ವಿಶ್ವದಲ್ಲಿ ಎಷ್ಟು ಹೆಕ್ಟೆರ್ ಅರಣ್ಯವಿದೆ ಗೊತ್ತಾ..? ಅತಿ ದೊಡ್ಡ 5 ಅರಣ್ಯಗಳ ಪಟ್ಟಿ!

ಇಡೀ ಜಗತ್ತಿನ ಅಳಿವು-ಉಳಿವು ಅರಣ್ಯಗಳನ್ನು ಆಧರಿಸಿದೆ. ಆದರೆ, ಇದೀಗ ಅರಣ್ಯಗಳೇ ಅಳಿವಿನ ಹಂಚಿನಲ್ಲಿವೆ. ಈಗ ಜಾಗತೀಕರಣದಿಂದಾಗಿ ವಿಶ್ವದಲ್ಲಿರುವ ಕೋಟಿ ಗಟ್ಟಲೆ ಹೆಕ್ಟೆರ್ ಕಾಡಗಳು ನಾಶಗೊಂಡಿವೆ. ಈ ಹಿನ್ನೆಲೆ, ಕಾಡನ್ನು ರಕ್ಷಣೆ ಮತ್ತು ಅರಿವು ಮೂಡಿಸುವ ಉದ್ದೇಶದಿಂದಾಗಿ 1971ರಲ್ಲಿ ವಿಶ್ವ ಅರಣ್ಯ ದಿನ ಆಚರಿಸಲು ತೀರ್ಮಾನಿಸಲಾಯಿತು.

ವಿಶ್ವದಲ್ಲಿ ಬರೋಬ್ಬರಿ 4.06 ಬಿಲಿಯನ್ ಹೆಕ್ಟೆರ್ ಅರಣ್ಯ ಪ್ರದೇಶವಿದೆ. ಅಂದರೆ ಭೂಮಿಯ ಶೇ.31ರಷ್ಟು ಭಾಗವನ್ನು ಅರಣ್ಯ ಆವರಿಸಿಕೊಂಡಿದೆ. ಈ ಪೈಕಿ ಅಮೆಜಾನ್ ಕಾಡು ವಿಶ್ವದ ಎಲ್ಲಾ ಅರಣ್ಯಗಳಿಗಿಂತ ಅತಿದೊಡ್ಡ ಅರಣ್ಯವಾಗಿದೆ.

ಅಂತೆಯೇ, ಅರ್ಧಕ್ಕೂ ಹೆಚ್ಚು ಅರಣ್ಯ ಪ್ರದೇಶಗಳು ರಷ್ಯಾ, ಬ್ರೆಜಿಲ್, ಕೆನಡಾ, ಅಮೆರಿಕ ಹಾಗೂ ಚೀನಾ ರಾಷ್ಟ್ರಗಳಲ್ಲಿದೆ.
ಕಳೆದ 5 ವರ್ಷಗಳಲ್ಲಿ ತಲಾ 28 ಮಿಲಿಯನ್ ಹೆಕ್ಟರ್ ಗಳಂತೆ ನಾಶವಾಗುತ್ತಿದೆ.

ಟಾಪ್ 5 ಅರಣ್ಯಗಳ ಪಟ್ಟಿ…!

  1. ಅಮೆಜಾನ್ ಕಾಡು: ಇದು ದಕ್ಷಿಣ ಅಮೆರಿಕದಲ್ಲಿ ಬರೋಬ್ಬರಿ 55,00,000 ಚದರ ಕಿ.ಮೀ ವಿಸ್ತಾರದಲ್ಲಿ ನೆಲೆ ಕಾಣಿದೆ. ಇಲ್ಲಿ ವಿಶ್ವದ ಬಹುದೊಡ್ಡ ಪ್ರಾಣಿಗಳು, ಮರಗಳು ಇವೆ. ಅಮೆಜಾನ್ ನಲ್ಲಿ ಅಂದಾಜು 290 ಟ್ರಿಲಿಯನ್ ಮರಗಳು ಇವೆ ಎನ್ನಲಾಗಿದೆ.
  2. ತೈಗಾ: ಕೆನಡಾ ಹಾಗೂ ನಾರ್ವೇ ಮೂಲಕ ಸಿಬೆರಿಯಾ ವರೆಗಿನ 2,90,000 ವಿಸ್ತೀರ್ಣದಲ್ಲಿರುವ ಈ ಅರಣ್ಯ ಟಾಪ್ 2ನೇ ಸ್ಥಾನದಲ್ಲಿದೆ. ಚಳಿಗಾಲದಲ್ಲಿ -40 ಡಿಗ್ರಿ ತಾಪಮಾನಕ್ಕೆ ಇಳಿಯಲಿದೆ. ಇಲ್ಲಿ ಅನೇಕ ರೀತಿಯ ನರಿಗಳು, ಕರಡಿಗಳು ವಾಸವಾಗಿದೆ.
  3. ಕಾಂಗೋ: ಆಫ್ರಿಕದಲ್ಲಿರುವ ಈ ಅರಣ್ಯವು 17,80,000 ಚದರ ಕಿ.ಮೀ. ವಿಸ್ತೀರ್ಣ ಹೊಂದಿದೆ. ಇಲ್ಲಿ ಗೊರಿಲ್ಲಾ, ಹಿಪ್ಪೋ, ಆಫ್ರಿಕನ್ ಆನೆಗಳು ವಾಸವಾಗಿದೆ.
  4. ನ್ಯು ಗ್ಯುನಿಯಾ: ಇದೊಂದು ವೈವಿದ್ಯಮಯ ಅರಣ್ಯವಾಗಿದ್ದು, ಇಲ್ಲಿ ಸುಮಾರು 1000 ಜನ ವನವಾಸಿಗಳು ಇದ್ದಾರೆ. ವಿಶ್ವ ಶೇ.5-10ರಷ್ಟು ಪ್ರಾಣಿಗಳು ಇಲ್ಲಿ ವಾಸವಿದೆ.
  5. ವಾಲ್ಡಿವಿಯನ್ ರೈನ್ ಫಾರೆಸ್ಟ್: ಇದು ಅರ್ಜೆಂಟೀನಾ ಹಾಗೂ ಚಿಲೇ ದೇಶಗಳ ನಡುವೆ ವಿಸ್ತರಿಸಿದೆ. ಇಲ್ಲಿ ಅತಿ ಸಣ್ಣ ಪ್ರಾಣಿಗಳು ವಾಸವಾಗಿರುತ್ತದೆ. ಪುಟ್ಟ ಜಿಂಕೆ, ಪುದು, ಕಾಡು ಬೆಕ್ಕು ನಂತಹ ಸಣ್ಣ ಪ್ರಾಣಿಗಳಿವೆ.

ಇದನ್ನೂ ಓದಿ: ಜಗತ್ತಿನಲ್ಲಿ 93.1 ಕೋಟಿ ಟನ್ ಆಹಾರ ಪೋಲು; ಹಸಿವಿನಿಂದ ಬಳಲುತ್ತಿರುವ ಜನಸಂಖ್ಯೆ ಎಷ್ಟು ಗೊತ್ತೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights