ದೆಹಲಿಗೆ ಮಾನ್ಸೂನ್ ಮಳೆ : ಅನೇಕ ಪ್ರದೇಶಗಳಲ್ಲಿ ವರುಣನ ಅರ್ಭಟ!

ದೀರ್ಘಕಾಲದ ಬಳಿಕ ದೆಹಲಿಗೆ ಮಾನ್ಸೂನ್ ಆಗಮಿಸಿದ್ದು, ಅನೇಕ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಇಂದು ಬೆಳಿಗ್ಗೆ ಗುಡುಗು ಸಹಿತ ಭಾರೀ ಮಳೆಯಾಗಿದ್ದರಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ನಗರದ ಪಕ್ಕದ ಪ್ರದೇಶಗಳಾದ ಗುರಗಾಂವ್ ಮತ್ತು ಫರಿದಾಬಾದ್‌ನಲ್ಲೂ ಮಳೆಯಾಗಿದೆ.

ರಾಜಧಾನಿಯಲ್ಲಿ ಮಳೆ ಬಿದ್ದ ನಂತರ ಐಎಂಡಿ ಇಂದು ಮಾನ್ಸೂನ್ ಆಗಮನವನ್ನು ಘೋಷಿಸಿದ್ದು “ದೆಹಲಿ, ಎನ್‌ಸಿಆರ್ (ಬಹದ್ದೂರ್‌ಗಢ, ಗುರುಗ್ರಾಮ್, ಫರಿದಾಬಾದ್, ಲೋನಿ ಡೆಹತ್, ನೋಯ್ಡಾ) ಗೋಹಾನಾ, ಸೋನಿಪತ್, ರೋಹ್ಟಕ್ ( ಹರಿಯಾಣ)  ಖೇಕ್ರಾ (ಯುಪಿ)ದಲ್ಲಿ ” ಮುಂದಿನ 2 ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆಯನ್ನು ಐಎಂಡಿ ಟ್ವೀಟ್ ಮಾಡಿದೆ.

ಹವಾಮಾನ ಉಪಾಧ್ಯಕ್ಷ ಮಹೇಶ್ ಪಲಾವತ್ ಅವರು ಫರಿದಾಬಾದ್‌ನಿಂದ ವೀಡಿಯೊವನ್ನು ಹಂಚಿಕೊಂಡಿದ್ದು ಮಳೆ ಶೀಘ್ರದಲ್ಲೇ ಇಡೀ ದೆಹಲಿಯನ್ನು ಆವರಿಸಬಹುದು ಎಂದು ಹೇಳಿದರು.

https://twitter.com/SirishaRao17/status/1414776002035609600?ref_src=twsrc%5Etfw%7Ctwcamp%5Etweetembed%7Ctwterm%5E1414776002035609600%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Findia-news%2Fheavy-rain-in-parts-of-delhi-after-dry-spell-because-of-delayed-monsoon-2485225

ಮಾನ್ಸೂನ್ ದೇಶದ ಬಹುತೇಕ ಎಲ್ಲಾ ಭಾಗಗಳನ್ನು ತಲುಪಿದ್ದರೂ ದೆಹಲಿ, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶದ ಕೆಲವು ಭಾಗಗಳು ಮತ್ತು ಪಶ್ಚಿಮ ರಾಜಸ್ಥಾನದಿಂದ ದೂರ ಉಳಿದಿತ್ತು. ಜೂನ್ ವೇಳೆಗೆ ಮಾನ್ಸೂನ್ ಈ ಭಾಗಗಳನ್ನು ಆವರಿಸುವ ನಿರೀಕ್ಷೆಯಿದೆ ಎಂದು ಹವಾಮಾನ ಮುನ್ಸೂಚನೆ ಸಂಸ್ಥೆ ಊಹಿಸಿತ್ತು. ಒಂದು ತಿಂಗಳ ಹಿಂದೆಯೇ ಸ್ವಲ್ಪ ಕಡಿಮೆ ಆದರೆ ಅದು ಸಂಭವಿಸಿರಲಿಲ್ಲ.

ಅನುಕೂಲಕರ ಪರಿಸ್ಥಿತಿಗಳ ನಡುವೆಯೂ ದೆಹಲಿಯಲ್ಲಿ ಮಾನ್ಸೂನ್ ಆಗಮನ ಏಕೆ ವಿಳಂಬವಾಯಿತು ಎಂದು ಅಧ್ಯಯನ ಮಾಡುವುದಾಗಿ ಐಎಮ್‌ಡಿಯ ಹಿರಿಯ ವಿಜ್ಞಾನಿ ಕೆ ಜೆನಮಣಿ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights