿಸಿದ ಕಾರ್ ಬಾಂಬ್‌ನ ಸ್ಫೋಟದ ಪರಿಣಾಮದಿಂದ ಸುಮಾರು 85 ಜನರು ಸಾವನ್ನಪ್ಪಿದರು ಎಂದು ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಿರಿಯಾದ ಡಮಾಸ್ಕಸ್ ಉಪನಗರದಲ್ಲಿ ಸರ್ಕಾರಿ ಪಡೆಯಿಂದ ಹತ್ಯೆಗೀಡಾದ ವ್ಯಕ್ತಿಯೋರ್ವನ ಅಂತ್ಯಕ್ರಿಯೆಯ ಮೆರವಣಿಗೆಯ ವೇಳೆ 2012ರಲ್ಲಿ ನಡೆದ ಘಟನೆಯನ್ನು ಇತ್ತಿಚಿಗೆ ಇಸ್ರೇಲ್ ಪ್ಯಾಲೆಸ್ಟೀನಿಯರ ಮೇಲೆ ನಡೆಸಿದ ದಾಳಿ ಎಂದು, ಇನ್ನು ಕೆಲವರು ಇದು ಭಾರತದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಉತ್ತರಾಖಂಡದ ಮುಸ್ಲಿಂ ಜನಸಂಖ್ಯೆ ಬಗ್ಗೆ ಸುಳ್ಳು ಪೋಸ್ಟ್‌ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights