FACT CHECK | ಮುಂಬೈ ದಾಳಿಯ ರೂವಾರಿ ಅಜ್ಮಲ್‌ ಕಸಬ್‌ ಪರ ವಾದಿಸಿದ್ದ ವಕೀಲರನ್ನು ಎನ್‌ಸಿಪಿ ಪಕ್ಷವು ಸಂಸದರನ್ನಾಗಿ ಮಾಡಿತ್ತೇ?

ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ 26 ನವೆಂಬರ್, 2008ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಸಿಕ್ಕಿಬಿದ್ದ  ಉಗ್ರ ಅಜ್ಮಲ್‌ ಕಸಬ್‌ ಪರ ವಕೀಲರಾಗಿ ವಾದಿಸಿದ್ದ ಮಜೀದ್‌ ಮೆಮನ್‌ ಅವರನ್ನು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸಂಸ್ಥಾಪಕ ಶರದ್ ಪವಾರ್ ಅವರು ರಾಜ್ಯಸಭಾ ಎಂಪಿ ಮಾಡಿದ್ದರೆ, ಭಾರತೀಯ ಜನತಾ ಪಕ್ಷವು (ಬಿಜೆಪಿ) ಅಜ್ಮಲ್‌ ಕಸಬ್‌ನ ಗಲ್ಲು ಶಿಕ್ಷೆಗೆ ಕಾರಣರಾದ ಉಜ್ವಲ್ ನಿಕಮ್‌ಗೆ ಟಿಕೆಟ್ ನೀಡಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಪಠ್ಯ 'Ajmal Kasab's lawyer Majeed Memon was made Rajya Sabha MP by Sharad Pawar. And BJP gave MP ticket to Ujwal Nikam who hanged that Kasab.... Difference is clear' ಹೇಳುತ್ತಿದೆ ನ ಚಿತ್ರವಾಗಿರಬಹುದು

ಕಾಂಗ್ರೆಸ್‌ ಮತ್ತು ಮಿತ್ರಪಕ್ಷಗಳನ್ನು ಗುರಿಯಾಗಿಸಿಕೊಂಡು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದೇ ಪೋಸ್ಟ್‌ಅನ್ನು ಹಂಚಿಕೊಳ್ಳುವ ಮೂಲಕ ಟೀಕೆಗಳ ಸುರಿಮಳೆಯನ್ನೆ ಸುರಿಸಿದ್ದಾರೆ.

ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ? ಕಸಬ್ ಪರ ವಾದಿಸಿದ್ದ ವಕೀಲರನ್ನು ಎನ್‌ಸಿಪಿ ಪಕ್ಷವು ಸಂಸದನನ್ನಾಗಿ ಆಯ್ಕೆ ಮಾಡಿದ್ದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವೈರಲ್ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಗೂಗಲ್‌ ಸರ್ಚ್ ಮಾಡಿದಗ. ಈ ವೇಳೆ ಬಿಜೆಪಿಯು ವಕೀಲ ಉಜ್ವಲ್ ನಿಕಮ್ ಅವರಿಗೆ ಮುಂಬೈ ನಾರ್ತ್ ಸೆಂಟ್ರಲ್‌ನಿಂದ ಲೋಕಸಭೆಯ ಟಿಕೆಟ್‌ ನೀಡಿರುವುದು ಖಚಿತವಾಗಿದೆ. ವಕೀಲ ಉಜ್ವಲ್ ನಿಕಮ್ ಅವರು ಮುಂಬೈ 26/11 ಭಯೋತ್ಪಾದಕ ದಾಳಿಯ ವಿಚಾರಣೆಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ರಾಷ್ಟ್ರವ್ಯಾಪಿ ಮನ್ನಣೆ ಗಳಿಸಿದ್ದರು, ಅಜ್ಮಲ್ ಕಸಬ್‌ ವಿರುದ್ಧ ಮತ್ತು ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ್ದರು.

ಆದರೆ ‘ಮಜೀದ್ ಮೆಮನ್’ಅವರು ಕಸಬ್‌ ಪರ ವಾದಿಸಿದ್ದಾರೆ ಎಂಬ ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಗೂಗಲ್ ಸರ್ಚ್ ಮಾಡಿದಾಗ, ಮುಂಬೈ ದಾಳಿಗೆ ಸಂಬಂಧಿಸಿದ ವಿಚಾರಣೆಯ ಸಂದರ್ಭದಲ್ಲಿ ಮಜೀದ್ ಮೆಮನ್ ಅವರು ಅಜ್ಮಲ್ ಕಸಬ್‌ ಅನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಹೇಳುವ ಯಾವುದೇ ಸುದ್ದಿ ವರದಿಗಳು ಲಭ್ಯವಾಗಿಲ್ಲ.

ಮತ್ತಷ್ಟು ಮಾಹಿತಿಗಾಗಿ ಸರ್ಚ್ ಮಾಡಿದಾಗ,  26/11 ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣದಲ್ಲಿ ಅಜ್ಮಲ್ ಕಸಬ್ ಅನ್ನು ಸಮರ್ಥಿಸಲು ಯಾವುದೇ ವಕೀಲರು ಆಸಕ್ತಿ ಹೊಂದಿರಲ್ಲ. ಈ ಕಾರಣಕ್ಕಾಗಿ, ಪ್ರತಿ ಆರೋಪಿಯೂ ನ್ಯಾಯಯುತ ವಿಚಾರಣೆಗೆ ಒಳಗಾಗುವ ಹಕ್ಕಿದೆ ಮತ್ತು ಆರೋಪಿಯನ್ನು ಕನೂನಾತ್ಮಕ ವಕಾಲತ್ತು ವಹಿಸದಿರಲು ಅಸಾಧ್ಯ ಎಂಬ ಕಾರಣಕ್ಕಾಗಿ ಕೆಲ ವಕೀಲರನ್ನು ನೇಮಿಸಲಾಯಿತು. ಹೀಗೆ ಕಸಬ್‌ನ ರಕ್ಷಣಾ ವಕೀಲರಾಗಿ ಅಬ್ಬಾಸ್ ಕಾಜ್ಮಿ ಅವರು ನೇಮಕಗೊಂಡರು ಆದರೆ ಕಾಜ್ಮಿ ಅವರು ಕಸಬ್‌ ಪರ ವಕಾಲತ್ತು ವಹಿಸಲು ನಿರಾಕರಿಸಿದ ನಂತರ, ಅಸಹಕಾರಕ್ಕಾಗಿ ಅವರನ್ನು ತೆಗೆದುಹಾಕಲಾಯಿತು.

ಅಬ್ಬಾಸ್ ಕಾಜ್ಮಿಯವರ ಪದಚ್ಯುತಿ ನಂತರ  ಕಸಬ್‌ನನ್ನು ಪ್ರತಿನಿಧಿಸಿದವರು ಕೆ.ಪಿ.ಪವಾರ್, ಅಮೀನ್ ಸೋಲ್ಕರ್ ಮತ್ತು ಫರ್ಹಾನಾ ಶಾ ಎಂಬ ವಕೀಲರು ಬಾಂಬೆ ಹೈಕೋರ್ಟ್‌ನಲ್ಲಿ ಕಸಬ್‌ ಪರ ವಾದ ಮಾಡಿದ್ದರು ಮತ್ತು ವಕೀಲ ರಾಜು ರಾಮಚಂದ್ರನ್ ಅವರು ಕಸಬ್‌ನ ಮರಣದಂಡನೆಯ ವಿರುದ್ಧದ ಮೇಲ್ಮನವಿಯ ಸಂದರ್ಭದಲ್ಲಿ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದರು. ಸುಪ್ರೀಂ ಕೋರ್ಟ್‌ನಲ್ಲಿ ಅಜ್ಮಲ್ ಕಸಬ್‌ಗೆ ಮರಣದಂಡನೆ ಶಿಕ್ಷೆಯ ಪರವಾಗಿ ಮಾಜಿ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಗೋಪಾಲ್ ಸುಬ್ರಮಣಿಯಂ ಅವರ ನೇತೃತ್ವದ ವಕೀಲರನ್ನು ವಾದಿಸಿದ್ದರು.

“ಕಸಬ್‌ ಪರ ನಾನು ನ್ಯಾಯಾಲಯದಲ್ಲಿ ಏಕೆ ನಿಲ್ಲುವುದಿಲ್ಲ” ಎಂದು ಮಜೀದ್‌ ಮೆಮನ್‌ ಬರೆದಿರುವ ಲೇಖನವನ್ನು ದಿ ಎಕನಾಮಿಕ್ ಟೈಮ್ಸ್ ಮತ್ತು ಟೈಮ್ಸ್ ಆಫ್ ಇಂಡಿಯಾ ಸೇರಿ ವಿವಿಧ ಸುದ್ದಿ ಸಂಸ್ಥೆಗಳು ಡಿಸೆಂಬರ್ 21, 2008 ರಂದು ಪ್ರಕಟಿಸಿರುವುದು ಕಂಡುಬಂದಿದೆ.

Fact Check majeed memon

ಈ ಲೇಖನದಲ್ಲಿ, ಮೆಮನ್‌ ಅವರು ಅಜ್ಮಲ್‌ ಕಸಬ್‌ನ ತ್ವರಿತ ವಿಚಾರಣೆಗೆ ಆಗ್ರಹಿಸಿದ್ದರು. ಕಸಬ್‌ ವಿರುದ್ಧ ಇರುವ ಸಾಕಷ್ಟು ಸಾಕ್ಷ್ಯಗಳನ್ನು ಉಲ್ಲೇಖಿಸಿ ಈ ಅಪರಾಧ ಮರಣ ದಂಡನೆಗೆ ಕಾರಣವಾಗುತ್ತದೆ ಎಂದು ಒತ್ತಿ ಹೇಳಿದ್ದರು. ಅದಲ್ಲದೇ ಅಜ್ಮಲ್‌ ಕಸಬ್‌ ವಕೀಲರನ್ನು ಹೊಂದುವುದು ಅವಶ್ಯಕ. ವಕೀಲರು ಇಲ್ಲದಿರುವುದು ವಿಚಾರಣೆಯ ನ್ಯಾಯಸಮ್ಮತತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದರು. ಅದರ ಜೊತೆಗೆ ಅಜ್ಮಲ್‌ ಕಸಬ್‌ ಪರ ನಾನು ಕೋರ್ಟ್‌ನಲ್ಲಿ ವಾದ ಮಾಡಲ್ಲ. ಏಕೆಂದರೆ ಅವರ ಪ್ರಕರಣ ಸಮರ್ಥನೀಯವಲ್ಲ. ಅವನ ಅಪರಾಧವನ್ನು ನಾವೆಲ್ಲರೂ ನೋಡಿದ್ದೇವೆ ಎಂದು ತಮ್ಮ ಲೇಖನವನ್ನು ಮೆಮನ್‌ ಅಂತ್ಯಗೊಳಿಸಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, ಮಜೀದ್ ಮೆಮನ್ ಅವರು 26/11 ಮುಂಬೈ ದಾಳಿ ಪ್ರಕರಣದ ವಿಚಾರಣೆಯ ಯಾವುದೇ ಹಂತದಲ್ಲಿ ಆರೋಪಿ ಅಜ್ಮಲ್ ಕಸಬ್‌ನ ಕಾನೂನು ತಂಡದ ಭಾಗವಾಗಿರಲಿಲ್ಲ. ಅಬ್ಬಾಸ್ ಕಾಜ್ಮಿ, ಅಮೀನ್ ಸೋಲ್ಕರ್, ಮತ್ತು ಫರ್ಹಾನಾ ಷಾ ಮುಂತಾದ ವಕೀಲರು ವಿವಿಧ ಹಂತಗಳಲ್ಲಿ ಕಸಬ್‌ನನ್ನು ಪ್ರತಿನಿಧಿಸಿದರು. ಕಸಬ್‌ ಪರ ವಾದಿಸುವುದಿಲ್ಲ ಎಂದು ಸ್ವತಃ ಮೆಮನ್‌ ಹೇಳಿದ್ದರು. ಹಾಗಾಗಿ ಮಜೀದ್ ಮೆಮನ್ ಅಜ್ಮಲ್ ಕಸಬ್‌ನ ಪರ ವಾದಿಸಿದ್ದರು ಎಂಬದು ಸುಳ್ಳು.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಹಳೆಯ ರೈಲು ಇಂಜಿನ್ ಮೂಲಕ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲನ್ನು ಎಳೆಯುತ್ತಿರುವ ವಿಡಿಯೋದ ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights