FACT CHECK | ಉತ್ತರಾಖಂಡದ ಮುಸ್ಲಿಂ ಜನಸಂಖ್ಯೆ ಬಗ್ಗೆ ಸುಳ್ಳು ಪೋಸ್ಟ್‌ ಹಂಚಿಕೆ

ಉತ್ತರಾಖಂಡದಲ್ಲಿ 2000 ಇಸವಿಯಲ್ಲಿ ಶೇಕಡಾ 1.5% ರಷ್ಟಿದ್ದ ಮುಸ್ಲಿಮರ ಜನಸಂಖ್ಯೆಯು 2024ರ ಹೊತ್ತಿಗೆ ಶೇಕಡಾ 16 % ರಷ್ಟು ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದನ್ನು  ಹಂಚಿಕೊಳ್ಳಲಾಗುತ್ತಿದೆ. “ಎಚ್ಚರಿಕೆಯ ಕರೆಗಂಟೆ” ಎಂದು ಮುಸ್ಲಿಮರನ್ನು ಗುರಿಯಾಗಿಸಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಹಾಗಿದ್ದರೆ ಈ ಮಾಹಿತಿ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಭಾರತದಲ್ಲಿ ಬಲಪಂಥೀಯವಾದ ಮುನ್ನಲೆ ಬಂದಾಗಲೆಲ್ಲ ಮುಸ್ಲಿಮರ ಜನಸಂಖ್ಯೆ ಬಗ್ಗೆಯೇ ಹೆಚ್ಚಾಗಿ ಚರ್ಚೆಗಳು ಆರಂಭವಾಗತ್ತವೆ. ಅದರಲ್ಲೂ ಇತ್ತೀಚೆಗಂತೂ ಮುಸ್ಲಿ ಜನಸಂಖ್ಯೆ ಹೆಚ್ಚಳದಿಂದ ಭಾರತ ನಾಶವಾಗಲಿದೆ ಎಂದೆಲ್ಲ ಅಪಪ್ರಚಾರ ಮಾಡಲಾಗುತ್ತಿದೆ. ಹಾಗಾಗಿ 24 ವರ್ಷಗಳಲ್ಲಿ ಉತ್ತರಾಖಂಡದಲ್ಲಿರುವ ಮುಸ್ಲಿಮರ ಸಂಖ್ಯೆ ಶೇಕಡಾ.1 ರಿಂದ ಶೇಕಡಾ 16ರಷ್ಟು ಏರಿಕೆಯಾಗಿದೆ ಎಂದು ಹಂಚಿಕೊಳ್ಳುತ್ತಿರುವ ಮಾಹಿತಿ ಸಂಪೂರ್ಣ ಸುಳ್ಳು.

ದಿ ಇಕನಾಮಿಕ್ ಟೈಮ್ಸ್ ವರದಿ ಪ್ರಕಾರ, ಉತ್ತರಾಖಂಡದ ಮುಸ್ಲಿಂ ಜನಸಂಖ್ಯೆಯು 2001ರಲ್ಲಿ 11.9% ರಷ್ಟಿತ್ತು ಮತ್ತು 2011ರ ವೇಳೆಗೆ 13.9% ಕ್ಕೆ ಏರಿಕೆ ಆಗಿದೆ. ಅಂದರೆ ಹತ್ತು ವರ್ಷಗಳಲ್ಲಿ ಶೇ.2 ರಷ್ಟು ಏರಿಕೆಯಾಗಿದೆ. 2011ರ ಜನಗಣತಿಯ ಬಳಿಕ ಉತ್ತರಾಖಂಡದಲ್ಲಿ ಯಾವುದೇ ಧರ್ಮವಾರು ಜನಸಂಖ್ಯಾ ಜನಗಣತಿಗಳು ನಡೆದಿಲ್ಲ. ಹೀಗಾಗಿ 2024ರಲ್ಲಿ ಯಾವ ಧರ್ಮೀಯರ ಸಂಖ್ಯೆ ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ.

“2001-11ರ ಅವಧಿಯಲ್ಲಿ ಮುಸ್ಲಿಮರ ಜನಸಂಖ್ಯೆಯಲ್ಲಿ ಶೇಕಡಾ 24 ರಷ್ಟು ಏರಿಕೆ” ಎಂಬ ಶೀರ್ಷಿಕೆಯಲ್ಲಿ  2015ರ ಜನವರಿ 22ರಂದು ದಿ ಇಕನಾಮಿಕ್ ಟೈಮ್ಸ್ ವರದಿ ಮಾಡಿದ್ದು, ಯಾವ ಯಾವ ರಾಜ್ಯಗಳಲ್ಲಿ ಮುಸ್ಲಿಮರ ಜನಸಂಖ್ಯೆ ಎಷ್ಟು ಪ್ರಮಾಣದಲ್ಲಿ ಏರಿಕೆಯಾಗಿದೆ ಎಂಬ ಬಗ್ಗೆ ಜನಗಣತಿಯ ವರದಿಯನ್ನು ಆಧಾರವಾಗಿಸಿ ವಿಶ್ಲೇಷಣೆ ಮಾಡಿದೆ.

ತಪ್ಪು ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಮುಸ್ಲಿಮರನ್ನು ಗುರಿಯಾಗಿಸಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಂಚಿಕೊಳ್ಳಲಾಗುತ್ತಿದೆ ಎಂದು ಸತ್ಯಶೋಧನಾ ಸಂಸ್ಥೆ ದಿ ಇಟೆಂಟ್ ಡಾಟಾ ವರದಿ ಮಾಡಿದೆ. ವಾಸ್ತವವಾಗಿ, ಉತ್ತರಾಖಂಡದ ಮುಸ್ಲಿಂ ಜನಸಂಖ್ಯೆಯು 2001 ರಲ್ಲಿ 11.9% ರಷ್ಟಿತ್ತು ಮತ್ತು 2011 ರ ವೇಳೆಗೆ 13.9% ಕ್ಕೆ ಏರಿತು, ಇದು ಆ ದಶಕದಲ್ಲಿ 2 ಶೇಕಡಾವಾರು ಅಂಶಗಳ ಏರಿಕೆಯನ್ನು ಸೂಚಿಸುತ್ತದೆ. 2011 ರ ಜನಗಣತಿಯನ್ನು ಮೀರಿ ಉತ್ತರಾಖಂಡದ ಧಾರ್ಮಿಕ ಜನಸಂಖ್ಯೆಯ ಬಗ್ಗೆ ಯಾವುದೇ ನವೀಕರಿಸಿದ ಅಧಿಕೃತ ಡೇಟಾ ಇಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಲಭ್ಯವಾದ ವರದಿಳ ಪ್ರಕಾರ ಉತ್ತರಾಖಂಡದ ಮುಸ್ಲಿಂ ಜನಸಂಖ್ಯೆಯು 2001 ರಿಂದ 2011ರ 10ವರ್ಷದ ಅವಧಿಯಲ್ಲಿ ಶೇಕಡ 2% ಮಾತ್ರ ಏರಿಕೆಯಾಗಿದೆ. ಮುಂದುವರೆದು 2011 ರ ನಂತರ ಜನಗಣತಿಯನ್ನು ಅಂದರೆ 2024ರ ಜನಗಣತಿ ಇನ್ನೂ ಆಗಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಹಸುವಿನ ಬಾಲ ಕತ್ತರಿಸಿ ದೇವಸ್ಥಾನದ ಬಾಗಿಲಿಗೆ ಎಸೆದ ಪುಂಡರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು ಎಂಬ ವಿಡಿಯೋದ ಅಸಲೀಯತ್ತೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights