ವೆಡ್ಡಿಂಗ್ ಕ್ರ್ಯಾಶರ್: ಪ್ರಣಯ ಪ್ರಸ್ತಾಪದ ವೇಳೆ ಛಾಯಾಗ್ರಾಹಕಳಿಗೆ ಗುದ್ದಿದ ಸೈಕಲ್ ಸವಾರ!

ನ್ಯೂಯಾರ್ಕ್ನ ಐಕಾನಿಕ್ ಬ್ರೂಕ್ಲಿನ್ ಸೇತುವೆಯಲ್ಲಿ ಒಂದು ಪ್ರಣಯ ಪ್ರಸ್ತಾಪ ಉಲ್ಲಾಸಕರವಾಗಿತ್ತು. ಇದರ ಫೋಟೋ ಶೂಟ್ ವೇಳೆ ಛಾಯಾಗ್ರಾಹಕಲಿಗೆ ಸೈಕಲ್ ಸವಾರನೊಬ್ಬ ಗುದ್ದಿದ್ದಾನೆ. ಈ ವೀಡಿಯೋ ಸದ್ಯ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಗೆಪಾಟಲಿಗೆ ಕಾರಣವಾಗಿದೆ.

ವೀಡಿಯೊದಲ್ಲಿ ಕ್ರಿಸ್ ವಿಗೊ ಎಂಬಾತ ಮಂಡಿಯೂರಿ ಕುಳಿತು ತನ್ನ ಗೆಳತಿ ಏಂಜಲೀನಾ ರಿವೆರಾಳನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಾನೆ.

ದಂಪತಿಗಳ ವಿಶೇಷ ಕ್ಷಣದ ಚಿತ್ರಗಳನ್ನು ಕ್ಲಿಕ್ ಮಾಡುವಲ್ಲಿ ಮಗ್ನರಾಗಿದ್ದ ವಿಗೊ ಅವರ ಸ್ನೇಹಿತೆ ಜೋಶುವಾ ರೊಸಾರಿಯೋ ಅವರಿಗೆ ಸೈಕ್ಲಿಸ್ಟ್‌ ಗುದ್ದಿ ಇಬ್ಬರು ಕೆಳಗೆ ಬಿದ್ದಿದ್ದಾರೆ. ಆ ಕ್ಷಣಕ್ಕೆ ಈ ವೀಡಿಯೋ ನಗೆಪಾಟಲಿಗೆ ಕಾರಣವಾದರೂ ಚಿತ್ರಿಕರಣದ ವೇಳೆ ತೆಗೆದುಕೊಳ್ಳುವ ಎಚ್ಚರಿಕೆಯ ಬಗ್ಗೆ ತಿಳಿಸುತ್ತದೆ.

“ನೀವು ಎಂದಿಗೂ ಮರೆಯಬಾರದು ಎಂಬ ಪ್ರಸ್ತಾಪವನ್ನು ಬಯಸಿದರೆ ಎನ್ವೈಸಿಯಲ್ಲಿ ಇದನ್ನು ಪ್ರಸ್ತಾಪಿಸಿ 😂 ಹೆಚ್ಚು ಶಿಫಾರಸು ಮಾಡಿ” ಎಂದು ವಿಗೊ ಬರೆದಿದ್ದಾರೆ, ಇನ್ಸ್ಟಾಗ್ರಾಮ್ನಲ್ಲಿ ಪ್ರಸ್ತಾಪದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ವೀಡಿಯೊವನ್ನು ಇಲ್ಲಿ ನೋಡಿ:

https://www.instagram.com/chrispainx/?utm_source=ig_embed

ರೊಸಾರಿಯೋ ಮತ್ತು ಸೈಕ್ಲಿಸ್ಟ್ ಎರಿಕ್ ಚೊಯ್ ಇಬ್ಬರೂ ನೆಲಕ್ಕೆ ಅಪ್ಪಳಿಸಿದರೂ ಯಾವುದೇ ದೊಡ್ಡ ಗಾಯಗಳಾಗಿಲ್ಲ ಎಂದು ಎನ್ಬಿಸಿ ನ್ಯೂಯಾರ್ಕ್ ವರದಿ ಮಾಡಿದೆ.

ವೀಡಿಯೊಗೆ ಕೆಲವು ಪ್ರತಿಕ್ರಿಯೆಗಳನ್ನು ಇಲ್ಲಿ ನೋಡೋಣ:

ಅಡಚಣೆಯ ಹೊರತಾಗಿಯೂ, ರಿವೇರಾ ವಿಗೊ ಅವರ ಪ್ರಸ್ತಾಪವನ್ನು ಒಪ್ಪಿಕೊಂಡರು ಮತ್ತು ಫಾಕ್ಸ್ ನ್ಯೂಸ್ ಪ್ರಕಾರ, ದಂಪತಿಗಳು 2021 ರಲ್ಲಿ ಮದುವೆಯಾಗಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights